ವಾರ್ತಾ ಮಂಜರಿ
Trending Stories, Viral News, Gossips & Everything in Kannada

500 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ ಲೋಹಿತಾಶ್ವ ಅವರು ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ….

1,600

ನಮ್ಮ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ ಲೋಹಿತಾಶ್ವ ಅವರು ಅಗಲಿದ್ದು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೌದು ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಗಲಿದ್ದು ಸಂಜೆ 7.30ರ ನಂತರ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗಿತ್ತು.

ಅಲ್ಲಿ ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಲೋಹಿತಾಶ್ವ ಅವರ ಹುಟ್ಟೂರು ತುಮಕೂರು ಬಳಿಯ ತೊಂಡಗೆರೆ ಗ್ರಾಮದಲ್ಲಿ ಕೊನೆಯವಿಧಿ ನಡೆಸಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು ಐನೂರು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಲೋಹಿತಾಶ್ವ ತಮ್ಮ ಜೀವಾವಧಿಯಲ್ಲಿ ಗಳಿಸಿದ್ದ ಆಸ್ತಿ ಎಷ್ಟು ಗೊತ್ತಾ? ತಿಳಿಸುತ್ತೇವೆ ಮುಂದೆ ಓದಿ.

ಲೋಹಿತಾಶ್ವ ರವರ ಪುತ್ರ ಶರತ್ ಲೋಹಿತಾಶ್ವ ನಟರಾಗಿ ಗುರುತಿಸಿಕೊಂಡಿದ್ದು ಲೋಹಿತಾಶ್ವ ಅವರಿಗೆ ಮೂವರು ಮಕ್ಕಳು. ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಅವರು ನಟಿಸಿದ ನಾಟಕದ ಪಾತ್ರವೊಂದನ್ನು ನೋಡಿ ಶಂಕರ್ ನಾಗ್ ಅವರು ಗೀತಾ ಚಿತ್ರದಲ್ಲಿ ಅವಕಾಶ ನೀಡಿದರು.

ಅದು ಲೋಹಿತಾಶ್ವ ಅವರ ಮೊದಲ ಕಮರ್ಷಿಯಲ್‌ ಸಿನಿಮಾವಾಗಿತ್ತು. ಹೌದು ಸುಮಾರು 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದ ಲೋಹಿತಾಶ್ವ ಅವರು ನಾಟಕ ದೂರದರ್ಶನದ ಧಾರಾವಾಹಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು ಲೋಹಿತಾಶ್ವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. 40 ವರ್ಷಗಳ ಕಾಲ ನಾನಾ ಕಡೆ ಅವರು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಇನ್ನು ನೇರವಾದ ಸ್ವಭಾವವನ್ನು ಹೊಂದಿದ್ದ ಲೋಹಿತಾಶ್ವ ಅವರು ಗ್ರಾಮೀಣ ಬದುಕಿನ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದರು.ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ವಿಧಿವಶ

ಡಾ. ರಾಜ್‌ಮಾರ್ ಡಾ. ವಿಷ್ಣುವರ್ಧನ್ ಡಾ. ಅಂಬರೀಷ್ ಶಂಕರ್ ನಾಗ್ ಶಿವರಾಜ್‌ಕುಮಾರ್ ಮುಂತಾದ ಕಲಾವಿದರ ಜೊತೆಗೆ ಬಣ್ಣ ಹಚ್ಚಿದ್ದ ಲೋಹಿತಾಶ್ವ ರವರು ಕಳೆದ ಎರಡು ದಶಕಗಳಿಂದ ಸಿನಿಮಾರಂಗದಲ್ಲೇ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ಹೌದು ತಮ್ಮ ಸ್ವಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದು ಅವರಿಗೆ ಮೊದಲಿನಿಂದಲೂ ಕೃಷಿಯ ಬಗ್ಗೆ ಒಲವಿತ್ತು. ಗ್ರಾಮೀಣ ಬದುಕನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಇನ್ನು ನಟನೆ ಜೊತೆಗೆ ಬರವಣಿಗೆ ಟೈಲರಿಂಗ್ ಕೂಡ ಅವರ ಹವ್ಯಾಸವಾಗಿತ್ತು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಕೊಡಿಸುತ್ತಿದ್ದರು ಪುತ್ರ ಶರತ್. ಈ ಹಿಂದೆ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಶರತ್‌ ರವರು ಆಸ್ಪತ್ರೆಗೆ ದಾಖಲಿಸಿದ ಮೂರನೇ ದಿನದ ನಂತರ ಅವರಿಗೆ ಉಸಿರಾಟ ತೊಂದರೆ ಆಗಿ ನನ್ನ ಕಣ್ಣಮುಂದೆಯೇ ಹೃದಯಾಘಾತ ಕೂಡ ಆಗಿತ್ತು. ಕೂಡಲೇ ವೈದ್ಯರು ಸಿಪಿಆರ್ ಮಾಡಿದ್ದರು. ಸದ್ಯ ಅವರ ಸ್ಥಿತಿ ತುಂಬ ಗಂಭೀರವಾಗಿದೆ. ಆ ಬಗ್ಗೆ ನಮಗೆ ಬೇಜಾರ್ ಇದೆ.

ಸದ್ಯ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದರು.ಆದರೆ ವಿಧಿವಷಫ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನೂ ಸಿನಿ ಜೀವನದಲ್ಲಿ 500 ಸಿನಿಮಾದಲ್ಲಿ ಅಭಿನಯಿಸಿರುವ ಲೋಹಿತಾಶ್ವ ಅವರು ಗಳಿಸಿರುವ ಆಸ್ತಿಯ ಬಗ್ಗೆ ನೋಡುವುದಾದರೆ ಹುಟ್ಟೂರಿನಲ್ಲಿ ಸ್ವಂತ ಮನೆಯೊಂದು ಕಟ್ಟಿಸಿದ್ದ ಲೋಹಿತಾಶ್ವ ರವರು ಮೂರು ಐಶಾರಾಮಿ ಕಾರುಗಳನ್ನ ಹೊಂದಿದ್ದರು. ಅಲ್ಲದೇ ಬರೋಬ್ಬರಿ ನಾಲ್ಕು ಕೋಟಿ ಆಸ್ತಿಯನ್ನು ಕೂಡ ಹೊಂದಿದ್ದು ಇದೀಗ ಅವರ ಆಸ್ತಿ ಎಲ್ಲಾ ಅವರ ಮಕ್ಕಳಿಗೆ ಸಮಪಾಲಾಗಿ ಹೋಗಲಿದೆ. ನಟ ಲೋಹಿತಾಶ್ವ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.