ನಮ್ಮ ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಪ್ರತಿಭೆಗಳಿದ್ದು ಅದರಲ್ಲಿ ಪುಟ್ಟಗೌರಿ ಮದುವೆ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡ ಕಲಾವಿದರುಗಳಲ್ಲಿ ನಮ್ರತಾ ಗೌಡ ಕೂಡ ಒಬ್ಬರು ಎನ್ನಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿರುತೆರೆ ಲೋಕದ ನಂಬರ್ ಓನ್ ಧಾರಾವಾಹಿ ಪುಟ್ಟಗೌರಿ ಮದುವೆಯಲ್ಲಿ ಹಿಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಮ್ರತ ಗೌಡ ರವರು ಈ ಧಾರಾವಾಹಿಯ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದು ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ೨ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕವಾಗಿ
ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ನಾಗಿಣಿ ಧಾರಾವಾಹಿಯ ಅಭಿನಯದಿಂದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದು ನಮ್ರತಾ ಅಭಿನಯಿಸುತ್ತಿರುವ ಪರಿ ಹಾಗೂ ಜನಪ್ರಿಯತೆಯನ್ನು ಕಂಡುಕೊಳ್ಳುತ್ತಿರುವ ರೀತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ಬೆಳ್ಳುತೆರೆಯಲ್ಲಿಯೂ ಸಹ ಭರವಸೆಯ ನಟಿಯಾಗಿ ಮೆರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ.
ನಾಗಿಣಿ ಧಾರಾವಾಹಿಯಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ರತಾ ಗೌಡ ನಟನೆಯ ಜೊತೆ ಉತ್ತಮ ನೃತ್ಯಗಾರ್ತಿ ಕೂಡಾ ಹೌದು. ಬೆಂಗಳೂರಿನಲ್ಲಿಯೇ ಜನಿಸಿದ ಈ ನಟಿ ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಳ್ಳುತ್ತಾರೆ. ಮೊದಲು ಕೃಷ್ಣ ರುಕ್ಮಿಣಿ ಎಂಬ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಮ್ರತ ಗೌಡ ಪುಟ್ಟಗೌರಿ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮನ್ನು ತಾವು ಭದ್ರವಾಗಿ ಸ್ಥಾಪಿಸಿಕೊಳ್ಳುತ್ತಾರೆ.
ಅಲ್ಲದೆ ತಕಧಿಮಿತಾ ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ನೃತ್ಯ ಮಾಡಿದ್ದ ಈ ನಟಿ ತಮ್ಮ ವಿಶಿಷ್ಟ ನೃತ್ಯದ ಮೂಲಕ ಎಲ್ಲರ ಮನೆಮಾತಾಗಿದ್ದರು. ಇನ್ನು ಕೆಲವು ತಿಂಗಳು ಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಅವರು ವಿವಾಹವಾಗಿರುವ ಫೋಟೋಗಳು ಹಾಗೂ ವೀಡಿಯೊಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು ಅದರಲ್ಲಿಯೂ ನಾಗಿಣಿ ಧಾರಾವಾಹಿಯ ಮುಖ್ಯಪಾತ್ರಧಾರಿಯ ನಟನ ಜೊತೆ ವಿವಾಹವಾಗಿರುವುದು ಕಂಡುಬಂದಿತ್ತು.
ತೆರೆ ಮೇಲಿನ ಜೋಡಿಗಳು ನಿಜವಾಗಿಯೂ ವಿವಾಹವಾಗಿರುವ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಅವರಿಗೆ ಶುಭಾಶಯವನ್ನು ತಿಳಿಸುತ್ತಿದ್ದರು. ಆದರೆ ಅಸಲಿಗೆ ಇದು ಕೇವಲ ನಾಗಿಣಿ ಧಾರಾವಾಹಿಯ ಚಿತ್ರೀಕರಣವಾಗಿದ್ದು ನನಗಿನ್ನೂ ವಿವಾಹವಾಗಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.
ಸದ್ಯ ಇದೀಗ ನಾಗಿಣಿ ಧಾರಾವಾಹಿ ಯಿಂದ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಅತಿಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಮ್ರತ ಗೌಡ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಧೂಳೆಬ್ಬಿಸಲಿ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.ಇ
ನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ವಿಶೇಷವಾದ ನೃತ್ಯ ವಿಡಿಯೋಗಳು ಹಾಗೂ ಲಿಪ್ ಸಿಂಕ್ ವಿಡಿಯೊಗಳನ್ನು ಮಾಡುತ್ತಾ ಜನರ ಗಮನ ಸೆಳೆಯುತ್ತಿದ್ದು ಇದರ ಜೊತೆಗೆ ಗ್ಲಾಮರಸ್ ಫೋಟೋ ಶೂಟ್ ಗಳನ್ನು ಕೂಡ ಅಪ್ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ನೋಡಲು 20 ವರ್ಷದಂತೆ ಕಾಣುವ ನಮ್ರತ ಗೌಡ ಅವರಿಗೆ ಇದೀಗ 27ವರ್ಷವಾಗಿದೆ. ಈಗಾಗಲೇ ಕಿರುತೆರೆಗೆ ಭರವಸೆಯ ನಟಿಯಾಗಿ ಹೆಸರು ಮಾಡಿರುವ ಇವರು ಮುಂದಿನ ದಿನಗಳಲ್ಲಿ ಸ್ಟಾರ್ ನಟಿಯಾಗಿ ಕಾಣಿಸಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ರವರ ಹೊಸ ವಿಡಿಯೋ ವೈರಲ್ ಆಗಿದ್ದು ಕೆಳಗಿಮ ವಿಡಿಯೋದಲ್ಲಿ ನೋಡಬಹುದು.