ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಿಂದಿಯ ಕ್ರಿಶ್ ಚಿತ್ರದ ಶೂಟಿಂಗ್ ಹೇಗಿತ್ತು ನೋಡಿ…ಚಿಂದಿ ವಿಡಿಯೋ

4,112

ಸಾವಿರಾರು ಕೋಟಿ ಗಳಿಕೆ ನಿರೀಕ್ಷೆ ಮೂಡಿಸಿದ್ದ ಕ್ರಿಶ್ 3 ಚಿತ್ರ ಮಕ್ಕಳಿಗೆ ಬಹು ಮೆಚ್ಚುಗೆಯಾಗಿತ್ತು. ಆದರೆ ವಿಮರ್ಶಕರ ಪೂರ್ಣ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಗಿತ್ತು ಈ ಸಿನಿಮಾ.  ಹೃತಿಕ್ ರೋಷನ್ ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಾನೌತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಿಶ್ 3 2013 ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಭರ್ಜರಿ ಗಳಿಕೆ ಮಾಡಿತ್ತು. ಚೆನ್ನೈ ಎಕ್ಸ್ ಪ್ರೆಸ್ ದಾಖಲೆಗಳ ಹಿಂದೆ ಬಿದ್ದಿದ್ದ ಕ್ರಿಶ್ 3 ಗಳಿಕೆ ಸುಮಾರು  300  ಕೊಟಿ ದಾಟಿತ್ತು

ಇನ್ನು ದುಷೃ ಶಿಕ್ಷಣ ಶಿಷ್ಟ ರಕ್ಷಣ ಥೀಮ್ ಹೊಂದಿರುವ ಮುಸುಕುಧಾರಿ ಮಹಾವೀರ ಮಹಾ ದುಷ್ಟ ಕಾಲ್ ನಿಂದ ಭೂಮಿಯನ್ನು ರಕ್ಷಿಸುವ ಸಿಂಪಲ್ ಕಥೆಯನ್ನು ಈ ಸಿನಿಮಾ ಹೊಂದಿದ್ದು ಮಿಕ್ಕಂತೆ ಗ್ರಾಫಿಕ್ಸ್ ಸಾಹಸಮಯ ದೃಶ್ಯಗಳು ಕಣ್ಮನ ಸೆಳೆದಿತ್ತು.

2013 ರ  ನವೆಂಬರ್ 1ರಂದು ಬೆಳ್ಳಿತೆರೆಗೆ ಬಿಡುಗಡೆಗೊಂಡ ವೈಜ್ಞಾನಿಕ ಕಥಾ ವಸ್ತುವನ್ನು ಒಳಗೊಂಡ ಕ್ರಿಶ್ 3 ಈ ಮೊದಲಿನ ಕೊಯಿ ಮಿಲ್ ಗಯಾ ಮತ್ತು ಕ್ರಿಶ್ ಚಿತ್ರಗಳ 3ನೇ ಕಂತಿನ ರೂಪವಾಗಿದೆ. ಹೌದು ಹಾಲಿವುಡ್ ಎಕ್ಸ್ ಮೆನ್ ಚಿತ್ರವನ್ನು ಹೋಲುವ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸುವುದರ ಬಗ್ಗೆ ವಿಶ್ವಾಸವಿದ್ದರೂ ಕೂಡ ಜನರಿಗೆ ಅದರಲ್ಲೂ ಮಕ್ಕಳಿಗೆ ಮೆಚ್ಚುಗೆ ಆಗುವಂತೆ ನಿರ್ಮಿಸಲಾಗಿದೆ ಎಂದು ರಾಕೇಶ್ ರೋಷನ್ ಹೇಳಿದ್ದರು. ಆದರೆ ಬಹುತೇಕ ವಿಮರ್ಶಕರು ಇದು ಆವರೇಜ್ ಚಿತ್ರ ಎಂದು ಹೇಳಿದ್ದರು.

 

ಇನ್ನು ರಾಕೇಶ್ ರೋಷನ್ ನಿರ್ಮಾಣ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಶನ್ ವಿವೇಕ್ ಒಬೆರಾಯ್ ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಾನೌತ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಕ್ರಿಶ್ 3 ಚಿತ್ರದ ಪೋಸ್ಟರ್ ಗಳು, ಟ್ರೇಲರ್ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ಮಕ್ಕಳಿಗೆ ಕ್ರೇಜ್ ಹುಟ್ಟಿಸಲು ಬೆಂಗಳೂರಿನಲ್ಲಿ ಕ್ರಿಶ್ 3 ಗೇಮ್ಸ್ ಅನ್ನು ಹೃತಿಕ್ ಬಿಡುಗಡೆ ಮಾಡಿದ್ದರು.

ಬಿಡುಗಡೆಗೊಂಡ ನಾಲ್ಕು ದಿನಗಳಲ್ಲಿ 100 ಕೋಟಿ ರು ಗಳಿಕೆ(ದೇಶಿ ಮಾರುಕಟ್ಟೆಯಲ್ಲಿ ಮಾತ್ರ) ಕಂಡ ಎರಡನೆ ಚಿತ್ರ ಕ್ರಿಶ್ 3  ಆಗಿತ್ತು.ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದೇ ದಿನ ಅತ್ಯಧಿಕ ಮೊತ್ತ ಗಳಿಕೆ ದಾಖಲೆ ಮಾಡಿದ್ದು 100 ಕೋಟಿ ರು ಕ್ಲಬ್ ಸೇರಿದ ಹೃತಿಕ್ ರೋಷನ್ ಅವರ ಎರಡನೇ ಚಿತ್ರ ಇದಾಗಿತ್ತು. ಮೊದಲನೆಯದ್ದು ಅಗ್ನಿಪಥ್. ಇನ್ನು ಇದೀಗ ಈ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು ಎಷ್ಟು ಅದ್ಬುತವಾಹಿ ಚಿತ್ರಸಿದ್ದರು ಎಂದು ತಿಳಿಯಲು ಲೇಖನಿಯ ಕೆಳಗಿನ ವಿಡಿಯೋ ನೋಡಿ.