ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಭಾರತದ ದೊಡ್ಡ ರೈಲನ್ನೇ ಎಳೆದ ಟಾಟಾ ಕಾರು…ನೋಡಿ ಚಿಂದಿ ವಿಡಿಯೋ

264

ಸಾಮಾನ್ಯವಾಗಿ ಕಾರು ಪ್ರಿಯರ ಮನಸ್ಸನ್ನು ಗೆಲ್ಲಲು ದೊಡ್ಡ ದೊಡ್ಡ ಕಂಪನಿಗಳು ವಿಶೇಷ ರೀತಿಯಲ್ಲಿ ಐಷಾರಾಮಿಯ ದುಬಾರಿ ಬೆಲೆಯ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿದೆ. ಹೌದು ಅದರಲ್ಲಿ ಲ್ಯಾಂಡ್ ರೋವರ್ ಸಂಸ್ಥೆಯ ಫ್ರೀಲ್ಯಾಂಡರ್ ಕಾರು ದೇಶದ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಯಲ್ಲಿಯೂ ಸಹ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು.

ಬಾಕ್ಸಿ ವಿನ್ಯಾಸದ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಬಳಿಕ ಜಾಗ್ವಾರ್ ಲ್ಯಾಂಡ್ ರೋವರ್ ತಮ್ಮ ಫ್ರೀಲ್ಯಾಂಡರ್2 ಕಾರಿನ ಮರಾಟವನ್ನು ಸ್ಥಗಿತಗೊಳಿಸಿ 2015 ರಲ್ಲಿ ಹೊಸ ಡಿಸ್ಕವರಿ ಸ್ಪೋರ್ಟ್ ಕಾರನ್ನು ಪರಿಚಯಿಸಿತು. ಹೌದು 2015ರಲ್ಲಿ ಬಿಡಗಡೆಗೊಂಡ ಈ ಐಷಾರಾಮಿ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು, ಹೊಸ ನೋಟ ಹಾಗೂ ಆಕರ್ಷಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವಾರು ಐಷಾರಾಮಿ ಸೌಲತ್ತುಗಳು ಮತ್ತು ವೈಶಿಷ್ಟ್ಯತೆಗಳನ್ನು ಕೂಡ ಹೊಂದಿದೆ.

ಈ ಕಾರು ವಿಶ್ವದ ಅತ್ಯಂತ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದ ನಂತರ ಮತ್ತೊಮ್ಮೆ ಈ ಕಂಪೆನಿಯು 2017ರಲ್ಲಿ ತಮ್ಮ ಡಿಸ್ಕವರಿ ಸ್ಪೋರ್ಟ್ ಕಾರನ್ನು ಮರುವಿನ್ಯಾಸಗೊಳಿಸಿ ಬಿಡುಗಡೆ ಮಾಡಿತು. ಇನ್ನು ಹೊಸ ಬದಲಾವಣೆ ಎಂದರೇ ಇದರಲ್ಲಿ ಹೊಸ 2.0 ಲೀಟರ್ ಎಂಜಿನಿಯಂ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದ್ದು
ಸ್ಪೋರ್ಟ್ ಎಸ್‍ಯುವಿ ಕಾರಿನ ಮುಂಭಾಗದಲ್ಲಿ ಹಿಂದಿನ ತಲೆಮಾರಿನ ವಿನ್ಯಾಸವನ್ನೆ ಅಳವಡಿಸಲಾಗಿದೆ ಎವೋಕ್ ಕಾರಿನ ವಿನ್ಯಾಸವನ್ನು ಆಧರಿಸಲಾಗಿದೆ. ಹನಿ ಕಾಂಬ್ ಗ್ರಿಲ್‍ನ ಮೇಲೆ ದೊಡ್ಡದಾಗಿ ಸಂಸ್ಥೆಯ ಬ್ಯಾಡ್ಜಿಂಗ್ ಅನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು ಇದರಲ್ಲಿ ಅಳವಡಿಸಲಾಗಿರುವ ಎಲ್ಇಡಿ ಡಿಆರ್‍ಎಲ್‍‍ಗಳು ನೋಡುಗರನ್ನು ಆಕರ್ಷಿಸುತ್ತದೆ.

ಇನ್ನು ಈ ಕಾರಿನ ಒಳಭಾಗದಲ್ಲಿ 5 ಮಂದಿ ಹಾಗೂ 5+2 ಮಂದಿ ಕೂರಬಹುದಾದ ಸೀಟಿಂಗ್ ವಿನ್ಯಾಸವನ್ನು ಒದಗಿಸಲಾಗಿದೆ. ಮುಂಭಾಗದ ಡ್ಯಾಶ್‍ಬೋರ್ಡ್‍ನಲ್ಲಿ ಮೂಲಭೂತ ಮತ್ತು ಕ್ರಿಯಾತ್ಮಕ ವಿನ್ಯಾಸವನ್ನು ಕೂಡ ನೀಡಲಾಗಿದ್ದು ಕಾರಿನ ಡ್ಯಾಶ್‍ಬೋರ್ಡ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು ಚಾಲಕರಿಗೆ ಅನುಕೂಲವಾಗುವಂತೆ ವಿಂಡೋ ಸ್ವಿಚ್‍ಗಳು ಅಡ್ಜಸ್ಟ್ ಮಾಡಬಹುದಾದ ಬಟನ್‍ಗಳನ್ನು ಸನಿಹದಲ್ಲಿಯೆ ನೀಡಲಾಗಿದ್ದು ಉತ್ತಮವಾದ ಗುಣಮಟ್ಟದಿಂದ ಇವುಗಳು ಕೂಡಿವೆ.

ಸಾಕಷ್ಟು ವಿಶೇಷತೆಯನ್ನು ಹೊಂದಿರುವ ಈ ಕಾರು ಇದೀಗ ಮತ್ತೊಂದು ದಾಖಲೆಯನ್ನು ಬರೆದಿದ್ದು ಬರೋಬ್ಬರಿ ನೂರು ಟನ್ ರೈಲನ್ನು ಲೀಲಾಜಾಲವಾಗಿ ಎಳೆದುಕೊಂಡು ಹೋಗುತ್ತದೆ. ನಿಮಗೇ ಆಶ್ಚರ್ಯವಾಗುತ್ತಿದೆಯೇ? ಕೆಳಗಿನ ವೀಡಿಯೋ ನೋಡಿ.