ಪ್ರಪಂಚದ ಹಲವಾರು ವಿಶೇಷ ಜೀವಿಗಳಲ್ಲಿ ಹಾವು ಕೂಡ ಒಂದು. ಹೌದು ಇದರ ಬಗ್ಗೆ ಹೇಳುತ್ತಿದ್ದರೆ ಒಂದು ದಿನವಾದರೂ ಕೂಡ ಮುಗಿಯೋದಿಲ್ಲ. ಹೌದು ಮನುಷ್ಯನಿಗೆ ಇತರೆ ಸಣ್ಣ ಜೀವಿಗಳಿಗೆ ಒಂದು ರೀತಿ ಮಾರಕವಾಗಿ ಇರೋ ಹಾವು. ಒಂದು ವಿಚಿತ್ರ ಜೀವಿ ಎನ್ನಬಹುದು. ಹಾವುಗಳು ಎಂಬ ಪದ ಕೇಳಿದರೆ ಸಾಕು ಬೆಚ್ಚಿ ಬೀಳುವ ಅದೆಷ್ಟೋ ಜಬರು ನಮ್ಮ ದೇಶದಲ್ಲಿದ್ದಾರೆ.
ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 2 ,50,000 ಜನರು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ. ಹೌಫು ಇದರಲ್ಲಿ 50,000 ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ಮಾಹಿತಿಯನ್ನು ನಾನು ಹಾವುಗಳ ಬಗ್ಗೆ ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟು ಹಾಕಲು ಹೇಳುತ್ತಿಲ್ಲ.
ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ಇರುವ ಒಂದು ಭಾವನೆ ಎಂದರೆ ಹಾವುಗಳು ಎಂದರೆ ಕಚ್ಚಿ ಪ್ರಾಣ ತೆಗೆಯುವ ಜೀವಿಗಳು ಎಂದುಕೊಂಡಿದ್ದಾರೆ. ಹೌದು ಆದರೆ ಈ ವಿಚಾರ ತಪ್ಪಾಗಿದ್ದು ಭಾರತದಲ್ಲಿ ಇರುವ ಹಲವಾರು ಹಾವುಗಳ ಜಾತಿಯಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಜಾತಿ ಕೇವಲ 4 .
ಹೌದು ನಮ್ಮ ದೇಶದಲ್ಲಿ ಈ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ. ಈ 4 ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಬಲಿಯಾಗುತಚತಾನೆ ಹೊರತು (ಅಗತ್ಯ ಚಿಕೆತ್ಸೆ ಕೊಡಿಸದಿದ್ದಾಗ ) ಬೇರೆ ಎಲ್ಲಾ ಹಾವುಗಳು ವಿಷರಹಿತ ಹಾವುಗಳಾಗಿದೆ. ಈ 4 ಜಾತಿಯ ಹಾವುಗಳು ಯಾವುವೆಂದರೆ ಕಾಳಿಂಗ ನಾಗರ ಹಾವು ಅಥವಾ ಕನ್ನಡಿ ಹಾವು ಕೊಳಕು ಮಂಡಲ ಕಡಂಬಳ ಅಥವಾ ಕಟ್ಟು ಹಾವುಗಳು.ಇದೀಗ ಹಾವು ಹಾಗು ಏಡಿಯ ಕದನ ನೋಡಿ.