ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಒಂದು ಕಾಲದಲ್ಲಿ ದೂಳೆಬ್ಬಿಸಿದ್ದ ನಟಿ ಮೋಹಿನಿ ಈಗೇನಾದ್ರು…ನೋಡಿ

21,298

ಈ ಮನುಷ್ಯನ ಜೀವನವೇ ಹಾಗೇ ಯಾವಾಗ ಅವನ ಬದುಕು ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ. ಶ್ರೀಮಂತನಾಗಿದ್ದವರು ಅದೃಷ್ಟ ಕೆಟ್ಟಾಗ ಶನಿ ಹೆಗಲೇರಿ ಕಿವಿಗೆ ಬಿರಳು ಬಿಟ್ಟು ಬಿಕ್ಷಕನ್ನಾಗಿ ಮಾಡಿಬಿಡುತ್ತಾನೆ. ಹೌದು ಇನ್ನು ಹಲವರು ಬಿಕ್ಷುಕರಾಗಿದ್ದವರು ಅದೃಷ್ಟ ಬದಲಾಗಿ ಅಗರ್ಭ ಶ್ರೀಮಂತರಾಗಿರುವುದು ಉಂಟು. ಆದರೆ ಇನ್ನೂ ಹಲವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕಷ್ಟಗಳ ಸೆರೆಮಾಲೆಯೇ ಹರಿದು ಬರಿತ್ತದೆ.

ಇನ್ನು ಸೆಲೆಬ್ರಿಟಿ ಜೀವನದಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಅಂತೆಯೇ ಈ ಸುಂದರ ನಟಿ ಅನುಭವಿಸಿದ ಕಷ್ಟಗಳು ನಿಜಕ್ಕೂ ಯಾವ ಶತ್ರುವಿಗು ಬೇಡ ಅನಿಸುತ್ತದೆ. ಶ್ರೀ ರಾಮಚಂದ್ರ ಗಡಿ ಬಿಡಿ ಅಳಿಯ ಲಾಲಿ ಸಿನಿಮಾ ಸೇರಿ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಖ್ಯಾತ ನಟಿ ಮೋಹಿನಿ ಅವರ ಜೀವನದ ಸ್ಟೋರಿ ಇದಾಗಿದ್ದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮೋಹಿನಿ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕೆಲವೇ ವರ್ಷದಲ್ಲಿ ಸುಮಾರು 80 ಚಿತ್ರಗಳಲ್ಲಿ ನಟನೆ ಮಾಡಿ ದಾಖಲೆ ಬರೆದಿದ್ದರು.

1999 ರಲ್ಲಿ ತನ್ನ 24 ವರ್ಷದ ವಯಸ್ಸಿನಲ್ಲೇ ಮದುವೆಯಾದ ನಟಿ ಮೋಹಿನಿ ಗಂಡನ ಜೊತೆ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದು ಈ ನಟಿಯ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತಿದ್ದ ಸಮಯದಲ್ಲಿ ಮೊದಲನೇಯ ಮಗುವಿಗೆ ಜನ್ಮ ಕೂಡ ನೀಡುತ್ತಾರೆ. ಇನ್ನೂ ಅದೇ ಸಮಯದಲ್ಲಿ ಅವರಿಗೆ ಇದ್ದಕ್ಕಿದ್ದ ಹಾಗೇ ತೀವ್ರವಾದ ಬೆನ್ನು ನೋವಿನ ಸಮಸ್ಯೆಗೆ ಕಾಣಿಸಿಕೊಂಡಿದ್ದು ನಟಿ ಮೋಹಿನಿ ಎಷ್ಟರ ಮಟ್ಟಿಗೆ ಅಂದರೆ ಎದ್ದು ತೀರುಗಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ

. ಇದ್ದನ್ನ ಗಮನಿಸಿದ ಅವರ ಪತಿಯ ಪೋಷಕರು ಇಂತಹ ಕಾಯಿಲೆಯ ಹುಡುಗಿ ನಮಗೆ ಬೇಡ ವಿಚ್ಚೇದನ ಕೊಟ್ಟು ಮತ್ತೊಂದು ವಿವಾಹವಾಗು ಎಂದು ಮಗನಿಗೆ ಒತ್ತಾಯ ಮಾಡಿದ್ದು ಅಷ್ಟೇ ಅಲ್ಲದೆ ಮಗನಿಗೆ ಎರಡನೇ ಮದುವೆ ಮಾಡಲು‌ ಹುಡುಗಿಯನ್ನು ಕೂಡ ನೋಡಲು ಶುರು ಮಾಡಿದ್ದರು.

ಇನ್ನು ಅದಾಗಲೇ ಆ ಸಮಯದಲ್ಲಿ ಎರಡನೇ ಮಗುವಿಗೆ ಗರ್ಭಿಣಿ ಯಾಗಿದ್ದರು ನಟಿ ಮೋಹಿನಿ.ಹಲವಾರು ಆಸ್ಪತ್ರೆಯಲ್ಲಿ ತೋರಿಸಿದರು ಕೂಡ ಬೆನ್ನು ನೋವಿನ ಸಮಸ್ಯೆ ಮಾತ್ರ ನಿವಾರಣೆ ಆಗಲಿಲ್ಲ ಬೆನ್ನು ನೋವಿನಿಂದ ನರಕದ ಯಾತನೆ ಅನುಭವಿಸುತ್ತಿದ್ದ ನಟಿ ಮೋಹಿನಿ ಕೊನೆಗೆ ಧ್ಯಾನದ ಕಡೆಗೆ ಮುಖ ಮಾಡಿಬಿಡುತ್ತಾರೆ.

ಹೌದು ಪ್ರತಿದಿನ ಕೂಡ ಧ್ಯಾನ ಮಾಡುವುದರಿಂದ ಬೆನ್ನು ನೋವು ಕಡಿಮೆ ಆಗುತ್ತ ಬಂದಿದ್ದು ಹಾಗೆಯೇ ತನ್ನ ಗಂಡನಿಗೆ ತನ್ನ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಅತ ಎರಡನೇ ಮದುವೆ ಆಗದಂತೆ ತಡೆದರು ಎಂಬ ವರದಿ ಹೊರಬಂದಿದೆ.

ನಂತರದ ದಿನಗಳಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಪ್ರೇರಿತರಾದ ನಟಿ ಮೋಹಿನಿಯವರು 2006 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದು ಇದೀಗ ಚರ್ಚ್ ನಲ್ಲಿ‌ ಅಸಾಹಯಕ್ಕ ಹೆಣ್ಣು ಮಕ್ಕಳಿಗೆ ಕೌನ್ ಸಲಿಂಗ್ ಮಾಡುವ ಕೆಲಸವನ್ನ ಮಾಡುತ್ತಿದ್ದಾರಂತೆ.

ಇದರಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ನಟಿ ಮೋಹಿನಿ ಆಶಾ ಕೀರಣರಾಗಿದ್ದು ಧ್ಯಾನ ಮಾಡುವುದರಲ್ಲಿ ಉತ್ತಮ ಜೀವನ ಕಂಡುಕೊಂಡಿದ್ದಾರ.ಹೌದು ಕೈ ಜಾರಿ ಹೋಗಿದ್ದ ತಮ್ಮ ಜೀವನವನ್ನ ಹತೋಟಿಗೆ ತಂದುಕೊಂಡ ನಟಿ ಮೋಹಿನಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಖಾಂತರ ನಮಗೆ ತಿಳಿಸಿ.