ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪತ್ನಿ ಜೊತೆ ರಿಷಬ್ ಶೆಟ್ಟಿ ಮನೇಲಿ ಹೇಗಿರುತ್ತಾರೆ ನೋಡಿ…ಚಿಂದಿ ವಿಡಿಯೋ

153

Rishab Reveals his First Girlfriend in Front of his Wife : ಸಾಮಾನ್ಯವಾಗಿ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎಂಬ ಮಾತಿದೆ. ಸದ್ಯಕ್ಕೆ ಕಾಂತಾರ ಸಿನಿಮಾದ ಸಕ್ಸಸ್ ನಿಂದ ಡಿವೈನ್ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಯವರ ಹಿಂದೆ ಶಕ್ತಿಯಾಗಿ ನಿಂತಿರುವುದು ಕೂಡ ಒಂದು ಹೆಣ್ಣು ಎನ್ನಬಹುದು. ಹೌದು ಈ ಬಗ್ಗೆ ರಿಷಭ್ ಶೆಟ್ಟಿ ಅವರೇ ಹೇಳಿಕೊಂಡಿರುವಂತೆ ಅವರ ಪತ್ನಿ ಪ್ರಗತಿಶೆಟ್ಟಿ ಅವರು ಅವರ ಜೀವನದಲ್ಲಿ ಬಂದ ಮೇಲೆ ಅವರ ಬದುಕು ಬಹಳ ಬದಲಾಗಿದೆಯಂತೆ.

ಹೌದು ತನ್ನ ಪ್ರತಿಯೊಂದು ಆಗುಹೋಗುಗಳಿಗೆ ಬೆನ್ನೆಲುಬು ಆಗಿ ನಿಂತಿರುವ ಪತ್ನಿಯಿಂದ ಈ ಮಟ್ಟಕ್ಕೆ ಸಾಧಿಸಲು ಸಾಧ್ಯ ಆಯಿತು ಎಂದು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದು ಈಗ ಕಾಂತಾರ ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಿರಂತರವಾಗಿ ಹಲವಾರು ಸಂದರ್ಶನಗಳಲ್ಲಿ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿಶೆಟ್ಟಿ ಅವರು ಪಾಲ್ಗೊಂಡಿದ್ದು ಈ ಎಲ್ಲಾ ಇಂಟರ್ವ್ಯೂಗಳಲ್ಲಿ ಸಾಮಾನ್ಯವಾಗಿ ಇವರ ಬಗ್ಗೆ ಕೇಳಲಾದ ಪ್ರಶ್ನೆ ಅವರ ಲವ್ ಸ್ಟೋರಿ ಬಗ್ಗೆ ಸಂದರ್ಶನದಲ್ಲಿ ಭಾಗಿಯಾದ ಪ್ರಗತಿಶೆಟ್ಟಿ ಅವರಿಗೆ ಮತ್ತೊಮ್ಮೆ ಅದೇ ಲವ್ ಸ್ಟೋರಿ ಬಗ್ಗೆ ಕೇಳಲಾದಾಗ ವಿವರವಾಗಿ ಅವರು ತಮ್ಮ ಪ್ರೀತಿಯ ಕಥೆಯನ್ನು ಮತ್ತು ಅದಕ್ಕೆ ಕಾರಣ ಯಾರು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಐಐಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಗತಿ ರವರು ಒಂದು ಕಡೆಯಾದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಸೈಕಲ್ ಹೊಡೆಯುತ್ತಿದ್ದ ರಿಷಬ್ ಮತ್ತೊಂದು ಕಡೆ. ಇವರಿಬ್ಬರ ನಡುವೆ ಪ್ರೀತಿ ಆಗಲು ಸೇತುವೆ ಆಗಿದ್ದು ಬೇರೆ ಯಾರು ಅಲ್ಲ ರಕ್ಷಿತ್ ಶೆಟ್ಟಿ. ಹೌದು ಈಗ ಅಣ್ಣನಾಗಿ ಪ್ರಗತಿ ಅವರಿಗೆ ಬಹಳ ಹತ್ತಿರ ಆಗಿರುವ ರಕ್ಷಿತ್ ಶೆಟ್ಟಿ ಅವರ ಪರಿಚಯ ಆಗುವ ಮುನ್ನ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದರಂತೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪ್ರಗತಿ ಅವರು ತಮ್ಮದೇ ಊರಿನ ಕಡೆಯ ಸ್ನೇಹಿತೆಯರೊಡನೆ ವಾರಾಂತ್ಯದಲ್ಲಿ ಸಿನಿಮಾಗೆ ಹೋಗಿರುತ್ತಾರೆ. ಹೌದು ಆ ಗುಂಪಿನ ಎಲ್ಲರೂ ಕೂಡ ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದು ಪ್ರಗತಿ ಕೂಡ ಉಳಿದವರು ಕಂಡಂತೆ ಸಿನಿಮಾ ನೋಡಿದ ಬಳಿಕ ರಕ್ಷಿತ್ ಶೆಟ್ಟಿ ಅವರ ಫ್ಯಾನ್ ಆಗಿದ್ದರು. ಹೀಗಾಗಿ ರಕ್ಷಿತ್ ಶೆಟ್ಟಿ ಅವರ ರಿಕ್ಕಿ ಸಿನಿಮಾ ನೋಡಲು ಸ್ನೇಹಿತೆಯರೊಡನೆ ತೆರಳಿದ್ದರು.

ರಿಷಬ್ ಶೆಟ್ಟಿ ಅವರು ರಿಕ್ಕಿ ಸಿನಿಮಾದ ನಿರ್ದೇಶಕ ಎನ್ನುವುದು ಪ್ರಗತಿ ಅವರಿಗೆ ತಿಳಿದಿರಲ್ಲವಂತೆ. ಇನ್ನು ಸಿನಿಮಾಗೆ ಹೋಗಿದ್ದ ಅದೇ ಥಿಯೇಟರ್ ಗೆ ರಕ್ಷಿತ್ ಹಾಗೂ ರಿಷಬ್ ಕೂಡ ಬಂದಿದ್ದು ಆ ಸಮಯದಲ್ಲಿ ಎಲ್ಲರೂ ಕೂಡ ರಕ್ಷಿತ್ ಅವರನ್ನು ಗುರುತಿಸಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದರಂತೆ.

ಆಗ ಪಕ್ಕದಲ್ಲಿ ಒಬ್ಬರೇ ನಿಂತಿದ್ದ ರಿಷಬ್ ಅವರನ್ನು ಗಮನಿಸಿದ ಪ್ರಗತಿ ಅವರ ಸ್ನೇಹಿತೆ ಇವರೇ ಸಿನಿಮಾದ ನಿರ್ದೇಶಕ ಇವರ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಹೇಳಿದರಂತೆ. ಆಗ ಪ್ರಗತಿ ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಇವರು ಕೂಡ ಅಭಿನಯಿಸಿದ್ದಾರೆ ಅಲ್ಲವಾ ಮಾತನಾಡಿಸೋಣ ಎಂದು ಹೋಗಿ ರಿಷಬ್ ಅವರೊಂದಿಗೆ ಮಾತಿಗಿಳಿದಿದ್ದು ಫೋಟೋ ತೆಗೆದುಕೊಂಡು ನಾವು ಕುಂದಾಪುರ ಕಡೆಯವರು ನಮ್ಮ ಕಡೆಯವರು ಈಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರುವುದು ನಮಗೆಲ್ಲ ಖುಷಿಯ ಸಂಗತಿ ಎಂದು ಪ್ರಗತಿ ಹೇಳಿದ್ದು ರಿಷಭ್ ಅವರಿಗೆ ಬಹಳ ಕನೆಕ್ಟ್ ಆದರು.

ಇವರನ್ನು ಎಲ್ಲೋ ನೋಡಿದ್ದೇನೆ ಎಂದು ಗಮನಿಸಿದಾಗ ಫೇಸ್ಬುಕ್ ನಿಂದ ರಿಕ್ವೆಸ್ಟ್ ಬಂದಿರುವುದು ಗೊತ್ತಾಗುತ್ತದೆ. ಹೌದು ಅದನ್ನು ಅಕ್ಸೆಪ್ಟ್ ಮಾಡಿಕೊಂಡು ಆ ಮೂಲಕ ಮತ್ತೊಮ್ಮೆ ಅವರನ್ನು ಭೇಟಿಯಾಗಿ ಭೇಟಿಯಾದ ವರ್ಷದೊಳಗೆ ಕುಟುಂಬದವರನ್ನು ಒಪ್ಪಿಸಿ ಮದುವೆ ಆದರಂತೆ. ಸದ್ಯ ಇದೀಗ ಈ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಸಂತೋಷದಿಂದ ಎಲ್ಲರಿಗೂ ಮಾದರಿ ಜೋಡಿಯಾಗಿ ಬದುಕುತ್ತಿದ್ದಾರೆ. ಈ ನಡುವೆ ರಿಷಬ್ ಪ್ರಗತಿ ಎದುರೇ ತಮ್ಮ ಮೊದಲ ಗರ್ಲ್ ಫ್ರೆಂಡ್ ಬಗ್ಗೆ ಮಾತನಾಡಿದ್ದು ಇದಕ್ಕೆ ಪ್ರಗತಿ ರಿಯಾಕ್ಷನ್ ಹೇಗಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ ಶಾಕ್ ಆಗುತ್ತೀರ..