ವಾರ್ತಾ ಮಂಜರಿ
Trending Stories, Viral News, Gossips & Everything in Kannada

Virat Kohli: ತಮ್ಮ 71ನೇ ಶತಕವನ್ನು ಪತ್ನಿ ಹಾಗೂ ಮಗಳಿಗೆ ಅರ್ಪಿಸಿದ ವಿರಾಟ್ ಕೊಹ್ಲಿ, ವೈರಲ್ ಆಯ್ತು ವಿರಾಟ್ ಹೇಳಿಕೆ

103

ವಿರಾಟ್ ಕೊಹ್ಲಿ ಯವರ ಶತಕಗಳ ಬರ ಕೊನೆಗೂ ಅಂತ್ಯಗೊಂಡಿದ್ದು 71 ನೇ ಅಂತಾರಾಷ್ಟ್ರೀಯ ಶತಕ ಕಿಂಗ್ ಬ್ಯಾಟ್‌ನಿಂದ ಹೊರಬಂದಿದೆ. ಹೌದು ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ರವರ ಬ್ಯಾಟ್ ಮತ್ತೊಮ್ಮೆ ರನ್ ಮಳೆ ಸುರಿಸಿದ್ದು ಕೊಹ್ಲಿ ಪೂರ್ಣ 1021 ದಿನಗಳ ನಂತರ ಅಂತಾರಾಷ್ಟ್ರೀಯ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ವಿರಾಟ್ ಕೊಹ್ಲಿ ಏಷ್ಯಾಕಪ್​ನ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು. ಇನ್ನು ತಮ್ಮ ಶತಕದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಮತ್ತೆ ರನ್ ಬಾರಿಸುವಲ್ಲಿ ಹೇಗೆ ಯಶಸ್ವಿಯಾದೆ ಎಂಬುದನ್ನು ವಿವರಿಸಿದ್ದು ಈ ವೇಳೆ ಪತ್ನಿ ಅನುಷ್ಕಾ ರನ್ನು ಕೂಡ ನೆನೆದಿದ್ದಾರೆ.

ಇಂಗ್ಲೆಂಡ್ ಪ್ರವಾಸದ ನಂತರ ತೆಗೆದುಕೊಂಡ 6 ವಾರಗಳ ವಿರಾಮ ನನಗೆ ತುಂಬಾ ಸಹಾಯ ಮಾಡಿತು ಎಂದು ವಿರಾಟ್ ಕೊಹ್ಲಿ ನುಡಿದಿದ್ದು ವಿರಾಟ್ ಕೊಹ್ಲಿ ವಿರಾಮದ ಬಳಿಕ ಕ್ರಿಕೆಟ್​ಗೆ ವಾಪಸ್ಸಾದ ನನಗೆ ರನ್​ ಗಳಿಸಬೇಕೆಂಬ ಯಾವುದೇ ಆತುರವಿರಲಿಲ್ಲ. 6 ವಾರಗಳ ವಿರಾಮದ ಬಳಿಕ ಇಂದು ನಾನು ತುಂಬಾ ಖುಷಿಯಾಗಿದ್ದೇನೆ. ವಿರಾಮದ ಅವದಿಯಲ್ಲಿ ಎಷ್ಟು ದಣಿದಿದ್ದೇನೆ ಎಂಬುದನ್ನು ನಾನು ಅರಿತುಕೊಂಡಿದ್ದು ಜೊತೆಗೆ ಈ ಬ್ರೇಕ್ ನನಗೆ ಮತ್ತೆ ಆಟವನ್ನು ಆನಂದಿಸಲು ಅವಕಾಶ ಮಾಡಿಕೊಟ್ಟಿತು.

ಕಳೆದ ಎರಡೂವರೆ ವರುಷಗಳಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದು ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಈಗ 34 ವರ್ಷಕ್ಕೆ ಕಾಲಿಡುತ್ತಿದ್ದು ನನ್ನ ಆಚರಣೆಯ ವಿಧಾನ ಬದಲಾಗಿದೆ. ಟಿ20 ಮಾದರಿಯಲ್ಲಿ ನನ್ನ ಶತಕ ಬಂದಿರುವುದು ನನಗೆ ಆಶ್ಚರ್ಯ ತಂದಿದ್ದು ಈ ಶತಕಕ್ಕೆ ನನ್ನ ತಂಡ ನನಗೆ ಸಾಕಷ್ಟು ಸಹಾಯ ಮಾಡಿದೆ ಎಂದಿದ್ದಾರೆ.

Watch: Virat Kohli Receives Standing Ovation From Indian Dressing Room  After Scoring His 71st International Century

ಇಂದು ನಾನು ಫೀಲ್ಡಿನಲ್ಲಿದ್ದರೆ ಅದಕ್ಕೆ ಅನುಷ್ಕಾ ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದು ವಿರಾಟ್ ಕೊಹ್ಲಿ ನಾನು ಇಂದು ಇಲ್ಲಿ ನಿಂತಿರುವುದು ಕೇವಲ ಒಬ್ಬ ವ್ಯಕ್ತಿಯಿಂದಾಗಿ ಆ ವ್ಯಕ್ತಿ ಬೇರ್ಯಾರು ಅಲ್ಲ ಅವರೇ ಅನುಷ್ಕಾ. ಈ ಶತಕ ಅನುಷ್ಕಾ ಮತ್ತು ನನ್ನ ಮುದ್ದು ಮಗಳು ವಾಮಿಕಾಗೆ ಅರ್ಪಿಸುತ್ತೇನೆ ಎಂದು ಕೊಹ್ಲಿ ಭಾವುಕವಾಗಿ ನುಡಿದಿದ್ದಾರೆ.

ಇನ್ನು ವಿರಾಟ್ ಕೊಹ್ಲಿ 1021 ದಿನಗಳ ನಂತರ ಶತಕ ಬಾರಿಸಿದ್ದು ವಿರಾಟ್ ಕೊಹ್ಲಿ ನವೆಂಬರ್ 23 2019 ರಂದು ಬಾಂಗ್ಲಾದೇಶದ ವಿರುದ್ಧ ಬಾಂಗ್ಲಾದೇಶದ ವಿರುದ್ಧ ಕೊನೆಯ ಶತಕವನ್ನು ಗಳಿಸಿದರು. ಆನಂತರ ವಿರಾಟ್ ಯಾವ ಸ್ವರೂಪದಲ್ಲೂ ಶತಕ ಬಾರಿಸಿರಲಿಲ್ಲ. ಆದರೆ ಅಫ್ಘಾನಿಸ್ತಾನ ವಿರುದ್ಧ ಅವರು ಕೇವಲ 53 ಎಸೆತಗಳಲ್ಲಿ ಶತಕ ಗಳಿಸಿದರು. ವಿರಾಟ್ ಕೊಹ್ಲಿ T20 ಮಾದರಿಯ ಮೊದಲ ಶತಕ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನ 71 ನೇ ಶತಕವನ್ನು ಬಾರಿಸಿದ್ದು ಈ ಮೂಲಕ ಕೊಹ್ಲಿ ಈಗ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ವಿಚಾರದಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ 522 ಇನ್ನಿಂಗ್ಸ್‌ಗಳಲ್ಲಿ 71 ಶತಕಗಳನ್ನು ಪೂರ್ಣಗೊಳಿಸಿದ್ದು ಆದರೆ ಪಾಂಟಿಂಗ್ ಇದಕ್ಕಾಗಿ 668 ಇನ್ನಿಂಗ್ಸ್‌ಗಳನ್ನು ಆಡಿದ್ದರು.

Anushka Sharma-Virat Kohli's daughter Vamika is new Internet sensation; see  pics shared by parents

ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಆಟಗಾರ ಎನಿಸಿಕೊಂಡಿದ್ದು ಈ ಮೂಲಕ ವಿರಾಟ್ ಕೊಹ್ಲಿ 2017 ರಲ್ಲಿ ಶ್ರೀಲಂಕಾ ವಿರುದ್ಧ 118 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಇನ್ನು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಅತಿ ಹಿರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು ವಿರಾಟ್ ಕೊಹ್ಲಿ 33 ವರ್ಷ 307 ದಿನಗಳಲ್ಲಿ ಶತಕ ಬಾರಿಸಿದ್ದರು. 31 ವರ್ಷ 299 ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ20 ಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ವಿರಾಟ್ ಹಿಂದಿಕ್ಕಿದ್ದಾರೆ.