ವಾರ್ತಾ ಮಂಜರಿ
Trending Stories, Viral News, Gossips & Everything in Kannada

Astrology: ಚುಂಬಿಸುವುದರಲ್ಲಿ ಈ ನಾಲ್ಕು ರಾಶಿಯವರು ನಿಸ್ಸಿಮರು, ಆ ನಾಲ್ಕು ರಾಶಿಗಳು ಯಾವುವು ಗೊತ್ತಾ?

727

ಸಾಮಾನ್ಯವಾಗಿ ಸ್ತ್ರೀ ಪುರುಷರ ನಡುವಿನ ಆಕರ್ಷಣೆ ಪ್ರಕೃತಿ ಸಹಜವಾದುದು. ಇದು ಎಲ್ಲ ಜೀವಿಗಳಲ್ಲೂ ಉಂಟು, ನಿಜ. ಆದರೆ ಇತರ ಜೀವಿಗಳಲ್ಲಿ ಇದು ಸಂತಾನೋತ್ಪತ್ತಿಗಾಗಿ ಇರುವ ಸಹಜವಾದ ದೈಹಿಕ ಮಿಲನಕ್ಕಷ್ಟೇ ಸಿಮೀತವಾಗಿದ್ದರೆ, ಮಾನವರಲ್ಲಿ ಕಲಾತ್ಮಕವಾಗಿ ವಿಕಾಸ ಹೊಂದಿದೆ, ಮನೋದೈಹಿಕ ವಲಯಗಳೆರಡರಲ್ಲೂ ಇದು ವಿಹರಿಸುತ್ತದೆ. ಸಾಮಾನ್ಯವಾಗಿ ಸತಿ ಪತಿಗಳಿಬ್ಬರೂ ಸುಖವಾಗಿರಲು ಮಾನಸಿಕವಾಗಿ ಜೊತೆಯಾಗಿರುವುದರ ಜೊತೆಗೆ ಶೃಂಗಾರ ಎನ್ನುವುದು ಅಗತ್ಯವಾಗಿ ಬೇಕು. ಈ ಕುರಿತು ಮಾತನಾಡಲು ಸಹಜವಾಗಿ ಎಲ್ಲರೂ ಹಿಂದೇಟು ಹಾಕುತ್ತಾರೆ. ಆದರೆ ಈ ನಾಲ್ಕು ರಾಶಿಯವರು ಮಾತ್ರ ಸಂಗಾತಿಯ ಪಾಲಿಗೆ ಅವರೆಷ್ಟು ರೊಮ್ಯಾಂಟಿಕ್ ಆಗಿರುತ್ತಾರೆ ಎನ್ನುವುದು ಚುಂಬನದಲ್ಲಿಯೇ ತಿಳಿಯುತ್ತದೆ. ಈ ಮುತ್ತು ಕೊಡುವುದು ಒಂದು ಕಲೆಯೇ ಎನ್ನ ಬಹುದು. ಸಂಬಂಧಗಳಲ್ಲಿ ಈ ಪರಸ್ಪರರು ಮುತ್ತು ಕೊಡುವುದು ಮುಖ್ಯವಾಗಿರುತ್ತದೆ. ಈ ಚುಂಬನ ಸಂಬಂಧವನ್ನು ಮತ್ತಷ್ಟು ಬಿಗಿಯಾಗಿಸುತ್ತವೆ. ಆದರೆ ಈ ರಾಶಿಯವರಿಗೆ ಮುತ್ತು ಕೊಡುವ ಕಲೆಯೂ ಬಹಳ ಚೆನ್ನಾಗಿಯೇ ತಿಳಿದಿರುತ್ತವೆ. ಆ ನಾಲ್ಕು ರಾಶಿಗಳು ಯಾವುದೆಲ್ಲಾ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಮೊದಲನೇಯದಾಗಿ ವೃಷಭ ರಾಶಿ. ಈ ವೃಷಭ ರಾಶಿಯವರು ತಮ್ಮ ಚುಂಬನಗಳನ್ನು ಭಾವೋದ್ರಿಕ್ತ ಮತ್ತು ತೀವ್ರವಾಗಿಡಲು ಬಯಸುತ್ತಾರೆ. ಚುಂಬನದಿಂದ ತಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತಾರೆ. ಈ ರಾಶಿಯನ್ನು ಶುಕ್ರ ಆಳುವುದರಿಂದ ಇವರು ಚುಂಬನ ಪ್ರವೀಣರು ವೃಷಭ ರಾಶಿಯು ಉತ್ಸಾಹಭರಿತರಾಗಿರುವ ಕಾರಣ, ತನ್ನ ಜೊತೆಗಾರರ ಮನಸ್ಸನ್ನು ಗೆಲ್ಲಲು ಬಯಸುತ್ತಾರೆ. ಹೀಗಾಗಿ ಜೊತೆಗಾರರಿಗೆ ಚುಂಬಿಸುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಇವರ ಚುಂಬನಗಳು ಹೆಚ್ಚು ಶಕ್ತಿಯುತವಾಗಿರುತ್ತವೆ ಮತ್ತು ಮರೆಯಲು ಕಷ್ಟವಾಗುತ್ತವೆ. ಮುತ್ತು ನೀಡುವುದರ ಮೂಲಕ ತನ್ನ ಜೊತೆಗಾರರನ್ನು ಖುಷಿಯಾಗಿರುಸುತ್ತಾರೆ.

ಎರಡನೇಯದಾಗಿ ಸಿಂಹ ರಾಶಿ, ಈ ರಾಶಿಯವರು ತನ್ನ ಜೊತೆಗಾರರಿಗೆ ಚುಂಬಿಸಿದ ನಂತರದಲ್ಲಿ ಆ ವ್ಯಕ್ತಿಯು ತಣ್ಣನೆಯ ಬೆವರುವಿಕೆ ಅನುಭವವನ್ನು ತರಿಸುತ್ತಾರೆ. ಇವರ ಚುಂಬನವು ಪ್ರಲೋಭನಕಾರಿ ಮತ್ತು ಕಾಮಪ್ರಚೋದಕವಾಗಿರುತ್ತದೆ. ಸಿಂಹ ರಾಶಿಯ ಸೂಕ್ಷ್ಮ ಪ್ರಜ್ಞೆಯ ಕಾರಣದಿಂದ ತಮ್ಮ ಪ್ರೇಮಿ ಹೇಗೆ ಬಯಸುತ್ತಾರೆಯೋ ಹಾಗೆ ಚುಂಬಿಸಬಹುದು. ತನಗೆ ಬೇಕಾದನ್ನು ಚುಂಬಿಸುವ ಮೂಲಕ ಪಡೆದುಕೊಳ್ಳುತ್ತಾರೆ ಈ ರಾಶಿಯವರು. ಕಿಸ್ಸಿಂಗ್ ಕಲೆಯೂ ಇವರಿಗೆ ಚೆನ್ನಾಗಿಯೇ ತಿಳಿದಿದೆ. ಈ ರಾಶಿಯವರು ನೀಡುವ ಮುತ್ತಿನ ಮೂಲಕವೇ ತನ್ನ ಸಂಗಾತಿಯನ್ನು ದೈಹಿಕ ಹಾಗೂ ಮಾನಸಿಕವಾಗಿ ತನ್ನ ನಿಯಂತ್ರಣದಲ್ಲಿಡುವ ಸಾಮರ್ಥ್ಯ ಈ ರಾಶಿಯವರಿಗೆ ಇದೆ.

ಮೂರನೇಯದಾಗಿ ಧನು ರಾಶಿ.. ಈ ರಾಶಿಯವರಿಗೆ ಹೃದಯ ಮತ್ತು ಮನಸ್ಸನ್ನು ಗೆಲ್ಲಲು ತಮ್ಮ ಫ್ಲರ್ಟಿಂಗ್ ವಿಧಾನವನ್ನು ಹೇಗೆ ಮಾರ್ಪಡಿಸಬೇಕೆಂದು ಚೆನ್ನಾಗಿ ತಿಳಿದಿದೆ. ಅದರಲ್ಲಿಯೂ ಅತ್ಯುತ್ತಮ ಚುಂಬನಕಾರರು ಧನು ರಾಶಿಯವರು. ಈ ರಾಶಿಯವರ ಶಾಂತ ವರ್ತನೆಯೇ ಇದಕ್ಕೆ ಕಾರಣವೆನ್ನಬಹುದು. ಮಾತನಾಡುತ್ತಾ, ನಿಧಾನವಾಗಿಯೇ ವಿಷಯವನ್ನು ರೊಮ್ಯಾಂಟಿಕ್ ಆಗಿಸುವುದು ಇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು ದಿನಚರಿಯನ್ನು ಇಷ್ಟಪಡದ ಕಾರಣ, ಅವರು ಯಾವಾಗಲೂ ತಮ್ಮ ಚುಂಬನ ಸೇರಿದಂತೆ ಎಲ್ಲದರಲ್ಲೂ ತಮ್ಮ ಪಾಲುದಾರರೊಂದಿಗೆ ಸಂಬಂಧವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ.

ನಾಲ್ಕನೇಯದಾಗಿ ವೃಶ್ಚಿಕ ರಾಶಿ, ಈ ರಾಶಿಯವರು ತಮ್ಮ ತೀವ್ರತೆ ಮತ್ತು ಬದ್ಧತೆಗೆ ಹೆಸರುವಾಸಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾವು ನಿಜವಾದ ಪ್ರೀತಿಯಲ್ಲಿದ್ದಾರೆ ಎಂದು ಖಚಿತವಾಗಿದ್ದರೆ ಚುಂಬಿಸುತ್ತಾರೆ. ಇವರ ಚುಂಬನವು ತೀವ್ರವಾಗಿರುತ್ತದೆ, ಬಹಳ ಉತ್ಸಾಹಭರಿತರಾಗಿರುತ್ತಾರೆ. ತಮ್ಮ ಪಾಲುದಾರರಿಗೆ ಇಷ್ಟವಾಗುವಂತೆ ಹೇಗೆ ಚುಂಬಿಸಬೇಕು ಎನ್ನುವುದು ಈ ರಾಶಿಯವರಿಗೆ ಚೆನ್ನಾಗಿ ಗೊತ್ತಿದೆ.