ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಹಳ ಅಪರೂಪದ ವಿಮಾನ ಹಾರುವ ದ್ರಶ್ಯ ನೋಡಿ…ಚಿಂದಿ ವಿಡಿಯೋ

58,366

ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ ವರುಷ ಪ್ರಪಂಚದ ಅತಿ ದೊಡ್ಡ ವಿಮಾನ ಏರ್‌ಬಸ್‌ ಕಂಪನಿ ಅಭಿವೃದ್ಧಿ ಪಡಿಸಿದ ಎ380(A380) ಸೂಪರ್‌ಜಂಬೋ ಲ್ಯಾಂಡ್‌ ಆಗಿತ್ತು. ಹೌದು ದುಬೈನಿಂದ ಬೆಳಗ್ಗೆ 10:30ಕ್ಕೆ ಹೊರಟ ಎಮಿರೇಟ್ಸ್‌ ವಿಮಾನ ಮಧ್ಯಾಹ್ನ 3:30ಕ್ಕೆ ಬೆಂಗಳೂರು ತಲುಪಿದ್ದು ಕೆಐಎಎಲ್‌ಗೆ ಇದು ಐತಿಹಾಸಿಕ ಕ್ಷಣವಾದ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ವಿಮಾನವನ್ನ ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿತ್ತು.

ಹೌದು ಈ ಹಿಂದೆ ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಅಕ್ಟೋಬರ್‌ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಎರಡು ವಾರ ಮೊದಲೇ ಎಮಿರೇಟ್ಸ್‌ ತನ್ನ ವಿಮಾನ ಸೇವೆಯನ್ನು ಆರಂಭಿಸಿದ್ದು ವಿಶೇಷ.

ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ380 ವಿಮಾನ ಲ್ಯಾಂಡ್‌ ಆದ ಎರಡನೇ ನಿಲ್ದಾಣ ಬೆಂಗಳೂರು ಆಗಿದ್ದು ಈ ಮೊದಲು 2014ರಲ್ಲಿ ಎಮಿರೇಟ್ಸ್‌ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆಯನ್ನು ನೀಡಿತ್ತು. ಹೌದು ಈ ಡಬ್ಬಲ್‌ ಡೆಕ್ಕರ್‌ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದ್ದು ಎಕಾನಮಿ ಬಿಸಿನೆಸ್‌ ಫಸ್ಟ್‌ ಕ್ಲಾಸ್‌ ಟಿಕೆಟ್‌ ಲಭ್ಯವಿದೆ.

ಬೋಯಿಂಗ್‌ 777 ಹೋಲಿಕೆ ಮಾಡಿದರೆ ಶೇ.45 ರಷ್ಟು ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದ್ದು ವಿಶ್ವದ 30 ವಿಮಾನ ನಿಲ್ದಾಣಗಳಿಗೆ ಏರ್‌ಬಸ್‌ 380 ವಿಮಾನ ಸೇವೆಯನ್ನು ಎಮಿರೇಟ್ಸ್‌ ನೀಡುತ್ತಿದೆ. 1985ರಿಂದ ಎಮಿರೇಟ್ಸ್‌ ಭಾರತದಲ್ಲಿ ಸೇವೆ ನೀಡಲು ಆರಂಭಿಸಿದೆ.2003 ರಲ್ಲಿ ಏರ್‌ಬಸ್‌ ಕಂಪನಿ ಈ ವಿಮಾನವನ್ನು ನಿರ್ಮಾಣ ಮಾಡಿದ್ದು ಇಲ್ಲಿಯವರೆಗೆ 3 ಪರೀಕ್ಷಾರ್ಥ ವಿಮಾನ ಸೇರಿದಂತೆ ಒಟ್ಟು 254 ವಿಮಾನಗಳನ್ನು ಉತ್ಪಾದನೆ ಮಾಡಲಾಗಿದೆ.

ಒಟ್ಟು 72.75 ಮೀಟರ್‌ ಉದ್ದ 24.45 ಮೀಟರ್‌ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದಾಗಿದ್ದು ಆದರೆ ಇಲ್ಲಿಯವರೆಗೂ ಯಾವ ಕಂಪನಿಯ ವಿಮಾನಗಳು ಈ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗಿಲ್ಲ. ಹೌದು ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಇನ್ನು ಇಲ್ಲಿಯವರೆಗೆ ಅತಿ ಹೆಚ್ಚು ಏರ್‌ಬಸ್‌ 380 ವಿಮಾನಗಳನ್ನು ಎಮಿರೇಟ್ಸ್‌ ಆರ್ಡರ್‌ ಮಾಡಿದ್ದು ಎಮಿರೇಟ್ಸ್‌ 123 ಆರ್ಡರ್‌ ಮಾಡಿದ್ದರೆ ಸಿಂಗಾಪುರ್‌ ಏರ್‌ಲೈನ್ಸ್‌ 24 ಆರ್ಡರ್‌ ಮಾಡಿತ್ತು. 2019ರಲ್ಲಿ ಎಮಿರೇಟ್ಸ್‌ 39 ವಿಮಾನಗಳ ಆರ್ಡರ್‌ ಕ್ಯಾನ್ಸಲ್‌ ಮಾಡಿದ್ದು 2021ರ ಕೊನೆಯಲ್ಲಿ ಏರ್‌ಬಸ್‌ ಕಂಪನಿ ಎ380 ವಿಮಾನ ನಿರ್ಮಾಣ ಮಾಡುವುದನ್ನೇ ರದ್ದು ಮಾಡಿದೆ.

ಎಮಿರೇಟ್ಸ್‌ ಸೇರಿದಂತೆ ಜರ್ಮನಿಯ ಲುಫ್ಥಾನ್ಸ ಏರ್‌ ಫ್ರಾನ್ಸ್‌ ಆಸ್ಟ್ರೇಲಿಯಾದ ಕ್ವಾಂಟಾಸ್‌ ಬ್ರಿಟಿಷ್ ಏರ್‌ವೇಸ್‌ ಎಮಿರೇಟ್ಸ್ ಕತಾರ್ ಸಿಂಗಾಪುರ್ ಜಪಾನಿನ ಆಲ್ ನಿಪ್ಪಾನ್ ಮತ್ತು ದಕ್ಷಿಣ ಕೊರಿಯಾದ ಕೊರಿಯನ್ ಏರ್ ಎ380 ವಿಮಾನವನ್ನು ಖರೀದಿಸಿದೆ. ಇನ್ನು ಇದು ಜಗ್ಗತಿನ ಅತ್ಯಂತ ದೊಡ್ಡ ವಿಮಾನದರೆ ಇದರ ಜೊತೆಗೆ ಪ್ರಂಪಚದ 15 ದೊಡ್ಡ ವಿಮಾನಗಳು ಯಾವು ಗೊತ್ತಾ? ಕೆಳಗಿನ ವಿಡಿಯೋ ನೋಡಿ.