ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶಿವಣ್ಣನ ಜೊತೆ ನಟಿಸಿದ ನಟಿ ಸದಾ ಏನಾದ್ರು ಗೊತ್ತಾ….

2,184

ನಟಿ ಸದಾ ರವರ ಮೂಲ ಮಹಾರಾಷ್ಟ್ರ ಆಗಿದ್ದರೂ ಸಹ ಜನಪ್ರಿಯತೆ ಗಳಿಸಿದ್ದು ಮಾತ್ರ ನಮ್ಮ ದಕ್ಷಿಣ ಭಾರತದಲ್ಲಿ. ನಟ ನಿತಿನ್ ಜೊತೆ ನಟಿಸಿದ ಜಯಂ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು ಇಲ್ಲಿಂದ ಸದಾ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಹೌದು ಒಂದು ಕಾಲದಲ್ಲಿ ಸದಾ ಒಪ್ಪಿದ ಸಿನಿಮಾಗಳೆಲ್ಲಾ ಹಿಟ್ ಲಿಸ್ಟ್ ಸೇರುತ್ತಿತ್ತು ಎನ್ನಬಹುದು. ದಕ್ಷಿಣ ಭಾರತದ ಫಿಲ್ಮ್ ಮೇಕರ್‌ಗಳಿಗೆ ಈಕೆ ಲಕ್ಕಿ ಚಾರ್ಮ್ ಆಗಿದ್ದು ಅಷ್ಟೇ ಅಲ್ಲ ಹುಡುಗರ ಫೇವರಿಟ್ ನಟಿಯಾಗಿದ್ದರು.

ಅನ್ನಿಯನ್ ಜಯಂ ಅಂತ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಸದಾ ಕನ್ನಡದಲ್ಲೂ ನಾಲ್ಕೈದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯ ಹಾಗೂ ನಟನೆ ಯಾವುದರಲ್ಲೂ ಕಮ್ಮಿಯಿರದ ಈ ನಟಿ ಇನ್ನೂ ಮದುವೆ ಆಗಿಲ್ಲ. ಹೌದು ಸಕ್ಸಸ್‌ಪುಲ್ ನಟಿ ಸದಾ ಇನ್ನೂ ಯಾಕೆ ಮದುವೆ ಆಗಿಲ್ಲ? ಅಫೇರ್ ಬಗ್ಗೆ ಏನು ಹೇಳಿದ್ದರು ಅನ್ನುವುದನ್ನ ಇತ್ತೀಚೆಗೆ ಬಹುಭಾಷಾ ನಟಿ ಸದಾ ರಿವೀಲ್ ಮಾಡಿದ್ದಾರೆ.

ತೆಲುಗು ಸಿನಿಮಾ ಜಯಂ ಹಿಟ್ ಆಗುತ್ತಿದ್ದಂತೆ ಸದಾ ದಕ್ಷಿಣ ಭಾರತದ ಬಹುದು ಬೇಡಿಕೆ ನಟಿಯಾಗಿದ್ದರು. ಹೌದು ಇಲ್ಲಿಂದ ಸದಾ ನಟಿಸಿದ ಸಿನಿಮಾಗಳು ಹಿಟ್ ಲಿಸ್ಟ್ ಸೇರಲು ಆರಂಭಿಸಿದ್ದು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಲು ಆರಂಭಿಸಿದ್ದರು. ತೆಲುಗು ತಮಿಳು ಅಷ್ಟ ಕನ್ನಡ ಸಿನಿಮಾಗಳಲ್ಲೂ ಕೂಡ ಸದಾ ನಟಿಸಿದ್ದರು.
ದಕ್ಷಿಣ ಭಾರತದ ಟಾಪ್ ಡೈರೆಕ್ಟರ್‌ಗಳಾದ ಶಂಕರ್ ಕೆ.ಎಸ್ ರವಿಕುಮಾರ್ ಪ್ರಭುದೇವ ಅಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಸಕ್ಸಸ್ ಸಿಕ್ಕಿದ್ದರೂ ಸದಾ ಇನ್ನೂ ಮದುವೆಯಾಗಿಲ್ಲ. ಇನ್ನು ಬಹುಭಾಷಾ ನಟಿ 40 ರ ಆಸು-ಪಾಸಿನಲ್ಲಿದ್ದು ಆದರೂ ಇನ್ನೂ ಮದುವೆಯಾಗಿಲ್ಲ.

ಈ ಬಗ್ಗೆ ಸದಾ ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತಾಡುವಾಗ ಮದುವೆ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಮದುವೆ ಆಗುತ್ತೇನೋ ಇಲ್ಲವೋ ಅನ್ನೋದನ್ನೂ ಹೇಳಿದ್ದು ನಾನು ಲೈಫ್‌ನಲ್ಲಿ ಖುಷಿಯಾಗಿರಬೇಕು.
ಖುಷಿಯಾಗಿರೋ ಬದುಕು ಸಾಗಿಸಬೇಕು. ಯಾರಾದರೂ ಮದುವೆ ಆಗ್ಬೇಕು ಅಂತ ಬಯಸಿದರೆ ಒಬ್ಬರನ್ನೊಬ್ಬರು ಅವಲಂಬಿಸಿದ್ದರೆ, ಅವರು ಖುಷಿಯಾಗಿರಲು ಸಾಧ್ಯವಿಲ್ಲ. ಸದ್ಯ ನನಗೆ ಮದುವೆ ಯೋಚನೆ ಇಲ್ಲ. ಇನ್ನು ಯಾರನ್ನೂ ಪ್ರೀತಿಸುವುದಿಲ್ಲ. ನನಗೆ ಇಷ್ಟ ಆಗುವ ಹುಡುಗ ಸಿಕ್ಕಿದರೆ ಕಂಡಿತಾ ಮದುವೆಯಾಗುತ್ತೇನೆ. ಎಂದಿದ್ದಾರೆ ನಟಿ ಸದಾ.

ಇನ್ನು ಸದಾ ಅವರು ನಾಯಕಿಯಾಗಿ ಫೇಮಸ್ ಆಗಿದ್ದಾಗ ಒಬ್ಬ ಹೀರೋವನ್ನು ಪ್ರೀತಿ ಮಾಡಿದ್ದರಂತೆ. ಇಬ್ಬರು ಕೆಲ ಸಮಯ ಪ್ರೀತಿ ಮಾಡಿದ ನಂತರ ಆ ಹೀರೋ ಮದುವೆ ಆಗುವುದಕ್ಕೆ ನೋ ಎಂದರಂತೆ. ಆ ನೋವಿನಲ್ಲೇ ಸದಾ ಅವರು ಮದುವೆಯಾಗದೆ ಉಳಿದಿದ್ದು ಯಾವಾಗಲೂ ಸಹ ಅವರು ಆ ನಟನ ನೆನಪಿನಲ್ಲಿದ್ದಾರೆ ಎಂದು ಅನ್ನಿಸುತ್ತದೆ. ಸದ್ಯ ಈ ಕಾರಣಕ್ಕೆ ಸದಾ ಅವರಿಗೆ ಮದುವೆಯಾಗಿಲ್ಲ.

ಅಷ್ಟೇ ಅಲ್ಲದೆ ಸದಾ ಅವರು ಈಗ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಯಾವುದೇ ಪಾತ್ರದಲ್ಲಿ ನಟಿಸಲು ಸಿದ್ಧವಾಗಿದ್ದಾರೆ ಸದಾ. ಆದರೆ ಇವರಿಗೆ ಸಕ್ಸಸ್ ನೀಡುವಂತಹ ಪಾತ್ರಗಳು ಸದಾ ಅವರನ್ನು ಹುಡುಕಲು ಬರುತ್ತಿಲ್ಲ. ಇನ್ನು ಸದಾ ಅವರು ಡಿಪ್ರೆಶನ್ ನಲ್ಲಿದ್ದು ಅವರು ತಾವು ಇಷ್ಟಪಟ್ಟ ಆ ನಟ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ.

ಇನ್ನುಮುಂದೆ ಆದರು ರಿವೀಲ್ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ. ಇನ್ನು ನಟಿ ಸದಾ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಕನ್ನಡಕ್ಕೂ ಬಂದಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ ಮೋನಾಲಿಸಾ ಸಿನಿಮಾದಲ್ಲಿ ಧ್ಯಾನ್ ಜೊತೆ ನಟಿಸಿದ್ದು ಆ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಮೋಹನಿ ಶಿವಣ್ಣ ನಟಿಸಿದ ಮೈಲಾರಿ ವಿ ರವಿಚಂದ್ರನ್ ಸಿನಿಮಾ ಮಲ್ಲಿಕಾರ್ಜುನಾ. ಉಪೇಂದ್ರ ನಟಿಸಿದ ಆರಕ್ಷಕದಲ್ಲಿ ನಟಿಸಿದ್ದಾರೆ.