Dinesh Kartik: ಕ್ರಿಕೆಟ್ ಜೀವನದಲ್ಲೇ ಮೊದಲ ಬಾರಿಗೆ ಬೌಲಿಂಗ್ ಮಾಡಿದ ಡಿಕೆ, ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೊಟ್ಟ ರಿಯಾಕ್ಷನ್ ವೈರಲ್
ವಿರಾಟ್ ಕೊಹ್ಲಿಯ ಟಿ20ಐ ಕ್ರಿಕೆಟ್ನ ಚೊಚ್ಚಲ ಶತಕ ಹಾಗೂ ಭುವನೇಶ್ವರ್ ಕುಮಾರ್(4ಕ್ಕೆ 5) ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡ ಎದುರಾಳಿ ಅಫಘಾನಿಸ್ತಾನ ವಿರುದ್ಧ 101 ರನ್ಗಳ ಭರ್ಜರಿ ಗೆಲುವು ಪಡೆದಿದ್ದು ಆ ಮೂಲಕ 2022ರ ಏಷ್ಯಾ ಕಪ್ ಟೂರ್ನಿಯ ಅಭಿಯಾನವನ್ನು ಜಯದೊಂದಿಗೆ ಅಂತ್ಯಗೊಳಿಸಿತು. ಇನ್ನು ಭಾರತ ನೀಡಿದ್ದ 213 ರನ್ ಕಠಿಣ ಗುರಿ ಹಿಂಬಾಲಿಸಿದ ಅಫಘಾನಿಸ್ತಾನ ತಂಡಕ್ಕೆ ಆರಂಭದಲ್ಲಿಯೇ ಭುವನೇಶ್ವರ್ ಕುಮಾರ್ ಆಘಾತ ನೀಡಿದ್ದು ತಂಡದ ಮೊತ್ತ ಕೇವಲ 9 ರನ್ ಇರುವಾಗಲೇ ಹಝರತುಲ್ಹ ಝಾಝೈ (0) ರಹಮಾನುಲ್ಹ(0) ಕರಿಮ್ ಜನತ್(2) ಹಾಗೂ ನಜೀಬುಲ್ಹ ಝರ್ದಾನ್(0) ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು.
ತದ ನಂತರ ನಾಯಕ ಮೊಹಮ್ಮದ್ ನಬಿ(7) ಅವರನ್ನು ಅರ್ಷದೀಪ್ ಸಿಂಗ್ ಔಟ್ ಮಾಡಿದರೆ ರಶೀದ್ ಖಾನ್(15) ಅವರನ್ನು ದೀಪಕ್ ಹೂಡ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಇಬ್ರಾಹಿಂ ಝರ್ದಾನ್ ಅವರು ಒಬ್ಬರು ಮಾತ್ರ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ದು ಅವರು ಎದುರಿಸಿದ 59 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಸರಿಯಾಗಿ ಸಾಥ್ ನೀಡಲಿಲ್ಲ. ಅಂತಿಮವಾಗಿ ಅಫಘಾನಿಸ್ತಾನ ತಂಡ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 111 ರನ್ಗಳಿಗೆ ಸೀಮಿತವಾಗಿದ್ದು ಆ ಮೂಲಕ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು. ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಭುವನೇಶ್ವರ್ ಕುಮಾರ್ 4 ಓವರ್ಗಳಿಗೆ ಕೇವಲ 4 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು.
ಇಲ್ಲಿನ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ ವಿರಾಟ್ ಕೊಹ್ಲಿಯ(122* ರನ್, 61 ಎಸೆತ) ಟಿ20ಐ ಕ್ರಿಕೆಟ್ನ ಚೊಚ್ಚಲ ಶತಕ ಹಾಗೂ ಕೆ.ಎಲ್ ರಾಹುಲ್ (62) ಅರ್ಧಶತಕದ ಬಲದಿಂದ 20 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಆ ಮೂಲಕ ಅಫಘಾನಿಸ್ತಾನ ತಂಡಕ್ಕೆ 213 ರನ್ ಕಠಿಣ ಗುರಿ ನೀಡಿತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿ ಟಿ20 ಕ್ರಿಕೆಟ್ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಡಿದ್ದು ಕೆ.ಎಲ್ ರಾಹುಲ್ 41 ಎಸೆತಗಳಲ್ಲಿ 62 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ಕೊಟ್ಟು ವಿಕೆಟ್ ಒಪ್ಪಿಸಿದರು.
ರಾಹುಲ್ ಔಟ್ ಆದ ಬಳಿಕ ಮೈದಾನದಲ್ಲಿ ವಿರಾಟ್ ಕೊಹ್ಲಿ ರನ್ ಹೊಳೆ ಹರಿಸಿದರು. ಇನ್ನು ಈ ನಡುವೆ ಪಂದ್ಯದಲ್ಲಿ ಮತ್ತೊಂದು ಆಶ್ಚರ್ಯಕರ ಘಟನೆ ನಡೆದಿದ್ದು ಇತ್ತೀಚೆಗೆ ತಂಡದಲ್ಲಿ ಫಿನಿಷರ್ ಪಾತ್ರ ವಹಿಸುತ್ತಿರುವ ವಿಕೇಟ್ ಕೀಪಕ್ ದಿನೇಶ್ ಕಾರ್ತಕ್ ರವರು ಬೌಲಿಂಗ್ ಮಾಡಿದ್ದು ಆದರೆ ಬೌಲಿಂಗ್ ಮಾಡಿದ ಕೇವಲ ಒಂದು ಓವರ್ ಗೆ ಬರೋಬ್ಬರಿ 18 ರನ್ ನೀಡಿದ್ದಾರೆ. ಇನ್ನು ಡಿಕೆಯ ಕಳಪೆ ಬೌಲಿಂಗ್ ನೋಡಿ ನಾಯಕ ರೋಹಿತ್ ಡಕೌಟ್ ನಲ್ಲಿ ತಲೆಯ ಮೇಲೆ ಕೈ ಇಟ್ಟುಕೊಂಡರೆ ಇತ್ತ ಕೋಹ್ಲಿ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.