Punith: ನಮ್ಮ ಚೆಂದನವನ ಕಂಡಂತಹ ಹಾಸ್ಯ ದಿಗ್ಗಜರಲ್ಲಿ ನಟ ಟೆನ್ನಿಸ್ ಕೃಷ್ಣ ಕೂಡ ಪ್ರಮುಖರಾಗಿದ್ದಾರೆ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು 600ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ ಟೆನ್ನಿಸ್ ಕೃಷ್ಣ ರವರು ಇತಿಹಾಸವನ್ನೆ ಸೃಷ್ಟಿಸಿದ್ದು ದೊಡ್ಡಣ್ಣ ಮತ್ತು ಟೆನ್ನಿಸ್ ಕೃಷ್ಣ ಕಾಂಬಿನೇಷನ್ ಇರುವ ಹಾಸ್ಯದೃಶ್ಯಗಳನ್ನು ಕನ್ನಡ ಸಿನಿರಸಿಕರು ಇಂದಿಗೂ ಸಹ ಮರೆತಿಲ್ಲ.
ಹೌದು ಟೆನ್ನಿಸ್ ಕೃಷ್ಣ ರವರು ಗಡಿಬಿಡಿ ಗಂಡ ಸಿನಿಮಾದಲ್ಲಿ ಬಾಯಿಂದ ಬಂದಂತಹ ಮಾರಮ್ಮನ ಡಿಸ್ಕೊ ಡೈಲಾಗ್ ಎಷ್ಟು ಜನಪ್ರಿಯವಾಗಿತ್ತು ಎಂದರೆ ಇತ್ತೀಚೆಗೆ ಕನ್ನಡ ರಾಪ್ ಸಿಂಗರ್ ಆಲ್ ಓಕೆ ರವರು ಕೂಡ ಈ ಸಂಭಾಷಣೆ ಇಟ್ಟುಕೊಂಡು ಹೊಸ ರಾಪ್ ಸಾಂಗ್ ಅನ್ನೇ ಮಾಡಿದ್ದರು. ಅಲ್ಲದೇ ಆ ರಾಪ್ ಸಾಂಗ್ ನಲ್ಲಿ ಟೆನ್ನಿಸ್ ಕೃಷ್ಣ ಕೂಡ ಕಾಣಿಸಿಕೊಂಡಿದ್ದು ವಿಶೇಷವಾಗಿದ್ದು ಮಾರಮ್ಮನ ಡಿಸ್ಕೊ ಹಾಡು ಕೂಡ ಅಷ್ಟೇ ಫೇಮಸ್ ಆಗಿದೆ.
ಇನ್ನು ಸಾಮಾನ್ಯವಾಗಿ ಬಗುತೇಕರಿಫೆ ಕೃಷ್ಣ ಅವರ ಹೆಸರಿನ ಜೊತೆ ಟೆನ್ನಿಸ್ ಎಂಬ ಪದ ಸೇರಿಕೊಳ್ಳಲು ಕಾರಣವೇನು ಎಂಬುದು ತಿಳಿದಿಲ್ಲ. ಕೃಷ್ಣ ರವರು ಚಿತ್ರರಂಗಕ್ಕೆ ಬರುವ ಮುನ್ನಾ ಟೆನ್ನಿಸ್ ಕೋಚ್ ಆಗಿದ್ದು ಇದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಆ ಸಮಯದಲ್ಲಾಗಲೇ ಕೃಷ್ಣ ಎಂಬ ಹೆಸರಿನಲ್ಲಿ ಬೇರೆ ಕಲಾವಿದರು ಇದ್ದ ಕಾರಣ ಇವರನ್ನು ಗುರುತಿಸಲು ಸುಲಭ ಆಗಲಿ ಎಂದು ಟೆನ್ನಿಸ್ ಕೃಷ್ಣ ಎಂದು ಇಟ್ಟರು.
1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅಭಿನಯ ಪ್ರಾರಂಭ ಮಾಡಿದ ಟೆನ್ನಿಸ್ ಕೃಷ್ಣ ಅವರು ರಾಜ ಕೆಂಪು ರೋಜಾ ಸಿನಿಮಾ ಮೂಕ್ತ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ತದನಂತರ ಒಂದಾದ ಮೇಲೊಂದು ಕನ್ನಡ ಸಿನಿಮಾಗಳಲ್ಲಿ ಹಾಸ್ಯಪಾತ್ರಗಳಲ್ಲಿ ನಟಿಸಿದ್ದು ಕನ್ನಡದ ಮೇರು ನಟರಾದ ಡಾ ರಾಜ್ ಕುಮಾರ್ ಸಾಹಸಸಿಂಹ ವಿಷ್ಣುವರ್ಧನ್ ರೆಬೆಲ್ ಸ್ಟಾರ್ ಅಂಬರೀಶ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅನಂತ್ ನಾಗ್ ಸೇರಿದಂತೆ ಹೀಗೆ ಬಹುತೇಕ ಎಲ್ಲಾ ಕಲಾವಿದಗಳು ಜೊತೆ ಕೂಡ ಅಭಿನಯಿಸಿದ್ದಾರೆ.
ಇನ್ನು ಲೆಜೆಂಡರಿ ಆಕ್ಟರ್ ಗಳ ಜೊತೆಗೆ ಈಗಿನ ಸ್ಟಾರ್ ನಟರಾದ ದರ್ಶನ್ ಕಿಚ್ಚ ಸುದೀಪ್ ಶಿವಣ್ಣ ಪುನೀತ್ ರಾಜ್ ಕುಮಾರ್ ಜೊತೆಗೆ ಸಹ ಟೆನಿಸ್ ಕೃಷ್ಣ ರವರು ಅಭಿನಯಿಸಿದ್ದು ಹಾಸ್ಯನಟಿ ರೇಖಾ ದಾಸ್ ಅವರೊಡನೆ ಸರಿ ಸುಮಾರು 100 ಕ್ಕು ಹೆಚ್ಚು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿರುವ ಕೀರ್ತಿ ಇವರದ್ದು.
ಆದರೆ ಇತ್ತೀಚಿನ ದಿನಗಳಲ್ಲಿ ನಟ ಟೆನ್ನಿಸ್ ಕೃಷ್ಣರವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದು ವರುಷಕ್ಕೆ ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸುವುದು ಕೂಡ ಕಷ್ಟವಾಗಿದೆ. ಅಲ್ಲದೇ ಚಿತ್ರರಂಗದಲ್ಲಿ ತಮಗೆ ಸರಿಯಾದ ಮರ್ಯಾದೆ ಕೂಡ ಸಿಗುತ್ತಿಲ್ಲ ಎಂದು ಸ್ವತಃ ಟೆನ್ನಿಸ್ ಕೃಷ್ಣ ರವರು ಹೇಳಿಕೊಂಡಿದ್ದು ಇದರ ನಡುವೆ ನಮ್ಮ ಅಪ್ಪು ಬದುಕಿದ್ದಾಗ ಒಂದು ಕಾರ್ಯಕ್ರಮದಲ್ಲಿ ಯಾವ ರೀತಿ ಗೌರವ ನೀಡಿದ್ದಾರೆ ಗೊತ್ತಾ? ನೀವೆ ನೋಡಿ.