ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಉದಯೋನ್ಮುಖ ನಟ ಅದಿತಿ ಪ್ರಭುದೇವ ಅವರು ತಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗಷ್ಟೇ ಖ್ಯಾತ ಉದ್ಯಮಿ ಕಾಫಿ ಪ್ಲಾಂಟರ್ ಆಗಿರುವ ಯಶಸ್ ರವರನ್ನು ಅದ್ದೂರಿಯಾಗಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಈ ಮದುವೆ ನಿಜಕ್ಕೂ ಕೂಡ ಪ್ರತಿಯೊಬ್ಬ ಅಭಿಮಾನಿಗಳಲ್ಲಿ ಸಂತೋಷವನ್ನು ತರಿಸಿದೆ ಎಂದು ಹೇಳಬಹುದಾಗಿದೆ.
ಇನ್ನು ಅದಿತಿ ಪ್ರಭುದೇವ ರವರ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅತಿಥಿ ಪ್ರಭುದೇವ ರವರ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಧರ್ಮಪತ್ನಿ ರಾಧಿಕಾ ಪಂಡಿತ್ ಕೂಡ ಆಗಮಿಸಿದ್ದು ವಿಶೇಷವಾಗಿತ್ತು.
ಹೌದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಜೊತೆಗೆ ಆಗಮಿಸಿ ಅದಿತಿ ಪ್ರಭುದೇವ ಹಾಗೂ ಯಶಸ್ ಅವರಿಗೆ ಶುಭ ಹಾರೈಸಿದ್ದು ಸದ್ಯ ಈ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಸಖತ್ ವೈರಲ್ ಆಗುತ್ತಿದ್ದು ಪ್ರತಿಯೊಬ್ಬರೂ ಸಹ ಆದಿತ್ಯ ಪ್ರಭುದೇವ ಅವರ ಮದುವೆಗೆ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳು ಆಗಮಿಸಿದ್ದಕ್ಕೆ ಖುಷಿಪಟ್ಟಿದ್ದಾರೆ.
ಇನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದಮೇಲೆ ಮದುವೆಗಳಿಗೆ ರಿಸೆಪ್ಶನ್ ಗಳಿಗೆ ಹೋದಾಗ ದುಬಾರಿ ಬೆಳೆಯ ಗಿಫ್ಟ್ಗಳನ್ನು ಕೊಡುತ್ತಾರೆ. ಸದ್ಯ ಇದೀಗ ಅದಿತಿ ಪ್ರಭುದೇವ ಅವರ ಮದುವೆಗೆ ಹೋದ ಯಶ್ ಮತ್ತು ರಾಧಿಕಾ ಅವರು ಕೂಡ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದು ರಾಧಿಕಾ ಮತ್ತು ಯಶ್ ಅದಿತಿ ಮತ್ತು ಅವರ ಗಂಡ ಇಬ್ಬರಿಗೂ ಒಂದೊಂದು ಚಿನ್ನದ ಹಾರವನ್ನು ಗಿಫ್ಟಾಗಿ ನೀಡಿದ್ದಾರೆ ಇದರ ಬೆಲೆ ಸುಮಾರು ಐದರಿಂದ ಆರು ಲಕ್ಷ ರೂಪಾಯಿಗಳು ಆಗಿವೆ..
ಹೌದು ಒಂದೊಂದು ಚಿನ್ನದ ಸರಕ್ಕೆ 3 ಲಕ್ಷ 2 ರೂಪಾಯಿಗಳನ್ನು ಖರ್ಚು ಮಾಡಿ ಖರೀದಿ ಮಾಡಿ ಯಶ್ ಮತ್ತು ರಾಧಿಕಾ ಗಿಫ್ಟ್ ನೀಡಿದ್ದು ಯಶ್ ಮತ್ತು ರಾಧಿಕಾ ಕೊಟ್ಟ ದುಬಾರಿ ಗಿಫ್ಟ್ ಅನ್ನು ನೋಡಿ ಅದಿತಿ ಪ್ರಭುದೇವ ಅವರು ಫುಲ್ ಖುಷಿಯಾಗಿ ರಾಧಿಕಾ ಪಂಡಿತ್ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ತಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ನಟಿಯರಾಗಲಿ ಅಥವಾ ಯಾವುದೇ ನಟಿಯರಾಗಲಿ ಮದುವೆ ಆದ ಬಳಿಕ ಸಿನಿಮಾ ರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತಿದೆ. ಅದಿತಿ ಪ್ರಭುದೇವ ಅವರು ಮದುವೆಯಾದ ನಂತರವೂ ಸಹ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಮುಂದುವರೆಯುತ್ತಾರ ಇಲ್ಲವಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಲೇಖನಿಯ ಕೆಳಗಿನ ವಿಡಿಯೋದಲ್ಲಿ ಯಶ್ ದಂಪತಿಗಳು ಮದುವೆಯ ಆರತಕ್ಷತೆಗೆ ಹಾಜರಾದ ಬ್ಯೂಟಿಫುಲ್ ಕ್ಷಣಗಳನ್ನು ನೋಡಬಹುದು.