ವಾರ್ತಾ ಮಂಜರಿ
Trending Stories, Viral News, Gossips & Everything in Kannada

Virat Kohli: ಸಿಕ್ಸ್ ಭಾರಿಸಿ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ ಸಂಭ್ರಮಿಸಿದ ಕಿಂಗ್ ವಿರಾಟ್ ಕೊಹ್ಲಿ, ಸಿಕ್ಸ್ ವಿಡಿಯೋ ಇಲ್ಲಿದೆ

113

ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರೀ ದಿನಗಳ ಬಳಿಕ 71ನೇ ಅಂತರಾಷ್ಟ್ರೀಯ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದು ಅಫ್ಘಾನಿಸ್ತಾನ ವಿರುದ್ಧ ತನ್ನ ವಿಶ್ವರೂಪ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಎರಡೂವರೆ ವರ್ಷಗಳ ಕಾಲ ಕಾಡಿದ್ದ ಶತಕವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 12 ಆಕರ್ಷಕ ಬೌಂಡರಿ ಹಾಗೂ 6 ಅಮೋಘ ಸಿಕ್ಸರ್‌ಗಳು ದಾಖಲಾದವು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕ ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ರವರು ಭರ್ಜರಿ 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಅಮೋಘ ಮತ್ತು ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕವನ್ನು ದಾಖಲಿಸಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ಫಾರ್ಮೆಟ್‌ನಲ್ಲಿ ಒಟ್ಟಾರೆ 70 ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ರವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನ ಸಿಡಿಸಿರಲಿಲ್ಲ. ಆದರೆ ಕೊನೆಗೂ ವಿರಾಟ್ ಕೊಹ್ಲಿಗೆ ಸಾಧ್ಯವಾಗದೇ ಉಳಿದಿದ್ದ ಶತಕ ಮೂಡಿಬಂದಿದ್ದು ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ವಿರಾಟ್ ಕೊಹ್ಲಿಅಮೋಘ ಶತಕ ದಾಖಲಿಸುವ ಮೂಲಕ ಚೊಚ್ಚಲ ಟಿ20 ಶತಕಕ್ಕೆ ಮುತ್ತಿಟ್ಟರು. ಈ ಮೂಲಕ ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

Watch: Virat Kohli's priceless celebration as he slams century after 1000 days | Cricket - Hindustan Times

ನವೆಂಬರ್ 2019ರಲ್ಲಿ ಕೊನೆಯ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ರವರು ಹತ್ತಿರ ಮೂರು ವರ್ಷಗಳ ಬಳಿಕ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದಾರೆ ಅಂದರೆ ನಂಬಲು ನಿಜಕ್ಕೂ ಆಶ್ಚರ್ಯವಾಗುತ್ತದೆ. ಕೊಹ್ಲಿ ಹೋದಲೆಲ್ಲಾ 71ನೇ ಶತಕ ಯಾವಾಗ ದಾಖಲಿಸುತ್ತಾರೆ ಎಂದು ಪ್ರಶ್ನೆಗಳೇ ಹೆಚ್ಚಿದ್ದು ಹೀಗಿರುವಾಗ ವಿರಾಟ್ ಕೊಹ್ಲಿ ಕೊನೆಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕಳೆದ 2.5 ವರ್ಷಗಳು ನನಗೆ ಬಹಳಷ್ಟು ಕಲಿಸಿದವು ನಾನು ಸ್ವಲ್ಪ ಆಘಾತಕ್ಕೊಳಗಾಗಿದ್ದೇನೆ ಏಕೆಂದರೆ ಇದು ನಾನು ಶತಕವನ್ನು ನಿರೀಕ್ಷಿಸಿದ ಕನಿಷ್ಠ ಸ್ವರೂಪವಾಗಿತ್ತು ಎಂದು ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿದ ಬಳಿಕ ಹೇಳಿಕೆ ನೀಡಿದ್ದಾರೆ.

ಇನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಭಾರತಕ್ಕಾಗಿ 50 ಕ್ಕೂ ಹೆಚ್ಚು ರನ್ ಗಳಿಸಿದ ವಿಚಾರದಲ್ಲಿ ಕೊಹ್ಲಿ ಇದೇ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದು ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕಗಳನ್ನು ಹೊಂದುವುದಷ್ಟೇ ಅಲ್ಲದೆ 195 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಮಾಸ್ಟರ್ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಪಡೆದಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ಪರ ಇದೀಗ ಕೊಹ್ಲಿ ಮತ್ತೊಂದು ದಾಖಲೆಯ ಪಟ್ಟಿಯಲ್ಲಿ ಸಚಿನ್ ಬಳಿಕ ನಂತರದ ಸ್ಥಾನ ಪಡೆದಿದ್ದಾರೆ. ಇನ್ನು ಕೋಹ್ಲಿ ಸಿಕ್ಸ್ ಹೊಡೆಯುವ ಮೂಲಕ ಶತಕ ಸಿಡಿಸಿದ್ದು ಈ ಅದ್ಬುತ ಕ್ಷಣ ಹೇಗಿತ್ತು ನೀವು ಒಮ್ಮೆ ನೋಡಿ.