ದೇಶಾದ್ಯಂತ ಧೂಳ್ಳೆಬ್ಬಿಸಿದ ಕಾಂತಾರ ಚಿತ್ರದ ಬಗ್ಗೆ ದಿನದಿನವೂ ಹೊಸ ಹೊಸ ಅಪ್ಡೇಟ್ಸ್ ಕೇಳಿಬರುತ್ತಿದ್ದು ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದರೂ ಈ ಸಿನಿಮಾ ಈಗಲೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹೌದು ರಿಷಬ್ ಶೆಟ್ಟಿ ಅವರಿಗೆ ಮೆಚ್ಚುಗೆಯ ಮಳೆ ಸುರಿಸಲಾಗುತ್ತಿದ್ದು ತುಳುನಾಡಿನ ಸಂಪ್ರದಾಯವನ್ನು ಸಾರುವ ಈ ಚಿತ್ರಕ್ಕೆ ಇಡೀ ದೇಶವೇ ಮನಸೋತಿದೆ.
ಪ್ರಭಾಸ್ ಅನುಷ್ಕಾ ಶೆಟ್ಟಿ ರಜನಿಕಾಂತ್ ಕಂಗನಾ ರಣಾವತ್ ವಿವೇಕ್ ಅಗ್ನಿಹೋತ್ರಿ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನು ಕೊಂಡಾಡಿದ್ದು ಇಷ್ಟೆಲ್ಲ ಪ್ರಶಂಸೆ ಪಡೆದ ಸಿನಿಮಾವನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಬೇಕು ಎಂಬ ಆಸೆ ಎಲ್ಲ ಪ್ರೇಕ್ಷರಿಗೂ ಇದೆ.
ಈಗಾಗಲೇ ಚಿತ್ರಮಂದಿರದಲ್ಲಿ ನೋಡಿರುವವರು ಕೂಡ ಈ ಚಿತ್ರದ ಒಟಿಟಿ ರಿಲೀಸ್ಗಾಗಿ ಕಾದಿದ್ದು ಯಾವ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಕಾಂತಾರ ವೀಕ್ಷಣೆಗೆ ಲಭ್ಯವಾಗಲಿದೆ ಗೊತ್ತಾ? ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಚಿತ್ರ ಪ್ರಸಾರ ಆಗಲಿದ್ದು ಅಷ್ಟಕ್ಕೂ ಅಮೇಜಾನ್ ಪ್ರೈಮ್ ಎಷ್ಟು ಹಣ ಕೊಟ್ಟು ಕಾಂತಾರ ಖರೀದಿ ಮಾಡಿದೆ ಗೊತ್ತಾ? ತಿಳಿಸುತ್ತೆವೆ ಮುಂದೆ ಓದಿ.
ಸದ್ಯ ದಕ್ಷಿಣ ಭಾರತದಲ್ಲಿ ಅಮೇಜಾನ್ ಪ್ರೈಂ ವಿಡಿಯೋ ಹೆಚ್ಚು ಪ್ರಾಬಲ್ಯ ಹೊಂದಿದ್ದು ನೆಟ್ಫ್ಲಿಕ್ಸ್ಗೆ ಹೋಲಿಸಿದರೆ ದಕ್ಷಿಣದ ಸಿನಿಮಾಗಳು ಹೆಚ್ಚಾಗಿ ಸಿಗುವುದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ. ಹೌದು ಹಾಗಾಗಿ ದಕ್ಷಿಣದ ಮಂದಿ ಹೆಚ್ಚಾಗಿ ಈ ಒಟಿಟಿಗೆ ಚಂದಾದಾರರಾಗಿದ್ದು ಕಾಂತಾರ ಕೂಡ ಅಮೇಜಾನ್ ಪ್ರೈಂ ವಿಡಿಯೋ ಮೂಲಕವೇ ವೀಕ್ಷಣೆಗೆ ಲಭ್ಯವಾಗಲಿದೆ ಎಂಬ ಸುದ್ದಿ ಕೇಳಿ ದಕ್ಷಿಣ ಭಾರತದ ಪ್ರೇಕ್ಷಕರು ಖುಷಿಪಟ್ಟಿದ್ದಾರೆ.
ಕಾಂತಾರ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಒಟಿಟಿ ವ್ಯವಹಾರ ನಡೆದಿದ್ದು ಆದರೆ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇರಲಿಲ್ಲ. ಆದರೆ ನಂತರದಲ್ಲಿ ಎಲ್ಲವೂ ಬದಲಾಯಿತು. ತಮಿಳು ಮಲಯಾಳಂ ಹಿಂದಿ ತೆಲುಗು ಭಾಷೆಗಳಿಗೆ ಡಬ್ ಆಗಿ ಈ ಚಿತ್ರ ಸಖತ್ ಕಮಾಯಿ ಮಾಡಿತು.
ಈಗಲೂ ಅನೇಕ ಚಿತ್ರಮಂದಿರದಲ್ಲಿ ಕಾಂತಾರ ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಒಟಿಟಿ ರಿಲೀಸ್ ಕೊಂಚ ತಡವಾಗಿದೆ. ಹಾಗಿದ್ದರೂ ಕೂಡ ನವೆಂಬರ್ ತಿಂಗಳಲ್ಲೇ ಈ ಚಿತ್ರ ಒಟಿಟಿಗೆ ಕಾಲಿಡಲಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು ಆದರೆ ಈ ಬಗ್ಗೆ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.
ಕೆಜಿಎಫ್: ಚಾಪ್ಟರ್ 2 ನಂತರ ಕಾಂತಾರ’ ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಸಖತ್ ಲಾಭ ಆಗಿದೆ. ರಿಷಬ್ ಶೆಟ್ಟಿ ಮಾಡಲಿರುವ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುವಂತಾಗಿದೆ. ಕಾಂತಾರ 2 ಬರಲಿ ಎಂದು ಕೂಡ ಅನೇಕರು ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಇದೀಗ ಅಮೆಜಾನ್ ಪ್ರೈಂ ಎಷ್ಟು ಕೋಟಿ ಹಣ ಕೊಟ್ಟು ಕಾಂತಾರು ಸಿನಿಮಾವನ್ನು ಖರೀದಿ ಮಾಡಿದೆ ಎಂಬ ಲೆಕ್ಕಾಚಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದು ಬಲ್ಲ ಮೂಲ ಗಳಿಂದ ಬಂದಿರುವ ಮಾಹಿತಿ ಪ್ರಕಾರ ಸರಿ ಸುಮಾರು ಎಂಬತ್ತು ಕೋಟಿಗೆ ಕಾಂತಾರ ಸಿನಿಮಾವನ್ನ ಅಮೇಜಾನ್ ಪ್ರೈಮ್ ಖರೀದಿ ಮಾಡಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಇದು ಕೂಡ ದಾಖಲೆಯಾಗುತ್ತದೆ.