ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಸಿಷ್ಠ ಸಿಂಹ ವಾಯ್ಸ್ ನಲ್ಲಿ ಸುದೀಪ್ ಡೈಲಾಗ್ ನೋಡಿ …ಚಿಂದಿ ವಿಡಿಯೋ

549

ಕಿಚ್ಚ ಸುದೀಪ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ಅದಾಗಲೇ 25 ವರ್ಷ ಕಳೆದಿದೆ. ಈ ದೊಡ್ಡ ಪ್ರಯಾಣದಲ್ಲಿ ಅವರು ಕಂಡ ಏಳು-ಬೀಳು ಹಲವು. ಹೌದು ಸೋಲು-ಗೆಲುವು ಏನೇ ಇದ್ದರೂ ಪ್ರೀತಿಯಿಂದ ಸಿನಿಮಾ ಮಾಡುವ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಸಿನಿಪ್ರಿಯರ ಹೃದಯದಲ್ಲಿ ಕಿಚ್ಚನಿಗೆ ಸ್ಥಾನವಿದೆ. ಈ 25 ವರ್ಷಗಳ ಸಿನಿಪಯಣದಲ್ಲಿ ಸುದೀಪ್​ ಪಾಲಿನ ಕೆಲವು ಸ್ಪೆಷಲ್​ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಹುಚ್ಚ ಮತ್ತು ತೆಲುಗಿನ ಈಗ ಚಿತ್ರಗಳಿಗೂ ಸ್ಥಾನವಿದೆ.

ಸುದೀಪ್​ಗೆ ದೊಡ್ಡ ಯಶಸ್ಸು ನೀಡಿದ ಹುಚ್ಚ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದ್ದು 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್​ ಆಗಿತ್ತು. ಡಿಫರೆಂಟ್​ ಆದ ಶೀರ್ಷಿಕೆ ಪೋಸ್ಟರ್​ಗಳಲ್ಲಿ ಕಾಣಿಸಿಕೊಂಡ ಸುದೀಪ್​ ಅವರ ಡಿಫರೆಂಟ್​ ಗೆಟಪ್​ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಹೌದು ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್​ ರಾಮ್​ನಾಥ್​ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.

ಅದಾಗಿ 11 ವರ್ಷ ಕಳೆಯುವುದರಲ್ಲಿ ಅಂದರೆ 2012ರಲ್ಲಿ ಸುದೀಪ್​ ಅವರು ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್​ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ಈಗ ಸಿನಿಮಾ ಮಾಡಿದ್ದು ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು.

ಹೌದು ಈಗ ರಿಲೀಸ್​ ಆಗಿದ್ದು ಕೂಡ ಜು.6ರಂದು. ಹಾಗಾಗಿ ಕಿಚ್ಚ ಸುದೀಪ್​ ಪಾಲಿಗೆ ಈ ದಿನಾಂಕ ತುಂಬಾ ಸ್ಪೆಷಲ್​. ಈ ಎರಡೂ ಸಿನಿಮಾಗಳನ್ನು ಕಿಚ್ಚ ಸುದೀಪ್ ಇತ್ತೀಚೆಗಷ್ಟೇಮೆಲುಕು ಹಾಕಿದ್ದು ಒಂದೇ ದಿನಾಂಕದಲ್ಲಿ ಎರಡು ಅವಿಸ್ಮರಣೀಯ ಸಿನಿಮಾಗಳು. ರೆಹಮಾನ್​ ಸರ್, ಓಂ ಪ್ರಕಾಶ್​ ರಾವ್​ ಸಾಯಿ ಅವರು ಮತ್ತು ರಾಜಮೌಳಿ ಸರ್​ಗೆ ಧನ್ಯವಾದಗಳು ಎಂದು ಹುಚ್ಚ ಮತ್ತು ಈಗ ಸಿನಿಮಾಗಳ ನಿರ್ಮಾಪಕ-ನಿರ್ದೇಶಕರಿಗೆ ಸುದೀಪ್​ ಕೃತಜ್ಞತೆ ಸಲ್ಲಿಸಿದ್ದಾರೆ.

ಸದ್ಯ ಇದೀಗ ಕಿಚ್ಚ ಸುದೀಪ್ ಎದರು ಮೋಸ್ಟ್ ಟ್ರೇಡಿಂಗ್ ನಲ್ಲಿರುವ ನಟ ವಸಿಷ್ಠ ಸಿಂಹ ರವರು ಮಾತನಾಡಿದ್ದಾರೆ. ನಟಿ ಹರಿಪ್ರಿಯಾ ಅವರು ( ಸಿಂಹದ ಕೈಮೇಲೆ ಮಗುವೊಂದು ಮಲಗಿರುವ ಫೋಟೋ ಹಂಚಿಕೊಂಡುಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಅಡಿಬರಹ ನೀಡಿದ್ದರು. ಆಗಲೇ ಅಭಿಮಾನಿಗಳು ಆ ಸಿಂಹ ಮತ್ಯಾರು ಅಲ್ಲ ವಸಿಷ್ಠ ಸಿಂಹ ಎಂದು ಊಹಿಸಿದ್ದರು. ಈಗ ಈ ವಿಷಯ ಖಚಿತವಾಗಿದೆ.

ಹರಿಪ್ರಿಯಾ ವಸಿಷ್ಠ ನಿಶ್ಚಿತಾರ್ಥದ ಫೋಟೋ ಹೊರಬಿದ್ದಿದೆ. ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋವನ್ನೇ ವಸಿಷ್ಠ ಸಿಂಹ ಕೂಡ ಹಂಚಿಕೊಂಡು ಎಂದೂ ನಿನ್ನ ನೆರಳಾಗಿ ಕಾಯುವೆ ನಾನು ಎಂದು ಕ್ಯಾಪ್ಶನ್ ನೀಡಿದ್ದಾರೆ. ವಸಿಷ್ಠ ಸಿಂಹರಿಂದ ಈ ಪೋಸ್ಟ್ ಬಂದಮೇಲಂತೂ ಗಾಸಿಪ್ ಪಕ್ಕಾ ಆಯ್ತುಬಿಡಿ.

ಇದರ ಬೆನ್ನಲ್ಲೆ ಇದೀಗ ವಸಿಷ್ಠ ಸಿಂಹ ಟ್ರೆಂಡಿಂಗ್ ನಲ್ಲಿದ್ದು ಅವರ ಹಳೆಯ ವಿಡಿಯೋಗಳಲ್ಲಾ ವೈರಲ್ ಆಗುತ್ತಿದ್ದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಸಿಷ್ಠ ಸಿಂಹ ರವರು ಕಿಚ್ಚನ ಎದರು ನಾನು ಹುಚ್ಚ ಸಿನಿಮಾ ನೋಡಿದಾಗಲಿಂದ ನಿಮ್ಮ ಫ್ಯಾನ್ ಆಗಿದ್ದೇನೆ. ವಾಲಿ ಸಿನಿಮಾ ಅಂತು ಬಹಳ ಇಷ್ಟ ಎಂದು ಹೇಳುತ್ತಾ ಕಿಚ್ಚನ ಧ್ವನಿಯಲ್ಲಿ ವೀರ ಮದಕರಿ ಡೈಲಾಗ್ ಹೇಳಿದ್ದಾರೆ. ಇದಕ್ಕೆ ಕಿಚ್ಚನ ಪ್ರತಿಕ್ರಿಯೆ ಏನಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.