ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಾಡು ಹೇಳುತ್ತಾ ರಚಿತಾರಾಮ್ ಮೇಕಪ್ ಮಾಡಿಕೊಳ್ಳುವುದು ನೋಡಿ…ವಿಡಿಯೋ

1,094

ಗುಳಿಗೆನ್ನೆ ಸುಂದರಿ ನಟಿರಚಿತಾಮ್ ಸದ್ಯ ಸಿನಿಮಾ ಮಾತ್ರ ಅಲ್ಲ ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ಹೌದು ಒಂದಾದ ಬಳಿಕ‌ ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ ನಟಿ ರಚಿತಾ ರಾಮ್. ಈ ಮೂಲಕ ಪ್ರೇಕ್ಷಕರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮುಂದಿನ ಹಲವು ವರ್ಷ ಫ್ರೀ ಇಲ್ಲ. ಹೌದು ಏಕೆಂದರೆ ಕೈ ತುಂಬಾ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳು ಇದ್ದು ಇನ್ನೂ ಈ ವರ್ಷ ಅವರು ನಟನೆಯ ಹಲವು ಸಿನಿಮಾಗಳು ಕೂಡ ತೆರೆಕಂಡಿವೆ. ಇತ್ತೀಚೆಗೆ ಮಾನ್ಸೂನ್ ರಾಗ ಸಿನಿಮಾದ ಮೂಲಕ ಗಮನ ಸೆಳೆದಿದ್ದರು ರಚಿತಾ ರಾಮ್.

ಸ್ಟಾರ್ ನಟನರ ಜೊತೆ ಅಭಿನಯಿಸಿರುವ ರಚಿತಾ ರಾಮ್ ರವರು ಕಥೆ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾನೇ ಎಚ್ಚರಿಕೆ ವಹಿಸುತ್ತಾರೆ ಎನ್ನಬಹುದು.ಹೌದು ಹಾಗಾಗಿಯೇ ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದು ಇನ್ನೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿರುವ ರಚ್ಚು‌ ಲುಕ್ ಬಗ್ಗೆಯೇ ಹೆಚ್ವು ಚರ್ಚೆ ಆಗುತ್ತಿರುತ್ತದೆ.

ರಚಿತಾ ರಾಮ್ ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಹೌದು ಹಾಗಾಗಿ ಪ್ರತೀ ಬಾರಿ ಅವರು ಯಾವ ರೀತಿ ಸೀರೆ ತೊಡುತ್ತಾರೆ ಎನ್ನುವುದೇ ಕುತೂಹಲ.ಮಜಾಭಾರತ, ಡ್ಯಾನ್ಸ್ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್‌ ಹಾಗೂ ಇತ್ತೀಚೆಗಷ್ಟೇ ಪ್ರಾರಂಭವಾಗಿರುವ ಜೀ ವಾಹಿನಿಯ ಹೊಸ ಕಾರ್ಯಕ್ರಮದಲ್ಲಿ ತೀರ್ಪುಗಾರರ ಸ್ಥಾನದಲ್ಲಿರುವ ರಚಿತಾ ತುಂಬಾನೇ ಟ್ರೆಡಿಷನಲ್‌ ಆಗಿ‌‌ ಕಾಣಲು ಇಷ್ಟ ಪಡುತ್ತಾರೆ. ಅದರಲ್ಲೂ ಸೀರೆನೇ ಹೆಚ್ಚಿಗೆ ಬಳಸುತ್ತಿದ್ದಾರೆ.‌ ಇತ್ತೀಚೆಗಷ್ಟೇ ರಚ್ಚು ಮತ್ತೊಂದು ಲುಕ್ ವೈರಲ್ ಆಗಿತ್ತು. ಕೆಂಪು ರೇಷ್ಮೆ ಸೀರೆಯುಟ್ಟು ಮದುಮಗಳಂತೆ ಮಿಂಚಿದ್ದಾರೆ. ‌ರಚಿತಾ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಾವಿರಾರೂ ಜನರು ನೋಡುವ ಶೋ ಆಗಿರುವುದರಿಂದ ರಚಿತಾ ರಾಮ್ ಅವರೇ ಹೇಳುತ್ತಾರೆ ಲುಕ್ ಸಿಂಪಲ್ ಮತ್ತು ಡೀಸೆಂಟ್ ಆಗಿರಬೇಕೆಂದು. ಮಕ್ಕಳ ಶೋ ಆಗಿರುವುದರಿಂದ ಟ್ರೆಡಿಷನಲ್ ಆಗಿರಬೇಕು ಎನ್ನುತ್ತಾರೆ ಎಂದು ಡಿಸೈನರ್ ವರ್ಷಿಣಿ ಜಾನಕಿರಾಮ್ ಖಾಸಗಿ ಸಂದರ್ಶನಲ್ಲಿ ಹೇಳಿದ್ದರು.

ಸೀರೆ ಎಷ್ಟು ವರ್ಷಗಳ ನಂತರ ಬೇಕಿದ್ದರೂ ಬಳಸಬಹುದು. ಯಾರು ಬೇಕಿದ್ದರೂ ಬಳಸಬಹುದು. ಮತ್ತೊಂದು ವಿಶೇಷತೆ ಏನೆಂದರೆ ಸೀರೆಯಲ್ಲಿ ಎಲ್ಲೂ ಚೆಂದ ಕಾಣಿಸುತ್ತಾರೆ. ಹೀಗಾಗಿ ರಚ್ಚುಗೆ ಸೀರೆನೇ ಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸದ್ಯ ರಚ್ಚು ಕೈಯಲ್ಲಿ ಈಗ ವೀರಂ ಮಾರ್ಟಿನ್ ಬ್ಯಾಡ್ ಮ್ಯಾನರ್ಸ್‌ ಶಬರಿ ಸರ್ಚಿಂಗ್ ಫಾರ್ ರಾವಣ ಲವ್ ಮಿ ಆರ್ ಹೇಟ್ ಮೀ ಮತ್ತು ಕ್ರಾಂತಿ ಸಿನಿಮಾವಿದೆ. ಈ ನಡುವೆ ರಚ್ಚು ರವರ ಮತ್ತೊಂದು ಸೀರೆ ವಿಡಿಯೋ ವೈರಲ್ ಆಗಿದ್ದು ಈ ಲೇಖನಿಯ ಕೆಳಗೆ ನೋಡಬಹುದು.