ಸದ್ಯ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಶತಕ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಯವರನ್ನು ಆರಂಭಿಕರಾಗಿಯೇ ಆಡಿಸಬೇಕೆ? ಎಂದು ಕೇಳಲಾದ ಪ್ರಶ್ನೆಗೆ ಹಂಗಾಮಿ ನಾಯಕ ಕೆ.ಎಲ್ ರಾಹುಲ್ ರವರು ಖಡಕ್ ಉತ್ತರ ಕೊಟ್ಟಿದ್ದು ಏಷ್ಯಾ ಕಪ್ 2022 ಟೂರ್ನಿಯಲ್ಲಿ ಸೂಪರ್-4 ಹಂತದಲ್ಲಿ ಭಾರತ ತಂಡ ಆಡಿದ ಕೊನೇ ಪಂದ್ಯದಲ್ಲಿ ಅಫಘಾನಿಸ್ತಾನ ಎದುರು 101 ರನ್ಗಳ ಬಾರಿ ಜಯ ದಾಖಲಿಸಿತು. ಅಲ್ಲದೇ ಶತಕ ವೀರ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಬೇಕಾಯಿತು. ಇನ್ನು ರೋಹಿತ್ ಆಡದೇ ಇದ್ದ ಕಾರಣ ಇನಿಂಗ್ಸ್ ಪ್ರಾರಂಭಿಸಿದ್ದ ವಿರಾಟ್ ಕೊಹ್ಲಿ ಯವರು ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ತಮ್ಮ ಮೊದಲ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ 71ನೇ ಶತಕ ಬಾರಿಸಿ ಭಾರತ ತಂಡಕ್ಕೆ 20 ಓವರ್ಗಳಲ್ಲಿ 212 ರನ್ಗಳ ಬೃಹತ್ ಮೊತ್ತ ತಂದುಕೊಟ್ಟರು.
ಇನ್ನು ಕೇವಲ 53 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿಯವರು ತಮ್ಮ ಇನಿಂಗ್ಸ್ನಲ್ಲಿ ಒಟ್ಟು 12 ಫೋರ್ ಹಾಗೂ 6 ಸಿಕ್ಸರ್ಗಳನ್ನು ಭಾರಿಸಿದ್ದು ಅವರ ಅಜೇಯ 122 ರನ್ ಟಿ20-ಐ ಕ್ರಿಕೆಟ್ನಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇನ್ನು ಇದಕ್ಕೂ ಮುನ್ನ ರೋಹಿತ್ ಶರ್ಮಾ (119) ಈ ದಾಖಲೆ ಹೊಂದಿದ್ದರು.
ಇನ್ನು ಗುರುವಾರದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಂಗಾಮಿ ನಾಯಕ ಕೆ.ಎಲ್ ರಾಹುಲ್ ರವರನ್ನು ಕೊಹ್ಲಿ ಅವರನ್ನು ಓಪನರ್ ಆಗಿಯೇ ಮುಂದುವರಿಸಲಾಗುವುದೇ ಎಂದು ಪ್ರಶ್ನೆ ಮಾಡಲಾಗಿದ್ದಯ ಇದಕ್ಕೆ ಉತ್ತರಿಸಿದ ರಾಹುಲ್ ಹಾಗಿದ್ದರೆ ನಾನು ತಂಡದಿಂದ ಹೊರಗುಳಿಯಲೇ? ಎಂದು ಮಾರ್ಮಿಕವಾಗಿ ನುಡಿದು ತದ ನಂತರ ನಕ್ಕಿದ್ದಾರೆ.
ವಿರಾಟ್ ರನ್ ಗಳಿಸುತ್ತಿರುವುದು ನಮ್ಮ ತಂಡಕ್ಕೆ ಬೋನಸ್ ಆಗಿದ್ದು. ಅವರ ಬ್ಯಾಟಿಂಗ್ ಬಗ್ಗೆ ಅವರಿಗೆ ಬಹಳಾ ಸಂತಸವಾಗಿರುತ್ತದೆ. ಏಕೆಂದರೆ ಕಳೆದ 2-3 ಸರಣಿಗಳಿಂದ ಅವರು ಕಠಿಣ ಪರಿಶ್ರಮ ವಹಿಸಿದ್ದು ಈ ರೀತಿಯ 2-3 ಇನಿಂಗ್ಸ್ ಬಂದರೆ ಖಂಡಿತಾ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅವರ ಆಟ ಕಂಡು ಬಹಳಾ ಸಂತಸವಾಗಿದೆ ಎಂದಿದ್ದಾರೆ. ಕೇವಲ ಇನಿಂಗ್ಸ್ ಪ್ರಾರಂಭಿಸಿದರೆ ಮಾತ್ರ ಕೊಹ್ಲಿ ಶತಕ ಬಾರಿಸುತ್ತಾರೆ ಎಂದೇನೂ ಇಲ್ಲ. 3ನೇ ಕ್ರಮಾಂಕದಲ್ಲಿಯೂ ಕೂಡ ಬ್ಯಾಟ್ ಮಾಡಿದರೂ ಅವರು ಶತಕ ಬಾರಿಸಬಹುದು. ಅವರು ತಂಡದಲ್ಲಿ ಯಾವ ಪಾತ್ರ ನಿಭಾಯಿಸಬೇಕು ಅಂದುಕೊಂಡಿದ್ದಾರೆ ಅದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಇಂದು ಅವರ ಪಾತ್ರದಲ್ಲಿ ಅದ್ಭುತ ಪ್ರದರ್ಶನ ತೋರಿದ್ದು ಮುಂದಿನ ಸರಣಿಯಲ್ಲಿ ಮತ್ತೊಂದು ಪಾತ್ರ ನಿಭಾಯಿಸಲಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಹೇಳಿದ್ದಾರೆ.
ರಾಷ್ಟ್ರೀಯ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡುವ ತುಡಿತ ಅವರಲ್ಲಿ ಸದಾ ಇದ್ದೇ ಇದ್ದು ಆದರೆ ನಾವೆಲ್ಲೂ ಅಂಕಿ ಅಂಶಗಳನ್ನು ನೆಚ್ಚಿಕೊಂಡಿದ್ದೇವೆ. ಆದರೆ ಕಳೆದ 3 ವರ್ಷಗಳಲ್ಲಿ ತಂಡಕ್ಕೆ ಅವರ ಕೊಡುಗೆ ಅದ್ಭುತವಾಗಿದ್ದು ಈಗಲೂ ತಂಡದ ಪರ ಟಾಪ್ 2-3 ರನ್ ಸ್ಕೋರ್ಗಳಲ್ಲಿ ಒಬ್ಬರಾಗಿದ್ದಾರೆ ಎಂದಿದ್ದಾರೆ. ಸದ್ಯ ಭಾರತ ತಂಡದ ಏಷ್ಯಾ ಕಪ್ 2022 ಟೂರ್ನಿಯ ಅಭಿಯಾನ ಅಂತ್ಯಗೊಂಡಿದ್ದು ಈಗ ತಾಯ್ನಾಡಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಹೌದು ಸೆಪ್ಟೆಂಬರ್ 24ರಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಆಡಲಿದ್ದು ಇದಕ್ಕೂ ಮುನ್ನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಆಗಲಿದೆ.