ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಗ ಕೇಳಿದ್ದಕ್ಕೆ ಬನಾರಸ್ ಚಿತ್ರಕ್ಕೆ ಜಮೀರ್ ಕೊಟ್ಟ ಹಣ ಎಷ್ಟು ಗೊತ್ತಾ…

1,095

ಕಾಂಗ್ರೆಸ್ ಶಾಸಕ ಜಮೀರ್​ ಪುತ್ರ ಝೈದ್​ ಖಾನ್ ರವರ ಬನಾರಸ್​ ಸಿನಿಮಾಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ವು ಬಾಯ್​ಕಾಟ್​ ಮಾಡಬೇಕು ಎಂದಯ ಹೋರಾಟ ಕೂಡ ಮಾಡಿದ್ದರು. ಆದರೆ ಇದೆಲ್ಲವನ್ನ ಮೀರಿ ಗೆದ್ದು ಬೀಗುತ್ತಿದೆ ಬನಾರಸ್​.

ಹೌದು ಎಲ್ಲೆಲ್ಲೂ ಬನಾರಸ್​​​ ಕ್ರೇಜ್​ ಸಿಕ್ಕಾಪಟ್ಟೆ ಜೋರಾಗಿದ್ದು ದೇಶಾದ್ಯಂತ ಸುಂದರವಾದ ದೃಶ್ಯಕಾವ್ಯ ಕಟ್ಟಿಕೊಟ್ಟಿರೋ ಬನಾರಸ್​​​ ಚಿತ್ರ ರುದ್ರತಾಂಡವ ಆಡುತ್ತಿದ್ದೆ. ಇತ್ತೀಚೆಗಷ್ಟೇ ಮೂರನೇ ದಿನದ ಕಲೆಕ್ಷನ್ ಪ್ರಕಟವಾಗಿದ್ದು ಬಾಕ್ಸ್​​ ಆಫೀಸ್​ನಲ್ಲಿ ಕಲೆಕ್ಷನ್​ ಕಿಂಗ್​​ ಆಗಿ ಕಮಾಲ್​ ಮಾಡುತ್ತಿದೆ ಬನಾರಸ್​​. ಹಾಗಾದರೆ ಸಿನಿಮಾ ಮೂರೇ ದಿನಕ್ಕೆ ಗಳಿಸಿದೆಷ್ಟು ಹಾಗೂ ಸಿನಿಮಾಗೆ ಎಷ್ಟು ಬಂಡವಾಳ ಹೂಡಿದ್ದರು ಗೊತ್ತಾ? ತಿಳಿಸುತ್ತೆವೆ ಮುಂದೆ ಓದಿ.

ಝೈದ್​ ಖಾನ್​​​​ ಮತ್ತು ಸ್ಟಾರ್​​ ನಿರ್ದೇಶಕ ಜಯತೀರ್ಥ ಕಾಂಬಿನೇಷನ್​​ನಲ್ಲಿ ಮೂಡಿಬಂದ ಬನಾರಸ್​​​ ಸಿನಿಮಾ ಪ್ಯಾನ್​ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಸುಂದರವಾದ ಲವ್ ​ಸ್ಟೋರಿ ಕಿಕ್​​​​​ ಸಖತ್​​ ಥ್ರಿಲ್​ ಆಗಿದ್ದು ಅಭಿಮಾನಿಗಳು ಥಿಯೇಟರ್​​ನಲ್ಲಿ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ.ಹೌದು ದಿನದಿಂದ ದಿನಕ್ಕೆ ಈ ಸಿನಿಮಾ ಕ್ರೇಜ್​ ಜಾಸ್ತಿಯಾಗಿದೆ ಹೊರತು​ ಸ್ವಲ್ಪಾನೂ ಕಡಿಮೆಯಾಗ್ತಿಲ್ಲ ಎನ್ನಬಹುದು.

ಇನ್ನು ಬನಾರಸ್​ ಸಿನಿಮಾ ಎಲ್ಲಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​​​​ಗಳಲ್ಲಿಯೂ ಅಬ್ಬರಿಸುತ್ತಿದ್ದು ಝೈದ್​ ಖಾನ್​​ ಚಮತ್ಕಾರಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಫಸ್ಟ್​ ಡೇ ಫಸ್ಟ್​​ ಶೋನೆ ಹೌಸ್​​ಫುಲ್​ ಪ್ರದರ್ಶನ ಕಂಡಿದ್ದು ಇನ್ನು ಬೆಂಗಳೂರಿನಲ್ಲಿ ಕೇಳೋದೆ ಬೇಡ ಎಲ್ಲಾ ಥಿಯೇಟರ್​​ಗಳಲ್ಲಿಯೂ ಬನಾರಸ್​​​​ ಖದರ್​​​ ಜೋರಾಗಿತ್ತು.

ಇನ್ನು ಈ ಸಿನಿಮಾ ರಿಲೀಸ್​ ಆದ ದಿನದಿಂದ ಇಂದಿನವರೆಗೂ ಇದರ ಹವಾ ಬರೀ ಕನ್ನಡ ಮಾತ್ರವಲ್ಲದೇ ಬರೋಬರಿ 5 ಭಾಷೆಗಳಲ್ಲಿ ದಿನೇ ದಿನೇ ಜಾಸ್ತಿಯಾಗ್ತಿದೆ. ಕೇವಲ ಮೂರೇ ಮೂರು ದಿನಕ್ಕೆ ಇಡೀ ದೇಶದಾದ್ಯಂತ ಬರೋಬರಿ 30 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದ ಬನಾರಸ್​​ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕಲೆಕ್ಷನ್​​ ವಿಷಯದಲ್ಲಿ ಹಿಂದೆ ತಿರುಗಿ ನೋಡಲೇ ಇಲ್ಲ.

ಇನ್ನು ಹೀಗೆ ಕೋಟಿ ಕೋಟಿ ಬಾಚುತ್ತಿರುವ ಬನರಾಸ್ ಸಿನಿಮಾ ತಯಾರಾಗಿದ್ದು 8 ಕೋಟಿಯಲ್ಲಿ. ಸದ್ಯ ಬನರಾಸ್ ನಾಗಲೋಟ ಮುಂದುವರಿಸಿದ್ದು 100 ಕೋಟಿ ಕ್ಲಬ್ ಸೇರಲಿದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.
ಇನ್ನು ಬಾಲಿವುಡ್​ನಲ್ಲಿ ಬನಾರಸ್​​ ಆರ್ಭಟ ಜೋರಾಗಿದ್ದು ಸಾಮಾನ್ಯವಾಗಿ ಬಾಲಿವುಡ್​​ನಲ್ಲಿ ಹಿಂದಿ ಸಿನಿಮಾಗಳ ಆಳ್ವಿಕೆ ಜೋರಾಗಿತ್ತು. ಆದರೆ ಫಾರ್​ ಎ ಚೇಂಜ್​​​ ಈಗ ಬಾಲಿವುಡ್​ನಲ್ಲಿ ಕನ್ನಡ ಸಿನಿಮಾಗಳ ಟ್ರೆಂಡ್​ಗ್​ ಜೋರಾಗಿದೆ. ಅದ್ರಲ್ಲೂ ಝೈದ್​ ಖಾನ್​ ಬನಾರಸ್​ ಸಿನಿಮಾ ಹವಾ ಸೃಷ್ಟಿ ಮಾಡಿ ನೋಡುಗರಲ್ಲಿ ಕ್ರೇಜ್​ ಕ್ರಿಯೇಟ್ ಮಾಡ್ತಿದೆ. ಇದ್ರಂತೆ ಕಾಲಿವುಡ್​​ ಹಾಗೂ ಟಾಲಿವುಡ್​ನಲ್ಲಿಯೂ ಬನಾರಸ್​ ಹೊಸ ಅಲೆ ಸೃಷ್ಟಿ ಮಾಡಿದೆ.