ವಾರ್ತಾ ಮಂಜರಿ
Trending Stories, Viral News, Gossips & Everything in Kannada

ICC T20 Worldcup: ಟಿ20 ವಿಶ್ವಕಪ್ ಗೂ ಮುನ್ನ ಭಾರತ ತಂಡಕ್ಕೆ ದೊಡ್ಡ ಆಘಾತ, ಸ್ಟಾರ್ ಆಲ್ ರೌಂಡರ್ ವಿಶ್ವಕಪ್ ನಿಂದ ಹೊರಕ್ಕೆ

126

ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ ರವೀಂದ್ರ ಜಡೇಜಾ ವಿರುದ್ಧ ಕೋಪಗೊಂಡಿದ್ದು ಮಂಡಳಿಯ ಅಸಮಾಧಾನಕ್ಕೆ ಜಡೇಜಾ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ ಎನ್ನಬಹುದು. ವಾಸ್ತವವಾಗಿ ಜಡೇಜಾ ಅವರು ಗಾಯದ ಕಾರಣ ಏಷ್ಯಾಕಪ್‌ ಅರ್ಧದಿಂದ ತಂಡವನ್ನು ತೊರೆಯಬೇಕಾಗಿದ್ದು ಇದರಿಂದಾಗಿ ಭಾರತ ಉಳಿದ ಪಂದ್ಯಗಳಲ್ಲಿ ಸೋತು ಏಷ್ಯಾಕಪ್‌ನಿಂದ ಹೊರಬೀಳಬೇಕಾಯಿತು. ಈಗ ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ ತಮ್ಮದೇ ಆದ ನಿರ್ಲಕ್ಷ್ಯದಿಂದ ಜಡೇಜಾ T20 ವಿಶ್ವಕಪ್‌ನಿಂದ ಹೊರಗುಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಹೌದು ವಾಸ್ತವವಾಗಿ ಇತ್ತೀಚೆಗೆ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಹೀಗಾಗಿ ಬೇಗ ಗುಣಮುಖರಾಗಲು ಜಡೇಜಾರನ್ನು ದುಬೈನಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವಂತೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿತ್ತು. ಇನ್ನು ಆದರೆ ಇದೆಲ್ಲವನ್ನು ಕಡೆಗಣಿಸಿದ ಜಡೇಜಾ ರವರು ಮತ್ತೊಮ್ಮೆ ಇಂಜುರಿಗೆ ತುತ್ತಾಗಿದ್ದಾರೆ.

Ravindra Jadeja gives BIG update on injury, set to make comeback after... | Cricket News | Zee News

ಇನ್ನು ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ದುಬೈನಲ್ಲಿ ಟೀಮ್ ಇಂಡಿಯಾ ವಾಸ್ತವ ಹೂಡಿದ್ದ ಹೋಟೆಲ್‌ನಲ್ಲಿ ರವರು ಜಡೇಜಾ ಅವರಿಗೆ ಕೆಲವು ನೀರು ಆಧಾರಿತ ತರಬೇತಿ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿಲಾಗಿತ್ತು. ಹೌದು ಆದರೆ ವೈದ್ಯರು ನೀಡಿದ ಸಲಹೆಯನ್ನು ಕಡೆಗಣಿಸಿದ ಜಡೇಜಾ ನೀರಿನಲ್ಲಿ ಸ್ಕೀ ಬೋರ್ಡ್‌ ಆಡುವ ವೇಳೆ ಜಾರಿ ಬಿದ್ದು ಮೊಣಕಾಲು ಇಂಜುರಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ವೈದ್ಯರು ನೀಡಿದ ಸಲಹೆಯಲ್ಲಿ ಈ ಸ್ಕೀ ಬೋರ್ಡ್‌ ಚಟುವಟಿಕೆ ಇರಲಿಲ್ಲ. ಇದ್ದರಿಂದ ಮಾರ್ಗಸೂಚಿಗಳನ್ನು ಅನುಸರಿಸದ ಜಡೇಜಾ ಅವರ ಮೇಲೆ ಬಿಸಿಸಿಐ ಕೋಪಗೊಂಡಿದೆ ಎಂದು ವರದಿಯಾಗಿದೆ.

ಇನ್ನು ಏಷ್ಯಾಕಪ್‌ನಿಂದ ಹೊರಬಂದ ಬಳಿಕ ಜಡೇಜಾ ಮುಂಬೈಗೆ ಮರಳಿದ್ದು ಅಲ್ಲಿ ಅವರು ಬಿಸಿಸಿಐ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಜಡೇಜಾ ಗಾಯಗೊಂಡ ನಂತರ ಸ್ಕೀ ಬೋರ್ಡ್ ಚಟುವಟಿಕೆ ಬೇಕಿತ್ತಾ ಎಂಬ ಪ್ರಶ್ನೆ ಈಗ ಎದ್ದಿದ್ದು ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೂ ಮುನ್ನ ಟೀಂ ಇಂಡಿಯಾದ ಪ್ರಮುಖ ಆಟಗಾರ ಸಾಹಸ ಚಟುವಟಿಕೆ ನಡೆಸುವುದು ಅನಿವಾರ್ಯವಾಗಿತ್ತಾ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಕೆಲವು ಬಿಸಿಸಿಐ ಅಧಿಕಾರಿಗಳು ಕೂಡ ಜಡೇಜಾ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

Ravindra Jadeja - Rahul Dravid reacts to Ravindra Jadeja's knee injury - Telegraph India

ಆದರೆ ಜಡೇಜಾ ರವರು ಹೇಗೆ ಗಾಯ ಮಾಡಿಕೊಂಡರು ಎಂಬುದರ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜಡೇಜಾ ಅವರ ಗಾಯದ ಮೇಲೆ ರಾಹುಲ್ ದ್ರಾವಿಡ್ ತಮ್ಮ ಕೂಲ್ ಕಳೆದುಕೊಳ್ಳದಿರುವುದು ಸಹ ಆಶ್ಚರ್ಯಕರವಾಗಿದೆ ಎಂದು ಮೂಲಗಳು ಹೇಳುತ್ತಿವೆ. ಈ ಎಲ್ಲದರ ನಡುವೆ ಈಗ ಜಡೇಜಾ ಇಲ್ಲದೆ ಟೀಂ ಇಂಡಿಯಾ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಕ್ಕೆ ಹೋಗಲಿದೆ ಎಂದು ವರದಿಗಳು ಹರಿದುಬರುತ್ತಿವೆ.