ಸದ್ಯ ಇದೀಗ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚು ಸದ್ದನ್ನು ಮಾಡುತ್ತಿದೆ ಕಾಂತಾರ ಸಿನಿಮಾ. ಆದರೆ ಮಾತ್ರ ಇಲ್ಲಿ ಎಲ್ಲರಲ್ಲೂ ಮೂಡುತ್ತಿರುವಂತಹ ಪ್ರಶ್ನೆ ಒಂದೇ. ಕಾಂತಾರ ಸಿನಿಮಾದ ಕೊನೆಯಲ್ಲಿ ರಿಷಬ್ ಶೆಟ್ಟಿಯವರ ಮೇಲೆ ನಿಜಕ್ಕೂ ದೈವ ಆಹ್ವಾನವಾಗಿತ್ತಾ? ಹಾಗಿದ್ದರೆ ಅದು ಎಷ್ಟು ಸತ್ಯ? ಕಾಂತರಾ ಸಿನಿಮಾವನ್ನು ಕುರಿತು ದೈವ ನರ್ತಕರು ಏನು ಹೇಳುತ್ತಾರೆ? ಕಾಂತರಾ ಸಿನಿಮಾಗೆ ಪಂಜುರ್ಲಿ ದೈವವೇ ಈ ಸಿನಿಮಾವನ್ನು ಮಾಡು ಎಂದು ಶೆಟ್ಟರಿಗೆ ನಿಜಕ್ಕೂ ಹೇಳಿತ್ತಾ? ಈ ಕುತೂಹಲ ಪ್ರತಿಯೊಬ್ಬರಲ್ಲೂ ಇದೆ.
ಈ ರಹಸ್ಯವನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಮುಂದೆ ಓದಿ.ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ವೇಷವನ್ನು ಧರಿಸಿ ನಟನೆಯನ್ನು ಮಾಡಿದ್ದು ಅದರೆ ಕೊನೆಗೆ ರಿಷಬ್ ಶೆಟ್ಟಿ ಅವರ ಮೈಮೇಲೆ ಗುಳಿಗ ದೈವದ ಆಹ್ವಾನೆ ಯಾಗುತ್ತದೆ. ಹೌದು ನಿಜಕ್ಕೂ ಆ ದೃಶ್ಯವನ್ನು ನೋಡಿದವರು ಒಂದು ಕ್ಷಣ ಬಿಚ್ಚಿ ಬೀಳದೆ ಇರುವುದಿಲ್ಲ. ಅದರಲ್ಲೂ ಕೂಡ ಸಿನಿಮಾವನ್ನು ನೋಡಿ ಬಂದ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಿರುವುದು ಕೂಡ ಅದೇ ಕೊನೆಯ 10 ನಿಮಿಷದ ಕ್ಲೈಮ್ಯಾಕ್ಸ್ ನ ಬಗ್ಗೆ ಎನ್ನಬಹುದು.
ಹಾಗಾದರೆ ಸಿನಿಮಾವನ್ನು ಹೊರತುಪಡಿಸಿ ರಿಷಬ್ ಶೆಟ್ಟಿಯವರು ಈ ಚಿತ್ರದಲ್ಲಿ ಪಂಜುರ್ಲಿ ದೈವದ ವೇಷವನ್ನು ಹಾಕಿಕೊಳ್ಳಲು ಸ್ವತಃ ಪಂಜುರ್ಲಿ ದೈವ ಆಹ್ವಾನೆಯಾಗಿದ್ದಂತಹ ದೈವವನ್ನು ಕೇಳಿದ್ದರಂತೆ. ಆ ಸಂಧರ್ಭದಲ್ಲಿ ಆಹ್ವಾನೆಯಾಗಿದ್ದಂತಹ ದೈವ ತನ್ನ ಮುಖದ ಮೇಲೆ ಇದ್ದಂತಹ ಬಣ್ಣವನ್ನು ತೆಗೆದು ರಿಷಬ್ ಶೆಟ್ಟಿ ಅವರ ಮುಖಕ್ಕೆ ಹಚ್ಚಿ ಅಸ್ತು ಅಂದಿತ್ತು.
ಅಲ್ಲದೆ ಸಿನಿಮಾ ಮಾಡುವ ಮುನ್ನ ರಿಷಬ್ ಶೆಟ್ಟಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೂಡ ಭೇಟಿ ಕೊಟ್ಟಿದ್ದರಂತೆ. ರಿಷಬ್ ಶೆಟ್ಟಿ ನಟಿಸುವ ಮೊದಲು ಮಂಗಳೂರಿನ ಸುತ್ತಮುತ್ತಲಿನ ಕೆಲ ದೈವ ನರ್ತಕರು ದೈವಾರಾಧನಾ ಮಾಡುವಂತಹ ಹಿರಿಯರು ಮತ್ತು ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು. ಯಾಕೆ ಎಂದರೆ ಒಂದು ಭಾಗದ ಜನರು ಮಾತ್ರ ಇದನ್ನು ಮಾಡುತ್ತಾರೆ.
ನಾವು ಸಿನಿಮಾಗೆ ಮಾಡುವುದಾದರೆ ಹೇಗೆ ಮಾಡಬೇಕು ಅನ್ನುವುದನ್ನ ರಿಷಬ್ ತಿಳಿದುಕೊಳ್ಳಬೇಕಿತ್ತು. ಅದಕ್ಕೆ ಅವರು ಧರ್ಮಸ್ಥಳದ ಮಂಜುನಾಥ ಬಳಿ ಹೋಗಿ ಅಲ್ಲಿ ಪ್ರಾರ್ಥಿಸು ಎಲ್ಲಾ ಮೂಲಗಳು ಸಹ ಅಲ್ಲೆ ಇರುವುದು ಎಂದು ದೈವವರ್ತಕರು ರಿಷಬ್ ಗೆ ಸಲಹೆ ನೀಡಿದ್ದರಂತೆ.
ಇನ್ನು ರಿಷಬ್ ವಿರೇಂದ್ರ ಹೆಗೆಡೆ ಅವರನ್ನು ಬೇಟಿ ಮಾಡಿ ಈ ರೀತಿ ಸಿನಿಮಾ ಮಾಡುತ್ತಿದ್ದೆನೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೇಳಿದಾಗ ವಿರೇಂದ್ರ ಹೆಗೆಡೆಯವರು ಕೂಡ ಇಲ್ಲಿಗೆ ಬಂದಿದ್ಯಲ್ಲ ಏನು ಆಗಲ್ಲ ಸಿನಿಮಾ ಮಾಡು ಎಂದಿದ್ದಾರೆ. ಹೀಗೆ ಎಲ್ಲಾ ಕಡೆ ಆಜ್ಞೆ ಸಿಕ್ಕ ನಂತರ ರಿಷಬ್ ಪಂಜುರ್ಲಿ ವೇಷ ತೊಟ್ಟು ನಟಿಸತೊಡಗಿದರು.
ಆದರೆ ಸಿನಿಮಾ ತಂಡದವರ ಪ್ರಕಾರವಾಗಿ ಅಂದು ರಿಷಬ್ ಮೈಮೇಲೆ ದೈವ ಆಹ್ವಾನೆ ಯಾಗಿರುತ್ತದೆ. ಅವರ ಮುಖ ನೋಡಿದರೆ ದೈವ ಆಹ್ವಾನೆಯಾಗಿದ್ದ ಕಂಡಿತ್ತು ಎಂದು ಹೇಳಿದ್ದಾರೆ. ಕೊನೆಗೆ ಸಿನಿಮಾದಲ್ಲಿ ಕೊನೆಯ 20 ನಿಮಿಷ ಬರುವ ಗುಳಿಗ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಹೌದು ಸಿನಿಮಾವನ್ನು ಸೂಷ್ಮವಾಗಿ ನೋಡಿದಾಗ ರಿಷಬ್ ಅವರ ಮುಖದಲ್ಲಿ ದೈವ ಆಹ್ವಾನ ಆಗಿರುದು ಎದ್ದು ಕಾಣುತ್ತದೆ. ಸದ್ಯ ಸಿನಿಮಾ ಬಂದಿದ್ದು ಆಯ್ತು ಸೂಪರ್ ಹಿಟ್ ಆಗಿದ್ದು ಆಯ್ತು. ಆದರೆ ಚಿತ್ರತಂಡ ಮಾತ್ರ ಈ ಯಶಸ್ಸಿಗೆ ಕಾರಣ ದೈವ ಎನ್ನುತ್ತಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.