ಇತ್ತೀಚೆಗಷ್ಟೇ ಮದುವೆಯಾದ ತಮಿಳಿನ ಜನಪ್ರಿಯ ನಿರೂಪಕಿ ಮಹಾಲಕ್ಷ್ಮೀ ಅವರು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು, ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ, ಈ ಜೋಡಿಯು ಟ್ರೋಲ್ ಕೂಡ ಆಗಿದ್ದು, ಇವರ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಆಗುತ್ತಿದೆ.
ರವೀಂದರ್ ತನ್ನ ಪತ್ನಿಗೆ ನೀಡಿದ ಉಡುಗೊರೆಯು ಸುದ್ದಿಯಾಗಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇದೀಗ ಮತ್ತೊಂದು ವಿಚಾರವು ಕೇಳಿ ಬರುತ್ತಿದ್ದು, ಮದುವೆಯು ಮುಂಚೆ ನಿರೂಪಕಿ ಮಹಾಲಕ್ಷ್ಮಿಯವರು ರವೀಂದರ್ ಅವರಿಗೆ ಷರತ್ತು ಹಾಕಿದ್ದಾರಂತೆ, ಆ ಷರತ್ತಿನ ಕುರಿತು ತಿಳಿದರೆ ಅಚ್ಚರಿಯಾಗುವುದು ಪಕ್ಕಾ.
ಮಹಾಲಕ್ಷ್ಮಿಯವರು ನಿರೂಪಕಿ ಕಮ್ ನಟಿಯಾಗಿ ಕೂಡ ಖ್ಯಾತಿ ಗಳಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಯವರು ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲೂ ನಟಿಸಿದ್ದರು. ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದಲ್ಲದೆ, ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಇನ್ನು, ರವೀಂದರ್ ಚಂದ್ರಶೇಖರನ್ ಅವರು ನಟ್ಪುನ ಎನ್ನಡು ಥೆರಿಯುಮ, ಮುರುಂಗೈಕೈ ಚಿಪ್ಸ್, ವಿಡಿಯುಮ್ ವಾರೈ ಕಾಥಿರು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದೆ. ಮಹಾಲಕ್ಷ್ಮಿಯವರಿಗೆ ಈಗಾಗಲೇ ಒಂದು ಮಗು ಇದೆ. ಈ ಹಿಂದೆ, ರವೀಂದರ್ ನಿರ್ಮಾಣದ ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಆ ಸಿನಿಮಾದಿಂದ ಇವರಿಬ್ಬರಿಗೂ ಸ್ನೇಹ ಬೆಳೆದಿತ್ತು. ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ ಮದುವೆಯಾಗುವ ಮೂಲಕ ಸರ್ಪ್ರೈಸ್ ನೀಡಿದ್ದರು.
ಅದರ ಜೊತೆಗೆ ಈ ಇಬ್ಬರೂ ಕೂಡ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಮನಸ್ಸಿನ ಮಾತುಗಳನ್ನು ಬರೆದುಕೊಂಡಿದ್ದರು. ಅದಲ್ಲದೆ ನಿರೂಪಕಿ ಮಹಾಲಕ್ಷ್ಮೀ ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದರು.
ಇನ್ನು, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ‘ಮಹಾಲಕ್ಷ್ಮಿ ತರ ಒಂದು ಹೆಣ್ಣು ಸಿಕ್ಕರೆ, ಜೀವನ ಚೆನ್ನಾಗಿರುತ್ತೆ ಅಂತ ಹೇಳ್ತಾರೆ, ಆದರೆ ಮಹಾಲಕ್ಷ್ಮಿಯೇ ಜೀವನವಾಗಿ ಸಿಕ್ಕರೆ. ಕಮಿಂಗ್ ಸೂನ್ ಲೈವ್ ಇನ್ ಫ್ಯಾಟ್ ಮಾನ್ ಫ್ಯಾಕ್ಟ್ . ಸ್ಮಾಲ್ ಸ್ಟೋರಿ ವಿಥ್ ಮೈ ವೈಫ್ ‘ಎಂದು ಬರೆದುಕೊಂಡಿದ್ದರು.
ಆದರೆ ಇದೀಗ ಮದುವೆಗೂ ಮುಂಚೆಯೇ ಮಹಾಲಕ್ಷ್ಮಿಯವರು ವಿಧಿಸಿದ್ದ ಷರತ್ತಿನ ಕುರಿತು ಚರ್ಚೆಯಾಗುತ್ತಿದೆ. ಮಹಾಲಕ್ಷ್ಮಿಯವರು ರವೀಂದರ್ ಅವರನ್ನು ಮದುವೆಯಾಗುವ ಮುಂಚಿಗೆ ನೀವು ಮದುವೆಯಾದ ನಂತರ ನನಗೆ ಮೊದಲು ಮಗುವನ್ನು ಕರುಣಿಸಬೇಕು ಎಂದು ಕಂಡೀಶನ್ ಹಾಕಿದ್ದರಂತೆ. ಈ ವಿಚಾರವು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.