ಹಾಸ್ಯ ನಟ ಚಿಕ್ಕಣ್ಣ(Chikkanna) ರವರು ಇಂದಿನ ಪೀಳಿಗೆಯ ಕನ್ನಡ ಚಿತ್ರರಂಗದ(KFI) ಪ್ರಮುಖ ಹಾಸ್ಯನಟರಾಗಿದ್ದಾರೆ ಎನ್ನಬಹುದು.ಹೌದು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕನ್ನಡ ಸಿನಿಮಾಳಲ್ಲಿಯೂ(kannada Movies) ಸಹ ಚಿಕ್ಕಣ್ಣ ಇರುತ್ತಾರೆ. ಕನ್ನಡ ಸಿನಿಪ್ರಿಯರು ಇವರ ಹಾಸ್ಯ ಭರಿತ ನಟನೆಯನ್ನು ಬಹಳ ಇಷ್ಟಪಟ್ಟು ವೀಕ್ಷಿಸುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ(Fans) ಬಳಗವನ್ನು ಕೂಡ ಗಳಿಸಿದ್ದಾರೆ ಚಿಕ್ಕಣ್ಣ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ (Super Stars) ಸಿನಿಮಾಗಳಲ್ಲೂ ಕೂಡ ಚಿಕ್ಕಣ್ಣ ಇರಲಿದ್ದು ಸದ್ಯ ಇದೀಗ ಮೊದಲ ಬಾರಿಗೆ ಹೀರೋ ಆಗಿದ್ದಾರೆ ಚಿಕಣ್ಣ.
ಇನ್ನು ಚಿಕ್ಕಣ್ಣ ಅವರು ಮೈಸೂರಿನಲ್ಲಿ (Mysore) ಹಾಸ್ಯ ಕಾರ್ಯಕ್ರಮಗಳಲ್ಲಿ ದೃಷ್ಟಿ ಕಲಾವಿದೆಯೊಂದಿಗೆ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ಬಳಿಕ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು (Comedy Khiladigalu) ಹಾಗೂ ಉದಯ ಟಿವಿಯಲ್ಲಿ (Udaya TV) ಪ್ರಸಾರವಾದ ಪ್ರಾಂಕ್ (Prank) ಶೋನಲ್ಲಿ ಕಾಣಿಸಿಕೊಂಡಿದ್ದು ಬಳಿಕ ಯಶ್ (Yash) ರವರು ಕನ್ನಡ ಚಿತ್ರರಂಗದ ವಜ್ರ ಮಹೋತ್ಸವ (Vajra Mahotsava) ಸಂಭ್ರಮಾಚರಣೆಯಲ್ಲಿ ಚಿಕ್ಕಣ್ಣ ಅವರ ನಟನೆಯನ್ನು ಗಮನಿಸಿ 2011 ರ ತೆರೆಕಂಡ ಕಿರಾತಕ (Kirataka) ಚಿತ್ರದಲ್ಲಿ ಅಭಿನಯಿಸಲು ಚಿಕ್ಕಣ್ಣ ಅವರಿಗೆ ಅವಕಾಶ ಕೊಡಿಸುತ್ತಾರೆ.
ಅಲ್ಲಿಂದ ಚಿಕ್ಕಣ್ಣ ಅವರ ಸಿನಿಪುಯಣ ಆರಂಭವಾಗಿದ್ದು ನಂತರ ನಟಿಸಿದ ರಾಜಾ ಹುಲಿ ಮತ್ತು ಆಧ್ಯಕ್ಷ ಚಿತ್ರದಲ್ಲಿನ ಪಾತ್ರಗಳಿಂದ ಬಹಳಷ್ಟು ಜನಪ್ರಿಯತೆ ಪಡೆದರು. ನಟನೆಯ ಜೊತೆಗೆ ಕುಂಟೆಬಿಲ್ಲೆ ಹಾಡಿಗಾಗಿ ಸಾಹಿತ್ಯವನ್ನು ಬರೆದಿದ್ದಾರೆ ಹಾಗೂ ನನ್ನ ನಿನ್ನ ಪ್ರೇಮಕಥೆ ಚಿತ್ರಕ್ಕೆ ಒಂದು ಹಾಡನ್ನು ಸಹ ಹಾಡಿದ್ದಾರೆ. ಕಿರಾತಕ ಮಾಸ್ಟರ್ ಪೀಸ್ ಶಾರ್ಪ್ ಶೂಟರ್ ರಾಮ್ ಲೀಲಾ ಐರಾವತ ಒಡೆಯ ಸೀತಾರಾಮ ಕಲ್ಯಾಣ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಕನ್ನಡದ ಪ್ರಮುಖ ನಟರಾದ ದರ್ಶನ್ ಸುದೀಪ್ ಪುನೀತ್ ರಾಜ್ ಕುಮಾರ್ ಯಶ್ ದಿಗಂತ್ ಸೇರಿದಂತೆ ಬಹುತೇಕ ಎಲ್ಲಾ ನಟರೊಂದಿಗೂ ತೆರೆ ಹಂಚಿಕೊಂಡಿದ್ದಾರೆ ಚಿಕ್ಕಣ್ಣ.
ಇನ್ನು ಇಷ್ಟು ವರ್ಷಗಳ ಕಾಲ ತೆರೆಮೇಲೆ ಹಾಸ್ಯನಟನ ಪಾತ್ರದಲ್ಲಿ ಅಭಿನಯಿಸಿದ ಬಳಿಕ ಇದೀಗ ಚಿಕ್ಕಣ್ಣ ಅವರು ಮೊದಲ ನಾಯಕನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದು ಚಿಕಣ್ಣ ಅವರು ನಾಯಕನಾಗಿರುವ ಸಿನಿಮಾಗೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ. ಹೌದು ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದ್ದು ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ಆಯ್ಕೆ ಆಗಿರುವುದು ಮತ್ಯಾರು ಅಲ್ಲ ಬಹಳ ಫೇಮಸ್ ಆಗಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಾಯಕಿ ಎಡವಟ್ಟು ಲೀಲಾ ಎಂದೇ ಫೇಮಸ್ ಆಗಿರುವ ಮಲೈಕಾ ಅವರು. ಇನ್ನು ಇದೆಲ್ಲದರ ನಡುವೆ ಚಿಕ್ಕಣ್ಣ ಸ್ಟಾರ್ ಸುವರ್ಣ ವಾಹಿನಿಯ ಗಾನಬಜಾನ ಸೀಸನ್ 3 ಗ್ರಾಂಡ್ ಫಿನಾಲೆಗೆ ಬಂದಿದ್ದು ಇಲ್ಲಿ ಫಾರಿನ್ ಹುಡುಗಿ ಜೊತೆ ವಿಶೇಷ ಹಾಡಿಗೆ ನೃತ್ಯ ಮಾಡಿದ್ದಾರೆ. ಆ ವಿಶೇಷ ಹಾಡು ಯಾವುದು ಗೊತ್ತಾ? ಕೆಳಗಿಮ ವಿಡಿಯೋ ನೋಡಿ ಬಿಕ್ಕಿ ಬಿಕ್ಕಿ ನಗುತ್ತೀರ.