ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಾಡುಹಗಲೇ ಅಂಗಡಿ ಮುಂದೆ ಕಾಣಿಸಿಕೊಂಡ ಹುಲಿ…ಸಿಸಿಟಿವಿ ವಿಡಿಯೋ

23,277
Join WhatsApp
Google News
Join Telegram
Join Instagram

ಈ ಮನುಷ್ಯ(Man) ಯಾವಾಗ ಅರಣ್ಯ(Forest) ಮಿತಿ ಪ್ರವೇಶಿಸಿದನೋ ವನ್ಯ ಪ್ರಾಣಿಗಳು-ಮಾನವ ಸಂಘರ್ಷ
(Animal-Human Conflict) ಮಿತಿ ಮೀರಿಬಿಟ್ಟಿದೆ. ಹೌದು ಕಾಡಂಚಿನ ಜನ ಇಲಿ (Rat) ಹೋದರೂ ಹುಲಿ (Tiger) ಹೋಯ್ತು ಎಂದು ಬೆಚ್ಚಿಬೀಳುವಂತಾಗಿದೆ. ರಾತ್ರಿನ ಹಗಲು ಅನ್ನದೇ ವನ್ಯಜೀವಿಗಳು ಮಾನವ ಜೀವಿಗಳ ವಸತಿ ಪ್ರದೇಶಗಳನ್ನು ಎಡತಾಕುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳೆಲ್ಲಾ ನಾಡಿನತ್ತ ಆಗಮಿಸತೊಡಗಿದ್ದು ಕಳೆದ ಒಂದು ತಿಂಗಳ ಹಿಂದೆ ಕೆಆರ್ಎಸ್ ಬೃಂದಾವನದಲ್ಲಿ(KRS Brundavana) ಪ್ರತ್ಯಕ್ಷವಾಗಿರುವ ಚಿರತೆ (Leopard) ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಎತ್ತ ಬೋನ್ ಇಟ್ಟರೂ ಬೋನಿಗೆ ಬೀಳದೆ ಜನರನ್ನು ಆತಂಕದಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ. ಅಲ್ಲದೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಜೋಡಿ ಹುಲಿಗಳು (Tiger) ಕಾಣಿಸಿಕೊಂಡಿದ್ದು ರೈತರನ್ನು ಬೆಚ್ಚಿ ಬೀಳಿಸಿವೆ.

ಇನ್ನು ಮೈಸೂರಿನ ಖಾಸಗಿ ಕಾಲೇಜೊಂದರ ಆವರಣಕ್ಕೆ ಚಿರತೆಯೊಂದು ಮಧ್ಯಾಹ್ನವೇ ನುಗ್ಗಿತು. ಚಿರತೆ ಕಾಲೇಜು ಆವರಣ ಸೇರಿಕೊಂಡಿದೆ ಎನ್ನುವ ವಿಚಾರ ಎಲ್ಲೆಡೆ ಹರಡಿ ನೂರಾರು ಜನ ಅಲ್ಲಿ ಜಮಾಯಿಸಿಯೇ ಬಿಟ್ಟರು. ಸ್ಥಳಕ್ಕೆ ಬಂದ ಪೊಲೀಸರಿಗೂ ಚಿರತೆ ಹಿಡಿಯಲು ಸಹಕರಿಸಬೇಕೋ, ಕುತೂಹಲಿ ಜನರನ್ನು ನಿಯಂತ್ರಿಸಬೇಕೋ ಎನ್ನುವ ಗೊಂದಲ. ಅಷ್ಟರಲ್ಲಿ ಚಿರತೆಗೆ ಕಲ್ಲು ಹೊಡೆದವರೆಷ್ಟೇ. ತಮ್ಮ ಬಳಿ ಇಟ್ಟುಕೊಂಡಿದ್ದ ಕೋಲಿನಿಂದ ತಿವಿದು ಖುಷಿಪಟ್ಟವರೂ ಇದ್ದರು. ಕೊನೆಗೆ ಅರಣ್ಯ ಇಲಾಖೆಯವರು ಸ್ಥಳೀಯ ಪೊಲೀಸರ ಸಹಕಾರದಿಂದಲೇ ಚಿರತೆ ಹಿಡಿಯುವಲ್ಲಿ ಯಶಸ್ವಿಯಾದರು.

ಭಾರತದಲ್ಲಿ ಈಗ ವನ್ಯಜೀವಿ -ಮಾನವರ ನಡುವೆ ಸಂಘರ್ಷ ಸಾಮಾನ್ಯವಾಗುತ್ತಿದೆ. ಅರಣ್ಯಕ್ಕೆ ಹೊಂದಿಕೊಂಡಿದ್ದ ಪ್ರದೇಶದಲ್ಲಿ ವನ್ಯಜೀವಿಗಳನ್ನು ಕಂಡು ಹೆದರುವ ಕಾಲವಿತ್ತು. ಈಗ ನಗರ ಪ್ರದೇಶಗಳತ್ತಲೇ ವನ್ಯಜೀವಿಗಳು ಮುಖ ಮಾಡಿವೆ. ಇದರಲ್ಲಿ ಚಿರತೆಗಳ ಸಂಖ್ಯೆಯೇ ಕೊಂಚ ಹೆಚ್ಚು. ಚಿರತೆಯ ನಡವಳಿಕೆ ಗಮನಿಸಿದರೆ ಅದೊಂದು ಅತ್ಯಂತ ನಾಚಿಕೆ ಸ್ವಭಾವದ ಪ್ರಾಣಿ. ಮನುಷ್ಯ ಮಾತ್ರವಲ್ಲದೇ ಯಾವುದೇ ಪ್ರಾಣಿಯಿಂದಲೂ ದೂರ ಇರಲು ಬಯಸುವಂಥ ಗುಣ ಅದರದ್ದು.

ವನ್ಯಜೀವಿ ನಗರ ಪ್ರದೇಶಕ್ಕೆ ನುಗ್ಗಿತು ಎನ್ನುವ ವಿಚಾರ ತಿಳಿಯುತ್ತಲೇ ಕುತೂಹಲಕ್ಕಾದರೂ ಅತ್ತ ಕಡೆ ಹೋಗೋಣ ಎನ್ನುವವರ ಸಂಖ್ಯೆ ಹೆಚ್ಚು.ಹೌದು ಜನ ಹೆಚ್ಚಾಗುತ್ತಲೇ ನಿಯಂತ್ರಣವೂ ಕಷ್ಟವಾಗಿ ವನ್ಯಜೀವಿ ಸೆರೆ ಹಿಡಿಯುವುದು ದುಸ್ತರವಾಗುವಂಥ ಸನ್ನಿವೇಶ ಇರುತ್ತದೆ.

ನಾಲ್ಕು ದಶಕದಲ್ಲಿ ಇಂಥಹ ಘಟನೆಗಳನ್ನು ಹಲವು ಬಾರಿ ನಡೆದಿದ್ದು ಜನ ಪ್ರಾಣಿಯ ಹಿಂದೆ ಇಲ್ಲವೇ ಕಾರ್ಯಾಚರಣೆ ನಡೆಸುವವರನ್ನು ಹಿಂಬಾಲಿಸಿಕೊಂಡು ಹೋಗುವುದರಿಂದ ಅಡಚಣೆಯೇ ಹೆಚ್ಚು. ಇದಕ್ಕಾಗಿ ಜನರ ಮಾತು ಕೇಳುವ ಸ್ಥಳೀಯ ನಾಯಕರು ಪೊಲೀಸರ ಮಾತ್ರವೇ ಅತಿ ಮುಖ್ಯವಾಗುತ್ತದೆ. ಜನರಿಗೂ ತಿಳಿವಳಿಕೆ ಮತ್ತು ತರಬೇತಿಗಳನ್ನು ಅರಣ್ಯ ಇಲಾಖೆ ಕಾಲ ಕಾಲಕ್ಕೆ ನೀಡುವುದು ಒಳ್ಳೆಯದು. ಸದ್ಯ ಇದೀಗ ಹುಲಿಯೊಂದು ನಾಡಿಗೆ ನುಗಿದ್ದು ಯಾವ ರೀತಿ ದಾಳಿ ಮಾಡಿದೆ ನೀವೆ ನೋಡಿ.