ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಕ್ಕನ ಜೊತೆ ಗೀತಾ ಸೀರಿಯಲ್ ಭವ್ಯ ಗೌಡ ತರ್ಲೆ..ನೋಡಿ ಕ್ಯೂಟ್ ವಿಡಿಯೋ

1,251

Geetha serial Bhavya Gowda real life Sister photos: ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೇ ಕನ್ನಡದಲ್ಲಿ ಹಲವಾರು ಧಾರಾವಾಹಿಗಳು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು ಇಂತಹ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಕೂಡ ಒಂದು. ಸದ್ಯ ಇದೀಗ ಗೀತಾ ಧಾರಾವಾಹಿಯೂ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದ್ದು ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿಯ ನಿಜವಾದ ಹೆಸರು ಭವ್ಯ ಗೌಡ.

ಗೀತಾ ಧಾರವಾಹಿ ಮೂಲಕ ಮೊದಲ ಧಾರಾವಾಹಿಯಲ್ಲೇ ಭವ್ಯಾ ರವರು ಸಾಕಷ್ಟು ಹೆಸರು ಸಂಪಾದಿಸಿದ್ದು ಇದೀಗ ಇವರಿಗೆ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ನಟಿ ಭವ್ಯ ಗೌಡ ಅವರು ಗೀತಾ ಧಾರಾವಾಹಿಯಲ್ಲಿ ಅಭಿನಯಿಸಿ ಹಲವಾರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದು ಅವರಿಗೆ ಒಬ್ಬರು ಸ್ವಂತ ಅಕ್ಕ ಕೂಡ ಇದ್ದಾರೆ. ಅವರು ಯಾರು? ಏನು ಮಾಡುತ್ತಿದ್ದಾರೆ ಗೊತ್ತಾ? ಮುಂದೇ ಓದಿ.

ಭವ್ಯ ಗೌಡ ಅವರು ಮೊದಮೊದಲು ಗಗನಸಖಿ ಯಾಗುವ ಕನಸನ್ನು ಕಟ್ಟಿಕೊಂಡಿದ್ದರು. ಆದರೆ ತಂದೆ ತಾಯಿಯ ಆಸೆತಂತೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಜನರಿಗೆ ಹತ್ತಿರವಾಗಿದ್ದು ಅದರಲ್ಲೂ ಕೂಡ ಗೀತಾ ಧಾರಾವಾಹಿಯಲ್ಲಿ ಪ್ರಮುಖ ನಾಯಕ ನಟಿಯಾಗಿರುವುದು ವಿಶೇಷ. ಹೌದು ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಮಾಡಿ ಫೇಮಸ್ ಆದ ಇವರು ಬಳಿಕ ಕಿರುತೆರೆಗೆ ಬಂದವರು.

ಹೌದು ಇವರು ಕಿರುತೆರೆಯನ್ನು ಪ್ರವೇಶಿಸಲು ಇದೆ ವಿಡಿಯೋಗಳು ಸಹಾಯಕವಾಗಿದ್ದವು ಎಂದರೆ ತಪ್ಪಾಗಲಾರದು. ಭವ್ಯ ಗೌಡ ಅವರಿಗೆ ಸ್ವಂತ ಸಹೋದರಿ ಸಹ ಇದ್ದು ಆಕೆಯ ಹೆಸರು ದಿವ್ಯ ಗೌಡ. ಇನ್ನು ಇವರಿಬ್ಬರು ನೋಡಲು ಒಂದೇ ರೀತಿಯಾಗಿ ಕಾಣಿಸುತ್ತಿದ್ದು ಭವ್ಯ ಗೌಡ ಅವರು ತಮ್ಮ ನಿಜಜೀವನದಲ್ಲಿ ತುಂಬಾನೇ ಮಾಡರ್ನ್ ಆಗಿದ್ದಾರೆ ಎಂದೇ ಹೇಳಬಹುದು.

ಹೌದು ಆದರೆ ಧಾರಾವಾಹಿಯಲ್ಲಿ ಮಾತ್ರ ಸಾಂಪ್ರದಾಯಿಕ ಹುಡುಗಿಯಾಗಿ ಕಾಣುವ ಅವರು ಭಾಲ್ಯದಿಂದಲೂ ಕೂಡ ಗಗನಸಖಿಯಾಗುವ ಕನಸನ್ನು ಹೊಂದಿದ್ದರು. ಆದರೆ ಹೇಗೋ ಏನೋ ಅವರು ನಟನೆಯಲ್ಲಿ ಆಸಕ್ತಿಯನ್ನು ತೋರಿಸಿದ್ದು ಇದೀಗ ಟಾಪ್ ನಟಿಯಾಗಿದ್ದಾರೆ.

ಇನ್ನು ಟಿಕ್ ಟಾಕ್ ನಲ್ಲಿ ತಮ್ಮ ವಿಡಿಯೋಗಳನ್ನು ಶೇರ್ ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಸಹ ಗಳಿಸಿದ ಭವ್ಯಾ ಟಿಕ್ ಟಾಕ್ ನ ಅವರ ವಿಡಿಯೋಗಳೆ ಮೂಲಕ ಫೇಮಸ್ ಆದ ಬಳಿಕ ಕಿರುತೆರೆ ಆಡಿಶನ್ ಒಂದರಲ್ಲಿ ಭಾಗವಹಿಸಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಸದ್ಯ ಇದೀಗ ಇವರು ಗೀತಾ ಧಾರಾವಾಹಿಯ ನಾಯಕ ನಟಿಯಾಗಿ ಅಂದರೆ ಗೀತಾ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

ಹೌದು ಭವ್ಯ ರವರಿಗೆ ನಟನೆ ಮಾಡಲು ಮನೆಯವರು ಬೆಂಬಲ ಕೂಡ ನೀಡಿದ್ದು ಬಳಿಕ ಅವರು ಅಡಿಶನ್ ನಲ್ಲಿ ಆಯ್ಕೆ ಕೂಡ ಆಗುತ್ತಾರೆ. ಇನ್ನು ಭವ್ಯಾ ಅವರ ಸಹೋದರಿ ದಿವ್ಯಾ ಅವರು ಇನ್ನು ಸಹ ವ್ಯಾಸಂಗ ಮಾಡುತ್ತಿದ್ದು ಅವರಿಬ್ಬರ ನೋಡಲು ಒಂದೇ ರೀತಿಯಾಗಿದ್ದು ತುಂಬಾ ಅನ್ಯೋನ್ಯತೆಯಿಂದ ಇರುತ್ತಾರೆ. ಈ ಲೇಖನಿಯಲ್ಲಿ ದಿವ್ಯಾ ಅವರನ್ನು ನೋಡಬಹುದು.