ಮೂರು ವರುಷಗಳ ಹಿಂದೆ ಅಂದರೆ 2019ರ ನವೆಂಬರ್ನಲ್ಲಿ ಈಡನ್ ಗಾರ್ಡನ್ಸ್ನಲ್ಲಿ ನಡೆದ ಡೇ-ನೈಟ್ ಟೆಸ್ಟ್ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ರವರು ನಂತರ ಬರೋಬ್ಬರಿ 1020 ದಿನಗಳ ಬಳಿಕ ಮೂರಂಕಿಯ ಸ್ಕೋರ್ ಮಾಡಿದ್ದಾರೆ. ಕಳಪೆ ಲಯದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ರವರು ಏಷ್ಯಾ ಕಪ್ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಭರ್ಜರಿ ಕಮ್ಬ್ಯಾಕ್ ಮಾಡಿದ್ದು ತಂಡದ ಪರ 5 ಇನಿಂಗ್ಸ್ಗಳಲ್ಲಿ 276 ರನ್ ಸಿಡಿಸಿ ಶ್ರೇಷ್ಠ ಬ್ಯಾಟರ್ ಎನಿಸಿದರು. ಪ್ರಮುಖವಾಗಿ ಅಫಘಾನಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿ ತಮ್ಮ ಶತಕಗಳ ಬರ ನೀಗಿಸಿಕೊಂಡರು.
ಸದ್ಯ ಈ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ರವರು ವಿರಾಟ್ ಕೊಹ್ಲಿ ಹೊರತಾಗಿ ಬೇರೆ ಯಾವ ಬ್ಯಾಟ್ಸ್ಮನ್ನಿಂದಲೂ ಕೂಡ ಶತಕ ಬಾರಿಸದೆ ಇಷ್ಟು ದಿನಗಳ ಕಾಲ ಭಾರತ ತಂಡದಲ್ಲಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ವಿಶ್ವಾಸ ಸಂಪಾದಿಸಿದ್ದು ಅದರಿಂದಲೇ ಇಷ್ಟು ಸಾಲು ಸಾಲು ಅವಕಾಶ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಶತಕ ಬಾರಿಸದೆ ಮೂರು ವರ್ಷಗಳು ಕಳೆದಿದೆ (1019 ದಿನಗಳು) ಎಂಬುದು ವಿರಾಟ್ ಕೊಹ್ಲಿಗೂ ಚೆನ್ನಾಗಿ ತಿಳಿದಿದೆ. ಹೌದು ಮೂರು ತಿಂಗಳಲ್ಲ ಮೂರು ವರ್ಷ ಬಹಳಾ ದೊಡ್ಡ ಸಮಯವಾಗಿದೆ. ಇಲ್ಲಿ ನಾನು ವಿರಾಟ್ ಕೊಹ್ಲಿ ಅವರನ್ನು ಟೀಕೆ ಮಾಡುತ್ತಿಲ್ಲ. ಆದರೆ ಅವರು ಈ ಹಿಂದೆ ಹರಿಸಿರುವ ರನ್ ಹೊಳೆಯ ಕಾರಣ ಟೀಮ್ ಮ್ಯಾನೇಜ್ಮೆಂಟ್ನಿಂದ ಅಷ್ಟು ಬೆಂಬಲ ಸಿಕ್ಕಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೇರೆ ಯಾವ ಆಟಗಾರ ಸಹ ಶತಕ ಬಾರಿಸದೆ ಇಷ್ಟು ದಿನಗಳ ಕಾಲ ಭಾರತ ತಂಡದಲ್ಲಿ ಉಳಿಯಲು ಖಂಡಿತಾ ಸಾಧ್ಯವಿಲ್ಲ. ಹೌದು ಇದು ಒಂದಲ್ಲಾ ಒಂದು ದಿನ ಆಗಲೇ ಬೇಕಿದ್ದು ವಿರಾಟ್ ಖುದ್ದಾಗಿ ಈ ವಿಶೇಷ ಅವಕಾಶಗಳನ್ನು ಅವರ ಪ್ರದರ್ಶನಗಳ ಮೂಲಕ ಸಂಪಾದಿಸಿದ್ದಾರೆ ಎಂದಿದ್ದಾರೆ.
ಇನ್ನು ಕೇವಲ 53 ಎಸೆತಗಳಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ರವರು ಕೊನೆಗೆ 61 ಎಸೆತಗಳಲ್ಲಿ 12 ಫೋರ್ ಮತ್ತು 6 ಸಿಕ್ಸರ್ಗಳೊಂದಿಗೆ ಅಜೇಯ 122 ರನ್ ಬಾರಿಸಿದ್ದು ಕೊಹ್ಲಿ ಅಬ್ಬರದೊಂದಿಗೆ ಭಾರತ ತಂಡ ತನ್ನ 20 ಓವರ್ಗಳಲ್ಲಿ 212/2 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಅಫಘಾನಿಸ್ತಾನ ತಂಡ 111/8 ರನ್ ಗಳಿಸಿ 101 ರನ್ಗಳಿಂದ ಸೋಲಿಗೆ ಶರಣಾಯಿತು. ಆದರೆ ಸೂಪರ್-4 ಹಂತದಲ್ಲಿ ಭಾರತ ಮತ್ತು ಅಫಘಾನಿಸ್ತಾನ ಎರಡೂ ತಂಡಗಳು ಎರಡು ಸೋಲುಂಡ ಕಾರಣ ಫೈನಲ್ ರೇಸ್ನಿಂದ ಹೊರಬಿದ್ದಿದ್ದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಫೈನಲ್ಗೆ ತಲುಪಿವೆ.