Chikkanna: ಸಿನಿಮಾವೆಂದರೆ ಅದೊಂದು ಮಾಯಲೋಕ. ಈ ಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಆದರಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ನಟನಾ ಕೌಶಲ್ಯವಿರುವ ಅದೆಷ್ಟೋ ಜನರನ್ನು ಕೈ ಬಿಸಿ ಕರೆಯುವ ಚಿತ್ರರಂಗ, ಸಿನಿಮಾದ ಸಹವಾಸ ಬೇಡವೇ ಬೇಡ ಎಂದು ಕೈ ಕಟ್ಟಿ ಕುಳಿತವರು ಇದ್ದಾರೆ.ಚಿತ್ರರಂಗ ಅನೇಕ ಪ್ರತಿಭೆಗಳಿಗೆ ಅವಕಾಶದ ಜೊತೆಗೆ ಅದೃಷ್ಟ ಕೂಡ ಕೈ ಹಿಡಿದಿದೆ ಅಂತಹ ಸಾಕಷ್ಟು ಪ್ರತಿಭೆಗಳು ನಮ್ಮ ಕಣ್ಣ ಮುಂದೆ ಇದ್ದಾರೆ.
ಇನ್ನು ಅನೇಕರು ಒಂದೆರಡು ಸಿನಿಮಾಗಳ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದರೂ ಕೂಡ ಅದೃಷ್ಟ ಕೈ ಹಿಡಿಯದೇ ಚಿತ್ರರಂಗದಿಂದಲೇ ದೂರ ಉಳಿದು ಬಿಟ್ಟರು. ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ಗೊತ್ತಿಲ್ಲ ಹೇಳಿ? ಪಕ್ಕ ಹಳ್ಳಿ ಪ್ರತಿಭೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇದೀಗ ಬಹುಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಅಭಿನಯದ ಮೂಲಕ ಪ್ರತಿಯೊಬ್ಬರನ್ನು ಕೂಡ ನಗೆಗಡಲಲ್ಲಿ ತೇಲಿಸುತ್ತಿದ್ದ ಹಾಸ್ಯ ನಟ ಎಂದರೆ ಚಿಕ್ಕಣ್ಣ ರವರು. ಹೌದು ಕಿರಾತಕ ಎಂಬ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಈ ನಟ ಅಲ್ಪ ಅವಧಿಯಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿದ್ದು, ತನ್ನ ವಿಶಿಷ್ಟ ಸಂಭಾಷಣೆ ಹಾಗೂ ಅತ್ಯದ್ಬುತ ನಟನೆಯಿಂದ ಅಭಿಮಾನಿಗಳ ಹೊಟ್ಟೆಯನ್ನು ಹುಣ್ಣಾಗುವಂತೆ ನಗಿಸುತ್ತಿದ್ದಾರೆ. ಸದ್ಯ ಚಿಕ್ಕಣ್ಣ ಹಾಡಿರುವ ಅಪರೂಪದ ಈ ಹಾಡು ಕೇಳಿ.