ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಶ್ವಿನಿಗೆ ಕೇಕ್ ತಿನ್ನಿಸಲು ಮರೆತ ಅಪ್ಪು..ನೋಡಿ ಕ್ಯೂಟ್ ರಿಯಾಕ್ಷನ್ ವಿಡಿಯೋ

1,598

ಕನ್ನಡ ಚಿತ್ರರಂಗದ ಪವರಸ್ಟಾರ್ ಪುನೀತ್ ರಾಜಕುಮಾರ್ ರವರು ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಾಯಕ ನಟರಾಗಿದ್ದು ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುತ್ತಿದ್ದ ಪುನೀತ್ ಬಡವರ ಪಾಲಿಗೆ ಪರಮಾತ್ಮರಾಗಿದ್ದರು. ಹೌದು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಹಿನ್ನಲೆ ಗಾಯಕರಾಗಿ ನಿರ್ಮಾಪಕರಾಗಿಯೂ ಕೂಡ ಪ್ರಸ್ತುತರಾಗಿದ್ದರು. ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

1975 ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಪಾರ್ವತಮ್ಮರವರ ಕೊನರಯ ಪುತ್ರನಾಗಿ ಜನಿಸಿದ್ದು ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರಾಗಿದ್ದಾರೆ. ಹೌದು ಪುನೀತ್ ರಾಜಕುಮಾರ್ ರವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದಿದ್ದು ಪುನೀತ್ ಹಾಗೂ ಸಹೋದರಿ ಪೂರ್ಣಿಮಾರನ್ನು ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಗಿದ್ದು ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಸಿನಿಮಾದ ಮೂಲಕವಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ತದನಂತರ ಬಂದ ಸನಾದಿ ಅಪ್ಪಣ್ಣ ತಾಯಿಗೆ ತಕ್ಕ ಮಗ ವಸಂತ ಗೀತ ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು. ಹೌದು ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದಿದ್ದು ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

ಇನ್ನು ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ ನಾಲ್ಕು ಫಿಲ್ಮಫೇರ್ ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದು ಅಲ್ಲದೇ ಅವರ ಕೊನೆಯ ಚಿತ್ರ ಜೇಮ್ಸ್ ವರೆಗೂ ಕೂಡ ಅಪ್ಪು ದಾಖಲೆಯ ಸರದಾರನೇ ಆಗಿದ್ದರು. ಹೌದು ಹೀಗೇ ಅಪ್ಪು ಸಿನಿಮಾ ದಿಕ್ಕು ಒಂದಿ ಕಡೆಯಾದರೆ ಅವರು ಮಾಡಿದ್ದ ಸಮಾಜಮುಖಿ ಕೆಲಸಗಳು ಇಡೀ ಪ್ರಪಂಚವೇ ಆಶ್ಚರ್ಯವಾಗುವಂತೆ ಮಾಡಿದೆ. ಹೀಗೆ ಅಭಿಮಾನಿಗಳ ಪರಮಾತ್ಮರಾಗಿದ್ದ ಅಪ್ಪು ಅವರನ್ನು ಕಳೆದು ಕೊಂಡು ಈಗಲೂ ಕೂಡ ಕರುನಾಡಲ್ಲಿ ಸೂತಕದ ಚಾಯೆ ಮೂಡಿದೆ.

ಸದ್ಯ ಇದೀಗ ಅಪ್ಪು ಜೀವಂತವಾಗಿರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವ ವ್ಯಾಕ್ಸ್ ಒಂದನ್ನ ಮಾಡಿದ್ದು ನಿಜಕ್ಕೂ ಕೂಡ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತದೆ. ಸದ್ಯ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದ ಅಶ್ವಿನಿ ಮೇಡಂ ಬಹಳಾನೇ ಭಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು.

ಈ ನಡುವೆ ಅಶ್ವಿನಿಯವರಿಗೆ ದುಃಖ ತರಿಸುವ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು ಇದು ಅಪ್ಪು ಆಚರಿಸಿಕೊಂಡ ಕೊನೆಯ ಹುಟ್ಟುಹಬ್ಬದ ವಿಡಿಯೋ ಆಗಿದೆ. ಆದರೆ ಈ ಹುಟ್ಟುಹಬ್ಬದಲ್ಲಿ ಅಶ್ವಿನಿಯವರಿಗೆ ಅಪ್ಪು ಕೇಕ್ ತಿನ್ನಿಸುವುದನ್ನು ಮರೆತಿದ್ದು ಆ ಸಮಯದಲ್ಲಿ ಅಶ್ವಿನಿ ಯವರ ರಿಯಾಕ್ಷನ್ ಹೇಗಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.