ತಮಗೆಲ್ಲರಿಗೂ ತಿಳಿದಿರುವ ಹಾಗೆ ಮೂರ್ನಾಲ್ಕು ವರುಷದ ಹಿಂದೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರಸ್ವಾಮಿಯ ಕುರಿತು ವಿವಾಹ ವದಂತಿಗಳು ಸಾಕಷ್ಟು ಸದ್ದು ಮಾಡಿತ್ತು. ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ವಿವಾಹ ಅದ್ಧೂರಿಯಾಗಿ ನಡೆದಿದ್ದು ಅಲ್ಲಿಗೆ ಅಕ್ಕನ ಮದುವೆ ಮುಗಿಯಿತು ರಚಿತಾ ಲೈನ್ ಕ್ಲಿಯರ್ ಆಯ್ತು ಸದ್ಯದಲ್ಲೇ ರಚಿತಾ ರಾಮ್ ಮದುವೆ ಕೂಡ ನಡೆಯಲಿದೆ.
ಎಂಬ ವದಂತಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿತ್ತು ಎನ್ನಬಹುದು. ಅದಕ್ಕೆ ಸರಿಯಾಗಿ ನಟಿ ರಚಿತಾ ರಾಮ್ ಶೃಂಗೇರಿಗೆ ತೆರಳಿದ್ದು ಶಾರದಾಂಬೆಯ ದರ್ಶನ ಪಡೆಯಲು ರಚಿತಾ ರಾಮ್ ಹೋಗಿದ್ದರೆ ಅಲ್ಲಿ ಅದಾಗಲೇ ನಟ ನಿಖಿಲ್ ಕುಮಾರ್ ಸೇರಿದಂತೆ ಮಾಜಿ ಪ್ರಧಾನಿ ಎಚ್.ದೇವೇಗೌಡರ ಕುಟುಂಬ ಆಗಮಿಸಿ ಚಂಡಿಕಾ ಯಾಗ ನಡೆಸುತ್ತಿದ್ದರು.
ಹೌದು ಈ ಕಾರಣದಿಂದಾಗಿ ನಿಖಿಲ್ ಜೊತೆಗೆ ಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳಲು ರಚಿತಾರಾಮ್ ರವರು ಆಗಮಿಸಿದ್ದು ಇಬ್ಬರ ಮಧ್ಯೆ ಪ್ರೀತಿ ಮೂಡಿರುವ ಹಾಗಿದೆ. ಇಬ್ಬರು ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ಎಲ್ಲೆಡೆ ಕೇಳಿಬಂದಿದ್ದು ಇನ್ನೂ ಆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಇನ್ಸ್ಟಾಗ್ರಾಮ್ ನಲ್ಲಿ ನಿಖಿಲ್ ಗೆ ರಚಿತಾ ರಾಮ್ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಇದರ ಪರಿಣಾಮ ನಿಖಿಲ್ ಮತ್ತು ರಚಿತಾ ಮಧ್ಯೆ ಪ್ರೀತಿ ಮೊಳಕೆಯೊಡೆದಿರುವುದು ಪಕ್ಕಾ ಅಂತಲೇ ಹಲವರು ಭಾವಿಸಿದ್ದರು. ಹೌದು ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮೇಲೆ ನಟಿ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದು ಎಲ್ಲಾ ಗಾಸಿಪ್ ಗಳಿಗೂ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದರು.
ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಒಂದು ಸ್ಪಷ್ಟತೆ ಕೊಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಲ್ಲಿ ಅಥವಾ ವೈಯುಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ ಕೇವಲ ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು.
ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ. ಅತಿ ಮುಖ್ಯವಾದ ಸಂಗತಿ ಏನಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ ಎಂದು ಹೇಳುವ ಮೂಲಕ ಮದುವೆ ಕುರಿತಾದ ಎಲ್ಲಾ ಗಾಸಿಪ್ ಗಳಿಗೆ ನಟಿ ರಚಿತಾ ರಾಮ್ ಫುಲ್ ಸ್ಟಾಪ್ ಇಟ್ಟಿದ್ದರು.
ಇನ್ನ ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯುಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದಿದ್ದರು ನಟಿ ರಚಿತಾ.
ಆದರೆ ಇವರಿಬ್ಬರು ಎಷ್ಟು ಆತ್ಮೀಯರಾಗಿದ್ದರು ಎಂದರೆ ಸೀತಾರಾಮ ಕಲ್ಯಾಣ ಚಿತ್ರದ ಮಜಾ ಟಾಕೀಸ್ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.