ನಮ್ಮ ಕರ್ನಾಟಕದಲ್ಲೇ (Karnataka) ಸಾಕಷ್ಟು ಪ್ರತಿಭೆಗಳಿದ್ದರೂ ಕೂಡ ಸಾಮಾನ್ಯವಾಗಿ ಪರಭಾಷೆಯಿಂದ ನಟ-ನಟಿಯರನ್ನು (Actors) ಕರೆತರಲಾಗುತ್ತದೆ ಎಂಬ ಆರೋಪ ಮೊದಲಿಂದಲೂ ಕೂಡ ಕೇಳಿಬರುತ್ತಿದೆ. ಹೌದು ಇದಕ್ಕೆ ಕಾರಣ ಸೂಕ್ತ ವೇದಿಕೆಯ(Stage) ಕೊರತೆಯಾಗಿದ್ದು ಇದರಿಂದಲೇ ಬಹಳಷ್ಟು ಪ್ರತಿಭೆಗಳು ಒಳ್ಳೆ ಪ್ರತಿಭೆ ಇದ್ದರೂ ಸಹ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಹಿನಿಗಳು (Channels) ಇಂತಹ ಎಲೆ ಮರೆ ಕಾಯಿಯಂತೆ ಇರುವ ಪ್ರತಿಭೆಗಳಿಗಾಗೇ ಅನೇಕ ರಿಯಾಲಿಟಿ ಶೋಗಳನ್ನು(Reality Show) ನಡೆಸುತ್ತಿದ್ದು ಅದರಲ್ಲಿ ಕಾಮಿಡಿ ಕಿಲಾಡಿಗಳು (Comedy Khiladigalu)ಕೂಡಾ ಒಂದು.
ಹೌದು ಈ ಕಾರ್ಯಕ್ರಮದ ಮೂಲಕ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದು ಅದರಲ್ಲಿ ಶಿವರಾಜ್ ಕೆ.ಆರ್.ಪೇಟೆ (Shivarj K R Pete) ಸಹ ಒಬ್ಬರು. ಇವರೊಬ್ಬ ಗ್ರಾಮೀಣ ಪ್ರತಿಭೆಯಾಗಿದ್ದು ಬಹಳ ಕಷ್ಟಪಟ್ಟು ಮುಂದೆ ಬಂದವರು. ಈಗ ತಮ್ಮ ಸೆನ್ಸ್ ಆಫ್ ಹ್ಯೂಮರ್ನಿಂದ ಎಲ್ಲರನ್ನೂ ನಗಿಸುತ್ತಿದ್ದು ಅನೇಕ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
ಇನ್ನು ದರ್ಶನ್ ರವರ(Darshan) ರಾಬರ್ಟ್ ( Robbert) ಚಿತ್ರದಲ್ಲಿ ಕೂಡಾ ಶಿವರಾಜ್ ಕೆ.ಆರ್. ಪೇಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅಯೋಗ್ಯ(Ayogya) ಅಂಬಿ ನಿಂಗ್ ವಯಸ್ತಾಯ್ತೋ( Ambi Ninag Vaysayto) ಸೀತಾರಾಮ ಕಲ್ಯಾಣ (Sitarama Kalyana) ಯಜಮಾನ (Yajmana)ಸಿಂಗ ( Singa) ಬ್ರಹ್ಮಚಾರಿ ( Bramhachari) ಅಧ್ಯಕ್ಷ ಇನ್ ಅಮೆರಿಕ ( Adyaksha In America) ಭಜರಂಗಿ 2 ( Bajarangi 2) ರೈಡರ್ ( Rider) ಮದಗಜ(Madagaja) ಸೇರಿ ಅನೇಕ ಸಿನಿಮಾಗಳಲ್ಲಿ ಶಿವರಾಜ್ ಕೆ.ಆರ್. ಪೇಟೆ ನಟಿಸಿದ್ದಾರೆ.
ಶ್ವಾನ ಹಾಗೂ ಮಾನವನ ನಡುವಿನ ಬಾಂಧವ್ಯವನ್ನು ಸಾರುವ ನಾನು ಮತ್ತು ಗುಂಡ ಚಿತ್ರದಲ್ಲಿ ಶಿವರಾಜ್ ಕೆ.ಆರ್. ಪೇಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ಸಂಯುಕ್ತ ಹೊರನಾಡು ಶಿವರಾಜ್ ಪತ್ನಿಯಾಗಿ ನಟಿಸಿದ್ದರು. ಪ್ರೀತಿಯ ಶ್ವಾನವನ್ನು ಕಳೆದುಕೊಂಡು ಪರಿತಪಿಸುವ ಪಾತ್ರದಲ್ಲಿ ಶಿವರಾಜ್ ಕೆ.ಆರ್. ಪೇಟೆ ಮನೋಜ್ಞವಾಗಿ ನಟಿಸಿದ್ದರು. ಈ ಸಿನಿಮಾ ತೆಲುಗಿನಲ್ಲಿ ನೇನು ನಾ ನೇಸ್ತಂ ಹೆಸರಿನಲ್ಲಿ ಡಬ್ ಆಗಿತ್ತು. ಈ ಸಿನಿಮಾಗೆ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕಷ್ಟದ ದಿನಗಳನ್ನು ಕಂಡಿದ್ದ ಶಿವರಾಜ್ ಕೆ.ಆರ್. ಪೇಟೆಗೆ ಅವರ ಪ್ರತಿಭೆಯೇ ಕೈ ಹಿಡಿದಿದೆ. ತಮಗೆ ಹೊಸ ಬದುಕು ನೀಡಿದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಅವರು ಅನೇಕ ಬಾರಿ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಇದೀಗ ಶಿವರಾಜ್ ಪೇಟೆ ಸ್ಟಾರಚ ಸುವರ್ಣ ವಾಹಿನಿಯ ಖ್ಯಾತ ಕಾರ್ಯಕ್ರಮ ಗಾನಬಜಾನ ಫಿನಾಲೆಗೆ ಬಂದಿದ್ದು ಇಲ್ಲಿ ಶಿವಣ್ಣನ ಕರುಬನ ರಾಣಿ ಹಾಡನ್ನು ಎಷ್ಟು ಅದ್ಬುತವಾಗಿ ಹಾಡಿದ್ದಾರೆ ನೀವೆ ನೋಡಿ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.