ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಚಿತ್ರ ಕಾರು ತಯಾರಿಸಿದ ಹಳ್ಳಿ ಹುಡುಗ…ಚಿಂದಿ ವಿಡಿಯೋ

433

ಸದ್ಯ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಹೌದು ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲಾರಂಭಿಸಿದ್ದು ಇದರಿಂದ ಜನರು ಈಗ ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡಲು ಪ್ರಾರಂಭಿಸಿದ್ದಾರೆ.

ಹೌದು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು ಇದೇ ಸಂಧರ್ಭದಲ್ಲಿ ಟಾಟಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ.

ಹೌದು ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದ್ದು ಇತ್ತೀಚೆಗೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆಗೊಳಿಸಿತು. ಇದು ಕೈಗೆಟುಕುವ ಹಾಗೂ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಆಗಿದೆ. ಎಂಜಿ ಕೂಡ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನಲ್ಲಿ ಕೆಲಸ ಮಾಡುತ್ತಿದೆ.

ವರದಿಯ ಪ್ರಕಾರವಾಗಿ ಎಂಜಿ ಏರ್ ಎಂಬ ಹೆಸರಿನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದ್ದು ಈ ಹೊಸ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 2023ರಲ್ಲಿ ನಡೆಯಲ್ಲಿರುವ ಆಟೋ ಎಕ್ಸ್‌ಪೋದಲ್ಲಿ ಚೊಚ್ಚಲ ಪ್ರವೇಶವನ್ನು ಮಾಡಬಹುದು ಎಂದು ನಿರೀಕ್ಷಿಸುತ್ತದೆ. ತದನಂತರ ಭಾರತದಲ್ಲಿ ಅದರ ಅಧಿಕೃತ ಬಿಡುಗಡೆಯಾಗಬಹುದು. ಈ ಎಲೆಕ್ಟ್ರಿಕ್ ಕಾರು ಏಷ್ಯನ್ ಮಾರುಕಟ್ಟೆಗಳಲ್ಲಿ ಈಗಾಗಲೇ ಮಾರಾಟದಲ್ಲಿರುವ ವಾಹನದ ಭಾರೀ-ಪರಿಷ್ಕೃತ ಆವೃತ್ತಿಯಾಗಿದೆ ಈ ವಾಹನವು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ರೋಡ್ ಟೆಸ್ಟ್ ನಡೆಸಿದೆ.

ಇನ್ನು ಈ ಇವಿ ಕಾರು ಚಮತ್ಕಾರಿ ವಿನ್ಯಾಸ ಭಾಷೆಯನ್ನು ಪಡೆಯುತ್ತದೆ ಎಂದು ಸೂಚಿಸುತ್ತದೆ. ಎಂಜಿ ಸಿಟಿ ಇವಿಯು ಟಾಟಾ ಟಿಯಾಗೋ ಬಹುತೇಕ ಒಂದೇ ರೀತಿಯ ಹೆಜ್ಜೆಗುರುತುಗಳನ್ನು ಹೊಂದಿದ್ದರೂ ಬೆಲೆಯ ಅಂಶದಲ್ಲಿ ಇದು ಟಾಟಾ ಮೋಟಾರ್ಸ್‌ನೊಂದಿಗೆ ಸ್ಪರ್ಧಿಸುವುದಿಲ್ಲ. ಎಂಜಿ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೀವ್ ಚಾಬಾ ಕಂಪನಿಯು ಅರ್ಬನ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ವೆಹಿಕಲ್ ಅನ್ನು ತರುತ್ತಿದೆ. ಇದು ಎಂಟ್ರಿ ಲೆವೆಲ್ ಮಟ್ಟದ ವಾಹನದ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿರುವಾಗ ಮೌಲ್ಯ ಹಾಗೂ ತಂತ್ರಜ್ಞಾನದ ಮೇಲೆ ಹೆಚ್ಚಿನದಾಗಿರುತ್ತದೆ ಎಂದು ಹೇಳಿದ್ದಾರೆ.

ಹೊಸ ಏರ್ ಇವಿ ಬ್ರ್ಯಾಂಡ್‌ನ ಸಾಲಿನಲ್ಲಿ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿರುತ್ತದೆ ಹಾಗೂ ಟಾಟಾ ಟಿಯಾಗೊ ಇವಿ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಮುಂಬರುವ ಇಕೆಯುವಿ 100 ನಂತಹ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಕೇವಲ 2.9 ಉದ್ದದೊಂದಿಗೆ ಮುಂಬರು ಎಂಜಿ ಏರ್ ದೇಶದ ಅತ್ಯಂತ ಚಿಕ್ಕ ಕಾರು ಆಗಿರುತ್ತದೆ ಮತ್ತು 2010 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರುತ್ತದೆ.

ಹೌದು ಈ ಎಂಜಿ ಏರ್ ಎಲೆಕ್ಟ್ರಿಕ್ ಕಾರು ಚಮತ್ಕಾರಿ ಮತ್ತು ಆಕರ್ಷಕ ಲುಕ್ ಅನ್ನು ನೀಡುತ್ತದೆ. ಈ ಹೊಸ ಎಲೆಕ್ಟ್ರಿಕ್ ವಾಹನಕ್ಕಾಗಿ ಕಂಪನಿಯು ಯುನಿಟ್ ಗಳ ಹೆಚ್ಚುತ್ತಿರುವ ಸ್ಥಳೀಕರಣವನ್ನು ಗಮನಿಸುತ್ತಿದೆ ವಿಶೇಷವಾಗಿ ಬ್ಯಾಟರಿ ಪ್ಯಾಕ್‌ಗಳು ವೆಚ್ಚವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇನ್ನು ಆರಂಭದಲ್ಲಿ ಎಂಜಿ ಸಿಟಿ ಇವಿ ಶೇಕಡಾ 60 ರಷ್ಟು ಸ್ಥಳೀಕರಣ ಮಟ್ಟವನ್ನು ಹೊಂದಿರುತ್ತದೆ. ಇದು ಮುಂಬರುವ ತಿಂಗಳುಗಳಲ್ಲಿ ಮಾತ್ರ ಹೆಚ್ಚಾಗುತ್ತದೆ.

ಇದಕ್ಕಾಗಿ ಎಂಜಿ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬ್ಯಾಟರಿ ಕೋಶಗಳ ಸ್ಥಳೀಯ ಉತ್ಪಾದನೆಯ ಮೇಲೆ ಹೆಚ್ಚು ಗಮನಹರಿಸುತ್ತದೆ. ಇನ್ನು ಇದು ಭಾರತ ಅತ್ಯಂತ ಸಣ್ಣ ಕಾರಾದರೆ ಇಲ್ಲಿ ಯುವಕನೊಬ್ಬ ತನ್ನ ಕೈಯಾರೆ ಟಟಾ ಇಂಡಿಕಾ ಕಾರನ್ನು ಸಣ್ಣದಾಗಿ ನವೀಕರಣ ಮಾಡಿಕೊಂಡಿದ್ದಾರೆ. ಆಶ್ಚರ್ಯವಾಗುತ್ತಿದ್ದಿರ? ಕೆಳಗಿನ ವಿಡಿಯೋ ನೋಡಿ.