ಕನ್ನಡ ಚಿತ್ರರಂಗದ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಕ್ಟೋಬರ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹೌದು ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸ್ಯಾಂಡಲ್ವುಡ್ನ ಖ್ಯಾತ ನಟಿ ಸುಮಲತಾ ಅಂಬರೀಶ್ ರವರ ಏಕೈಕ ಪುತ್ರನಾಗಿರುವ ಅಭಿಷೇಕ್ ಅಂಬರೀಶ್ ರವರು ಸದ್ಯ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ರವರಿಗೆ ಕನ್ನಡ ಚಿತ್ರರಂಗದ ನಟ-ನಟಿಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡ ಪ್ರೀತಿಯ ಶುಭಾಶಯವನ್ನ ತಿಳಿಸಿದ್ದು ಅಕ್ಟೋಬರ್ 2 ರ ಮಧ್ಯೆರಾತ್ರಿಯಿಂದಲೇ ಅಭಿಷೇಕ್ ಅಂಬರೀಶ್ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಾಯಕ ನಟನಿಗೆ ಶುಭಾಶಯ ತಿಳಿಸಿದ್ದಾರೆ.
ಹೌದು ತಮ್ಮ ಮನೆಯ ಬಳಿ ಬಂದಿರುವ ಅಪಾರ ಅಭಿಮಾನಿಗಳು ಮತ್ತು ಗೆಳೆಯರ ಜೊತೆ ಅಭಿಷೇಕ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇನ್ನು ಬಾಲ್ಯದಿಂದಲೂ ಸಹ ಚಿತ್ರರಂಗದ ನಂಟಿನೊಂದಿಗೆ ಬೆಳೆದ ಅಭಿಷೇಕ್ ಅಂಬರೀಶ್ ರವರು ಮೊದಲು ತಮ್ಮ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಭಿಷೇಕ್ ರವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ನ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯಕ್ಕೆ ಕೂಡ ತೆರಳಿದ್ದು ವಿಶೇಷವಾಗಿತ್ತು.
ಹೌದು ತಮ್ಮ ಶಿಕ್ಷಣ ಪೂರ್ಣಗೊಂಡ ಬಳಿಕ ಭಾರತಕ್ಕೆ ಮರಳಿದ ಅಭಿಷೇಕ್ ರವರು ನಟನೆಯತ್ತ ಒಲವು ತೋರಿದ್ದು ಇನ್ನು 2019ರಲ್ಲಿ ತೆರೆ ಕಂಡ ಅಮರ್ ಸಿನಿಮಾದ ಮೂಲಕ ಅಭಿಷೇಕ್ ಅಂಬರೀಶ್ ರವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ನಾಗಶೇಖರ್ ನಿರ್ದೇಶನದ ಸಿನಿಮಾದ ಮೂಲಕ ಗ್ರಾಂಡ್ ಎಂಟ್ರಿ ಪಡೆದ ಅಭಿಷೇಕ್ ಅಂಬರೀಶ್ ಮೊದಲ ಚಿತ್ರದ ನಟಯ ಮೂಲಕವೇ ನಮ್ಮ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದು ಅಭಿಷೇಕ್ ಅಂಬರೀಶ್ ಮತ್ತು ತಾನ್ಯಾ ಹೋಪ್ ನಟನೆಯ ಅಮರ್ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಸಹ ಸಿನಿಮಾದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿತ್ತು.
ಇನ್ನು ಜೂನಿಯರ್ ರೆಬಲ್ ಸ್ಟಾರ್ ಮುಂದಿನ ಚಿತ್ರದ ಹೆಸರೇ ವಿಭಿನ್ನವಾಗಿದ್ದು ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿದೆ. ಈಗಾಗಲೇ ಟೀಸರ್ ಬಿಡುಗಡೆಗಾಗಿ ಟೀಸರ್ವೊಂದನ್ನು ರಿಲೀಸ್ ಮಾಡಲಾಗಿದ್ದು ಅಭಿಷೇಕ್ ಅಂಬರೀಶ್ ರವರು ಸಖತ್ ಖದರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು ಸೆನ್ಸೇಷನ್ ಮೂಡಿಸಿದೆ ಎನ್ನಬಹುದು. ಇ
ನ್ನು ಈ ಬೆಳವಣಿಗೆ ನೋಡಿದ ತಾಯಿ ಸುಮಲತಾ ಅಂಬರೀಶ್ ರವರು ಈಗ ಚಿತ್ರರಂಗದಲ್ಲಿ ಸಿಕ್ವಲ್ ಸಿನಿಮಾಗಳ ಟ್ರೆಂಡ್ ಶುರುವಾಗಿದ್ದು ಅಭಿ ಸಿನಿಮಾ ಕೂಡ ಹಾಗೆಯೇ ಆಗಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದು ಜೊತೆಗೆ ಅವನು ತಂದೆಯ ಹಾದಿಯಲ್ಲೆ ಸಾಗಬೇಕು ಅವರ ಎಲ್ಲಾ ಗುಣಗಳು ಇವನಿಗೆ ಬರಬೇಕು ಇವನು ಕೂಡ ಅಂಬರೀಶ್ ರಂತೆಯೇ ಆಗಬೇಕು ಎಂದಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಭಿಷೇಕ್ ರವರು ಖಂಡಿತ ಪಾರ್ಟ್ ಸಿನಿಮಾ ಮಾಡ್ತಿನಿ ಆದ್ರೆ ಅಮ್ಮಾ ಹೇಳಿದ ಹಾಗೆ ನಾನು ತಂದೆ ರೀತಿ ಆಗೋಕೆ ಆದಲ್ಲ ನೋ ವೇ ಚಾನ್ಸೇ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.