ರಾಮಾಯಣ, ಮಹಾಭಾರತ ಕಾಲದಿಂದ ಹಿಡಿದು ಇಂದಿನವರೆಗೆ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಏಕೈಕ ವನ್ಯ ಪ್ರಾಣಿ ಎಂದರೆ ಅದು ಕೇವಲ ಆನೆ ಮಾತ್ರ. ಸ್ನೇಹ ಮತ್ತು ಪರಾಕ್ರಮದ ವಿಷಯದಲ್ಲೂಇದನ್ನು ಮೀರಿಸುವ ಇನ್ನೊಂದು ಪ್ರಾಣಿಯಿಲ್ಲ ಎನ್ನಬಹುದು. ಆದರೆ ಕಾಡೊಳಗೆ ಹಾಯಾಗಿದ್ದ ಆನೆಗಳು ಈಗೀಗ ನಾಡಿಗೆ ಲಗ್ಗೆ ಇಡುವುದು ಹೆಚ್ಚುತ್ತಿದೆ.
ಅರಣ್ಯ ನಾಶ, ಆಹಾರ ಕೊರತೆ ಇದಕ್ಕೆ ಕಾರಣ. ಆನೆಗಳು ಶಾಂತ ಸ್ವಭಾವದ ಪ್ರಾಣಿಗಳಾಗಿದ್ದು, ಮನುಷ್ಯರೊಂದಿಗೆ ಮುಖಾಮುಖಿಯಾಗಲು ಬಯಸುವುದಿಲ್ಲ. ಮನುಷ್ಯರ ಸುಳಿವು ಸಿಗುತ್ತಿದ್ದಂತೆ ಇದ್ದಲ್ಲೇ ಕಲ್ಲಿನಂತೆ ಸ್ತಬ್ಧವಾಗಿ ನಿಂತು, ಸದ್ದಿಲ್ಲದೇ ಹಿಂದೆ ಸರಿಯುತ್ತವೆ. ಮರಿಗಳು ಜತೆಯಲ್ಲಿದ್ದರೆ, ಅಪಾಯದ ಸುಳಿವು ಸಿಕ್ಕರೆ ಮಾತ್ರ ಆನೆಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ಇನ್ನು ವಿಶ್ವದಲ್ಲಿ ಏಷ್ಯನ್ ಹಾಗೂ ಆಫ್ರಿಕನ್ ಆನೆಗಳು ಎಂಬ 2 ವರ್ಗಗಳಿದ್ದು, ಭಾರತದಲ್ಲಿರುವ ಏಷ್ಯನ್ ಆನೆಗಳು ಆಫ್ರಿಕನ್ ಆನೆಗಳಿಗಿಂತ ಗಾತ್ರದಲ್ಲಿ ಬಹಳ ಚಿಕ್ಕದಾಗಿರುತ್ತವೆ. ಇವುಗಳ ತಲೆಭಾಗದಲ್ಲಿಯೇ ಅತ್ಯಂತ ಹೆಚ್ಚಿನ ಶಕ್ತಿ ಹೊಂದಿದ್ದು, ಬೆನ್ನಿನ ಭಾಗ ಉಬ್ಬಿದಂತೆ ಅಥವಾ ಒಂದೇ ಸಮನಾಗಿ ಇರುತ್ತದೆ. 6.6 ಅಡಿಯಿಂದ 11.5 ಅಡಿಯಷ್ಟು ಎತ್ತರ ಬೆಳೆಯುತ್ತವೆ.
ಆನೆ, ಕನಿಷ್ಠ 2 ಸಾವಿರದಿಂದ ಗರಿಷ್ಠ 5 ಸಾವಿರ ಕೆಜಿ ತೂಕ ಇರುತ್ತದೆ. ಇಂದಿನ ಜಿಪಿಎಸ್ ವ್ಯವಸ್ಥೆಗಿಂತ ಆನೆಗಳಲ್ಲಿನ ಮ್ಯಾಪಿಂಗ್ ವ್ಯವಸ್ಥೆ ಹೆಚ್ಚು ನಿಖರವಾಗಿದೆ. ಎಲ್ಲಿಗೆ ಹೋಗಬೇಕು. ಎಲ್ಲಿಗೆ ಹೋಗಬಾರದು . ಈ ಮಾರ್ಗ ಎಲ್ಲಿಗೆ ಸೇರುತ್ತದೆ ಎಂಬ ಬಗ್ಗೆ ಭೂಮಿಯೊಳಗಿನ ಜಲಮೂಲ ಹರಿಯುವ ದಿಕ್ಕಿನ ಆಧಾರದ ಮೇಲೆಯೇ ನಿರ್ಣಯಿಸುವಷ್ಟು ಚುರುಕುಮತಿಗಳು ಈ ಆನೆಗಳು. ಶರೀರದಲ್ಲಿರುವ ಸಂವೇದಕಗಳ ಮೂಲಕ ಆನೆಗಳು ಪರಸ್ಪರ ಸಂಭಾಷಣೆ ನಡೆಸಬಲ್ಲವು. ಇದೀಗ ಆನೆ ಮಾಡಿದ ಕೆಲಸ ನೋಡಿ