ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಂತಾರ ಗುರುವ ಪಾತ್ರಧಾರಿಗೆ ರಿಷಬ್ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ….ನೋಡಿ

379

ಕಾಂತಾರ ಚಿತ್ರ ಎಲ್ಲೆಡೆ ಸೂಪರ್ ಹಿಟ್ ಆಗಿದ್ದು ೩೦೦ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಸಿಕ್ಕಾಪಟ್ಟೆ ಸ್ಪೀಡಾಗಿ ಓಡುತ್ತಿದೆ. ಹೌದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರ ಈಗ ಬೇರೆ ಭಾಷೆಗಳಲ್ಲಿಯೂ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದ್ದು ವಿದೇಶಗಳಲ್ಲಿಯೂ ಕಾಂತಾರ ಹವಾ ಶುರುವಾಗಿದ್ದು ರಿಷಬ್ ಶೆಟ್ಟಿ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಇನ್ನು ಸಿನಿಮಾ ಕುರಿತು ಬಹಳಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಸಿನಿಮಾದಲ್ಲಿ ಬರುವ ಪಾತ್ರಗಳು ಲೊಕೇಷನ್ ಶೂಟಿಂಗ್ ವಿಚಾರವಾಗಿ ಆಸಕ್ತಿದಾಯಕ ವಿಚಾರಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಲೇ ಇದೆ. ಇನ್ನು ಸಿನಿಮಾ ನಟರ ಸಂಭಾವನೆ ಕುರಿತು ಚರ್ಚೆ ನಡೆಯುತ್ತಲೆ ಇದ್ದು ಚಿತ್ರದಲ್ಲಿ ಗುರುವ ಪಾತ್ರ ಮಾಡಿದ ನಟನ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರದಲ್ಲಿ ಗುರುವ ಎಂಬ ಪಾತ್ರ ಮಾಡಿದ್ದು ಸ್ವರಾಜ್ ಶೆಟ್ಟಿ ಎನ್ನುವ ನಾಟಕ ಹಾಗೂ ಕಿರುತೆರೆ ಕಲಾವಿದ. ಹೌದು ದೈವ ಪಾತ್ರಧಾರಿಯಾಗಿ ನಟಿಸಿದ ಗುರುವನ ಪಾತ್ರ ಅದ್ಭುತವಾಗಿ ಮೂಡಿ ಬಂದಿದ್ದು ಸ್ವಲ್ಪ ಹೊತ್ತು ಕಾಣಿಸಿಕೊಂಡು ಹೆಚ್ಚು ಡೈಲಾಗ್ ಇರದಿದ್ದರೂ ಗುರುವನ ಪಾತ್ರದ ಮಹತ್ವ ದೊಡ್ಡದು ಎನ್ನಬಹುದು.

ಶಿವ ಮರ ಕತ್ತರಿಸುವಾಗ ಆ ಮರ ಫಾರೆಸ್ಟ್ ಗಾರ್ಡ್ ಜೀಪ್ ಮೇಲೆ ಬಿದ್ದು ದೊಡ್ಡ ಅಚಾತುರ್ಯವಾಗುತ್ತದೆ. ಇನ್ನು ಶಿವ ಜೈಲು ಸೇರುತ್ತಾನೆ. ಅತ್ತ ಹೊರಗಡೆ ಸೀನ್ ಬದಲಾಗಿದ್ದು ಭೂಮಾಲೀಕನ ನಿಜವಾದ ಮುಖವಾಡ ಬಯಲಾಗುತ್ತದೆ. ದೈವಪಾತ್ರಧಾರಿಯಾಗುವ ಗುರುವನ ಪ್ರಾಣ ತೆಗೆಯಲಾಗುತ್ತದೆ.

ಆದರೆ ಹೊರಗೆ ಗುರುವನಿಗೆ ಹೀಗೆ ನಡೆದಿರುವ ವಿಚಾರ ಶಿವನಿಗೆ ಗೊತ್ತಾಗಿರುವುದಿಲ್ಲ. ಆದರೆ ಆಗಾಗ ಶಿವನಿಗೆ ದೈವ ಕನಸಿನಲ್ಲಿ ಕಾಣುವಂತೆ ಆ ದಿನವೂ ಕಾಣುತ್ತದೆ. ಹೌದಯ ಕತ್ತಲ ಕೋಣೆಯಲ್ಲಿ ದೈವ ಕುಳಿತು ವೇದನೆಯಲ್ಲಿ ಅಳುವ ದೃಶ್ಯ ಶಿವನಿಗೆ ಕಾಣುತ್ತದೆ. ರಾತ್ರಿಯ ಮಬ್ಬುಗತ್ತಲು ಜೈಲಿನ ಕಂಬಿಗಳು ಬೆಳಕು ನೆರಳಿನಾಟ ಅಲ್ಲಿ ದೈವ ಕುಳಿತು ಕೊಂಡು ವೇದನೆಯಲ್ಲಿ ಅಳುತ್ತಿರುವ ಸದ್ದು.

ಹೌದು ಈ ದೃಶ್ಯ ಸಿನಿಮಾ ನೋಡಿದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈ ದೃಶ್ಯದಲ್ಲಿ ಗುರುವನ ಅಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಭಾವ ಪರವಶವಾಗಿಸುತ್ತದೆ. ಇನ್ನು ದೃಶ್ಯದ ಬಗ್ಗೆ ಮಾತನಾಡಿದ ಸ್ವರಾಜ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಹೊಸ ವಿಚಾರ ರಿವೀಲ್ ಮಾಡಿದ್ದು ಈ ಸೀನ್​ನಲ್ಲಿ ಸ್ವರಾಜ್ ಅವರು ಇಜಕ್ಕೂ ಅತ್ತಿದ್ದರಂತೆ. ಶೂಟಿಂಗ್​​ಗೆ ಬಹಳ ತಡವಾಗಿ ಬಂದಿದ್ದು ಒಂದು ಕಾರಣ.

ಉಡುಪಿಯ ಜೈಲಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ನಾನು ತಡವಾಗಿ ಬಂದಿದ್ದೆ. ಮೇಕಪ್ ಮಾಡಿ ಸೀನ್ ಮಾಡಲು ಬಂದಾಗ ರಿಷಬ್ ಅವರು ಸಿಟ್ಟಿನಲ್ಲಿದ್ದರು. ಮಾತನಾಡಿಸಲಿಲ್ಲ. ಹೆಸರು ಕರೆದು ಮಾತನಾಡಿಸೋ ರಿಷಬ್ ಅವರ ಮೌನ ನನಗೆ ಸಹಿಸಲು ಸಾಧ್ಯವಾಗಿಲ್ಲ. ಹೌದು ಅಯ್ಯೋ ಇದೆಂಥಾ ಸ್ಥಿತಿಗೆ ತಲುಪಿದೆ ಎನಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ ಗುರುವ.

ಈ ದೃಶ್ಯವನ್ನು ಮಾಡುವಾಗ ಸ್ವರಾಜ್ ಅವರ ಮನಸ್ಥಿತಿ ನಿಜವಾಗಿಯೂ ಅಳುವ ಹಾಗೆಯೇ ಇತ್ತು.ಮನಸಿನಲ್ಲಿ ನೋವಿತ್ತು. ವೇಷ ಧರಿಸಿ ಗುರುವ ಅಭಿನಯಿಸಿದಾಗ ಅದು ಅದ್ಭುತವಾಗಿ ಮೂಡಿ ಬಂದಿದ್ದು ಹಾಗಾಗಿಯೇ ಈ ದೃಶ್ಯ ತುಂಬಾ ನೈಜ್ಯವಾಗಿಯೂ ಮೂಡಿ ಬಂದಿತ್ತು ಎಂದಿದ್ದಾರೆ. ಇನ್ನು ಈ ಕಲಾವಿದನಿಗೆ ಗುರುವ ಪಾತ್ರ ಮಾಡಲು ಕಾಂತರ ತಂಡ ಸುಮಾರು ೧೦ ಲಕ್ಷ ಸಂಭಾವನೆ ನೀಡಿದ್ದು ಈ ಕುರಿತು ಮಾತನಾಡಿದ ಸ್ವರಾಜ್ ಶೆಟ್ಟಿ
ನಾನು ಪಡೆದ ಅತೀ ದೊಡ್ಡ ಮೊತ್ತವಿದು.ರಿಷಬ್ ರವರಿಗೆ ನಾನು ಚಿರಋುಣಿ ಎಂದಿದ್ದಾರೆ.