ವಾರ್ತಾ ಮಂಜರಿ
Trending Stories, Viral News, Gossips & Everything in Kannada

Dhruva Sarja: ಪ್ರೇರಣಾ ಸೀಮಂತ ಕಾರ್ಯದಲ್ಲಿ ಧ್ರುವ ಸರ್ಜಾ ಮಾಡಿರುವ ಕೆಲಸ ನೋಡಿ

2,959
ಚಂದನವನದಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚುತ್ತಿರುವ ನಟ ಧ್ರುವ ಸರ್ಜಾ ಪ್ರತಿಭಾವಂತ ನಟರಲ್ಲಿ ಒಬ್ಬರು. ಚಿಕ್ಕಪ್ಪ ಅರ್ಜುನ್ ಸರ್ಜಾ ಸಲಹೆ ಮೇರೆಗೆ  ನಟನೆ ತರಬೇತಿ ಪಡೆದುಕೊಂಡರು ಧ್ರುವ ಸರ್ಜಾಅವರು ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯಕ್ಕೆ ಇವರು ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟ ಧ್ರುವ ಸರ್ಜಾರವರ ವೈವಾಹಿಕ ಬದುಕಿನ ಕಡೆಗೆ ಗಮನ ಹರಿಸಿದರೆ, 2019 ರ ನವೆಂಬರ್ ತಿಂಗಳಲ್ಲಿ ಪ್ರೇರಣಾರನ್ನು ವರಿಸುವ  ಮೂಲಕ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು.
ಪ್ರೇರಣಾ ಸರ್ಜಾರವರು ಪಕ್ಕದ  ಮನೆಯವರು, ಹೀಗಾಗಿ ಬಾಲ್ಯದಿಂದಲೇ ಪರಿಚಯವಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಮದುವೆಯಾದರು. ಆದರೆ ಇದೀಗ ಧ್ರುವ ಸರ್ಜಾ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಒಂದೆರಡು ದಿನಗಳ ಹಿಂದೆಯಷ್ಟೇ ಪ್ರೇರಣಾ ಸರ್ಜಾ ಸೀಮಂತ ಶಾಸ್ತ್ರವು ನೆರವೇರಿದೆ. ಈ ವೇಳೆಯಲ್ಲಿ ಧ್ರುವ ಸರ್ಜಾರವರು ಕಣ್ಣೀರು ಹಾಕಿದ್ದಾರೆ, ಅಸಲಿ ಕಾರಣವೇನು ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಸರ್ಜಾ ಕುಟುಂಬವು ಹೊಸ ಅತಿಥಿಯ ಆಗಮನದ ಸಂಭ್ರಮದಲ್ಲಿದೆ. ಹೌದು, ಇತ್ತೀಚಿಗಷ್ಟೇ ನಟ ಧ್ರುವ ಸರ್ಜಾರವರು ತಂದೆಯಾಗುತ್ತಿರುವ ವಿಚಾರವನ್ನು ಧ್ರುವ ಸರ್ಜಾ ರಿವೀಲ್ ಮಾಡಿದ್ದರು. ಪತ್ನಿಗೆ ಪ್ರೇರಣಾಗೆ 9 ತಿಂಗಳಾಗಿದ್ದು, ಸೆಪ್ಟೆಂಬರ್​ನಲ್ಲಿ ಸರ್ಜಾ ಕುಟುಂಬಕ್ಕೆ ಪುಟ್ಟ ಪುಟಾಣಿಯ ಆಗಮನವಾಗಲಿದ್ದು, ಧ್ರುವ-ಪ್ರೇರಣಾ  ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ, ಪ್ರೇರಣಾ ಅವರ ಬೇಬಿ ಬಂಪ್ ವಿಡಿಯೋ ಶೇರ್ ಮಾಡಿರುವ ಧ್ರುವ ಸರ್ಜಾ, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ, ದೈವಿಕ ಪುಣಾಣಿ ಬೇಗ ಬರಲಿ ಎಂದು ಬರೆದುಕೊಂಡಿದ್ದರು.
ಅದರ ಜೊತೆಗೆ ಸ್ವಲ್ಪ ಭಿನ್ನವಾಗಿಯೇ ಬೇಬಿ ಬಂಪ್ ಫೋಟೋ ಶೂಟ್  ಮಾಡಿಸಿದ್ದರು.ಈ ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಮೊದಲು ಕಾಫಿ ಬಣ್ಣದ ಗೌನ್‌ನಲ್ಲಿ ಪ್ರೇರಣಾ ಮತ್ತು ಬ್ಲ್ಯಾಕ್ ಸೂಟ್‌ನಲ್ಲಿ ಧ್ರುವ ಸರ್ಜಾ  ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ಮಗುವಿನ ಸ್ಕ್ಯಾನ್ ಫೋಟೋವನ್ನು ತೋರಿಸಿದ್ದರು.  ಅದರ ಜೊತೆಗೆ, ಎರಡನೇ ಲುಕ್‌ನಲ್ಲಿ ಪ್ರೇರಣಾ ನೀಲಿ ಬಣ್ಣದ ಗೌನ್‌ ಧರಿಸಿದ್ದು, ವೈಟ್ ಆಂಡ್ ವೈಟ್‌ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದರು.
ಪತ್ನಿ ಕೋಪ ಮಾಡಿಕೊಂಡು ಅಳುತ್ತಿರುವಾಗ ಧ್ರುವ ಕೈಯಲ್ಲಿ ಸ್ವಾರಿ ಎಂದು ಬರೆದಿರುವ ಸ್ಲೇಟ್‌ ಹಿಡಿದುಕೊಂಡಿದ್ದರು. ಇನ್ನು,  ಮೂರನೇ ಲುಕ್‌ನಲ್ಲಿ ಪ್ರೇರಣಾ ಪಿಂಕ್ ಬಣ್ಣದ ಗೌನ್ ಧರಿಸಿದ್ದರೆ ಧ್ರುವ ಮತ್ತೆ ವೈಟ್ ಬಣ್ಣದ ಡಿಫರೆಂಟ್‌ ಡ್ರೆಸ್ ಧರಿಸಿದ್ದು, ಈ ಲುಕ್‌ನಲ್ಲಿ ಮಗುವನ್ನು ಸೆಪ್ಟೆಂಬರ್ ಬರ ಮಾಡಿಕೊಳ್ಳುತ್ತಿರುವುದು ಎಂದು ತಿಳಿಸಿದ್ದರು. ಒಟ್ಟಿನಲ್ಲಿ ಈ ಸುದ್ದಿ ಕೇಳಿ ಧ್ರುವ ಸರ್ಜಾ ಅಭಿಮಾನಿಗಳು ಖುಷಿ ಪಟ್ಟಿದ್ದರು.
ಒಂದೆರಡು ದಿನಗಳ ಹಿಂದೆಯಷ್ಟೇ, ಧ್ರುವ ತಮ್ಮ ಮುದ್ದಿನ ಮಡದಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.
ಧ್ರುವ ಹೆತ್ತವರು, ಮಾವ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ, ರಾಯನ್ ರಾಜ್ ಸರ್ಜಾ ಸೇರಿದಂತೆ ಕುಟುಂಬಸ್ಥರು, ಸ್ಯಾಂಡಲ್ ವುಡ್ ನ ಆಪ್ತರ ಸಮ್ಮುಖದಲ್ಲಿ ಧ್ರುವ ಪತ್ನಿಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಿದ್ದಾರೆ.  ಆದರೆ ಈ ಸಂದರ್ಭದಲ್ಲಿ ಚಿರುವಿನ ಅನುಪಸ್ಥಿತಿಯನ್ನು ನೆನೆದು ಬೇಸರ ಪಟ್ಟುಕೊಂಡಿದ್ದಾರೆ. ಚಿರುವನ್ನು ಬಿಟ್ಟು ಯಾವುದೇ ಕಾರ್ಯಕ್ರಮವನ್ನು ಮಾಡಿಕೊಂಡವರಲ್ಲ ಧ್ರುವ ಸರ್ಜಾ. ಹೀಗಾಗಿ ಸೀಮಂತ ಕಾರ್ಯಕ್ರಮದಲ್ಲಿ ಅಣ್ಣ ಇರಬೇಕಿತ್ತು ಎಂದು ಬೇಸರ ಪಟ್ಟುಕೊಂಡಿದ್ದಾರೆ. ಅಂದಹಾಗೆ, ಪ್ರೇರಣಾ ಸರ್ಜಾ ಸೀಮಂತ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.