ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗ್ರಾಫಿಕ್ ಬಳಸಿ ಬಾಹುಬಲಿ ಶೂಟಿಂಗ್ ಹೇಗಿತ್ತು ನೋಡಿ…ಚಿಂದಿ ವಿಡಿಯೋ

74,872

ಬಾಹುಬಲಿ ದಕ್ಷಿಣ ಭಾರತದ ಹೆಮ್ಮೆಯ ಸಿನಿಮಾ ಅಂತಾನೆ ಹೇಳಬಹುದು. ಹೌದಿ ಈ ಸಿನಿಮಾ ಮಾಡಿದ ದಾಖಲೆ ಪಾತ್ರಧಾರಿಗಳ ಅಭಿನಯ ನಿರ್ದೇಶಕರ ಯೋಚನೆ ಅಬ್ಬಾ ಇದರಲ್ಲದರಿಂದ ಇಡೀ ವಿಶ್ವವೇ ಈ ಸಿನಿಮಾ ನೋಡಿ ಶ್ಲಾಘನೆ ವ್ಯಕ್ತಪಡಿಸಿತ್ತು.

ಬಾಹುಬಲಿ ಮೊದಲ ಭಾಗ ಬರೋಬ್ಬರಿ ೬೫೦ ಕೋಟಿ ಕಲೆಕ್ಷನ್ ಮಾಡಿ ಗಲ್ಲಾಪೆಟ್ಟಿಗೆಯನ್ನು ಧೂಳೆಬ್ಬಿಸಿದ್ದರೆ ಎರಡನೇ ಭಾಗವೂ 1,796.56 ಕೋಟಿ ಹಣವನ್ನು ಪ್ರಪಂಚಾದ್ಯಂತ ಗಳಿಸಿದೆ. ಅಬ್ಬಾ ಈ ಸಿನಿಮಾ ಮಾಡಿರುವ ದಾಖಲೆಗಳನ್ನು ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಯುಗ ಯುಗ ಕಳೆದರು ಎಸ್ಎಸ್ ರಾಜಮೌಳಿ ಅವರು ಮಾಡಿರುವ ಈ ಸಿನಿಮಾ ಭಾರತದ ಸಿನಿಮಾದಲ್ಲಿ ದಂತಕಥೆಯಂತೆ ಬೆರತು ಹೋಗಿರುತ್ತದೆ.

ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ಬಾಹುಬಲಿ ಸಿನಿಮಾವೂ ಭಾರತೀಯ ಸಿನಿಪ್ರಿಯರ ನಿದ್ದೆಗೆಡಿಸಿತ್ತು. ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ ಬಿಡುಗಡೆಯಾದ ಮೇಲೆ ಬಾಹುಬಲಿ ಪಾರ್ಟ್-2 ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟೇರುತ್ತು. ಹೌದು ಅಲ್ಲದೆ ಕಟ್ಟಪ್ಪ ಯಾಕೆ ಬಾಹುಬಲಿಯ ಪ್ರಾಣ ತೆಗೆದ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ವೀಕ್ಷಕರು ತಲೆಗೆಡಿಸಿಕೊಂಡಿದ್ದರು.ಯಾವುದೇ ಸಾಮಜಿಕ ಜಾಲತಾಣ ತೆಗೆದು ನೋಡಿದರು ಕಟ್ಟಪ್ಟ ನದ್ದೇ ಮಾತು ಕಥೆ. ಇಷ್ಟೆ ಮಟ್ಟಿಗೆ ಪ್ರೇಕ್ಷಕರ ತಲೆ ಕೆಡೆಸಿತ್ತು ಈ ಸಿನಿಮಾ.

ಇನ್ನು ಈ ಬಾಹುಬಲಿ ಸಿನಿಮಾದಲ್ಲಿ ಕಥೆ ಎಷ್ಟರ ಮಟ್ಟಿ ಪರಿಣಾಮ ಬೀರಿತ್ತೋ ಇದರ ಜೊತೆಗೆ ಸಿನಿಮಾದ ಪಾತ್ರಗಳ ಆಯ್ಕೆ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾಯಕ ಪ್ರಭಾಸ್ ಪಾತ್ರದಿಂದ ಹಿಡಿದು ಎಲ್ಲಾ ಪಾತ್ರವು ಭಾರತೀಯ ಚಿತ್ರರಂಗದ ಶ್ರೀಮಂತ ಇತಿಹಾಸದ ಒಂದು ಭಾಗವಾಗಿದೆ. ಪ್ರಭಾಸ್ ಸತ್ಯರಾಜ್ ರಮ್ಯಾಕೃಷ್ಣ ರಾಣಾ ದಗ್ಗುಬಾಟಿ ಅನುಷ್ಕಾ ಶೆಟ್ಟಿ ತಮನ್ನಾ ಸೇರಿದ್ದಂತೆ ಪ್ರತಿಯೊಬ್ಬರ ಪಾತ್ರಗಳು ಅಷ್ಟು ಅದ್ಭುತವಾಗಿ ಮೂಡಿಬಂದಿವೆ.

ಬಾಹುಬಲಿಯಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾದದ್ದು ಹಾಗೂ ಅಪಾರ ಜನಮನ್ನಣೆ ಪಡೆದುಕೊಂಡ ಪಾತ್ರವೆಂದರೆ ಕಟ್ಟಪ್ಪನ ಪಾತ್ರ. ತಮಿಳಿನ ಖ್ಯಾತ ನಟ ಸತ್ಯರಾಜ್ ಅವರು ಕಟ್ಟಪ್ಪನ ಪಾತ್ರಕ್ಕೆ ಜೀವತುಂಬಿದ್ದು ಈ ಸಿನಿಮಾದ ನಂತರ ಕಟ್ಟಪ್ಪನೆಂಬ ಹೆಸರಿನಿಂದಲೆ ಹೆಸರು ಮಾಡಿದರು.ಆದರೆ ನಟ ಸತ್ಯರಾಜ್ ಅವರು ಈ ಪಾತ್ರದ ಮೊದಲ ಆಯ್ಕೆ ಆಗಿರಲಿಲ್ಲವಂತೆ.

ಈ ಪಾತ್ರಕ್ಕೆ ಸತ್ಯರಾಜ್ ಅವರ ಮೊದಲು ಆಯ್ಕೆಯಾಗಿದ್ದು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರು. ಸಿನಿಮಾದ ಆಯೋಜಕರು ಕಟ್ಟಪ್ಪ ಪಾತ್ರಕ್ಕೆ ಸಂಜಯ್ ದತ್ ಅವರನ್ನು ಕರೆತರುವ ಸಿದ್ದತೆಯನ್ನು ನಡೆಸಿದ್ದರಂತೆ.

ಆದರೆ ಸಂಜಯ್ ದತ್ ಅವರು ಆ ಸಮಯದಲ್ಲಿ ಜೈಲಿದ್ದ ಕಾರಣ ಸಂಜಯ್ ದತ್ ಪಾತ್ರ ಸತ್ಯರಾಜ್ ಗೆ ಸೇರಿಬಿಟ್ಟಿದೆ. ಬಾಹುಬಲಿ ಸಿನಿಮಾದ ಕಥೆಯನ್ನು ಮಾಡುವಾಗ ಸಂಜಯ್ ದತ್ ಅವರೆ ಕಟ್ಟಪ್ಪ ಪಾತ್ರವನ್ನು ಮಾಡಬೇಕು ಎಂದು ಸ್ಕ್ರಿಪ್ಟ್ ಮಾಡಿದ್ದರಂತೆ ವಿಜಯೇಂದ್ರ ಪ್ರಸಾದ್ ಅವರು. ಈ ಬಗ್ಗೆ ಈಗ ಸ್ವತಹ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬಹಿರಂಗಪಡಿಸಿದ್ದಾರೆ.

ಇನ್ನು ಬಾಹುಬಲಿ ಸಿನಿಮಾದ ಮತ್ತೊಂದು ಪ್ರಮುಖವಾದ ಪಾತ್ರವೆಂದರೆ ರಾಜಮಾತೆ ಶಿವಗಾಮಿಯ ಪಾತ್ರ. ಹೌದು ನಟಿ ರಮ್ಯಾ ಕೃಷ್ಣ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ಮುಗಿದ ಮೇಲೆ ಅದೆಷ್ಟೋ ಅಭಿಮಾನಿಗಳು ಬಾಹುಬಲಿಯ ರಾಜಮಾತೆಯನ್ನು ತಾಯಿ ಎಂದೇ ಪೂಜಿಸ ತೊಡಗಿದರು. ಈ ಸಿನಿಮಾದ ನಂತರ ರಮ್ಯಾ ಕೃಷ್ಣ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ತಂದು ಕೊಟ್ಟಿತು.

ಆದರೆ ಶಿವಗಾಮಿ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರು. ಆದರೆ ಸಂಭಾವನೆ ವಿಚಾರಕ್ಕೆ ಶ್ರೀದೇವಿ ಪಾತ್ರ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೆಗೆ ರಮ್ಯಾ ಶಿವಗಾಮಿಯಾಗಿ ಬಣ್ಣಹಚ್ಚುವ ಮೂಲಕ ಇತಿಹಾಸ ನಿರ್ಮಿಸಿದರು. ಇನ್ನು ಬಾಹುಲಿ ಮೊದಲ ಭಾಗದಲ್ಲಿ ಬಲ್ಲಾಳದೇವ ಹಾಗೂ ಗೂಳಿ ಕಾಳಗ ಎಲ್ಲರ ಮನ ಗೆದ್ದಿತ್ತು. ಇನ್ನು ಇದನ್ನು ಹೇಗೆ ಚಿತ್ರೀಸಲಾಯಿತು ಗೊತ್ತಾ? ಕೆಳಗಿಮ ವಿಡಿಯೋ ನೋಡಿ.