Geetha Kannada Serial Dhanush Birthday Celebration: ನಮ್ಮ ಕಿರುತೆರೆ ಲೋಕದಲ್ಲಿ ಜೊತೆಯಾಗಿ ಒಂದೇ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡ ಜೋಡಿಗಳು ನಿಜ ಜೀವನದಲ್ಲಿ ರಿಯಲ್ ಜೋಡಿಗಳಾಗುವುದಿದೆ. ಹೌದು ಇದಕ್ಕೆ ಉದಾಹರಣೆಗಳೂ ಈಗಾಗಲೇ ನಮ್ಮ ಕಣ್ಣ ಮುಂದೆ ಇದ್ದು ನಟಿ ರಾಧಿಕಾ ಪಂಡಿತ್ ನಟ ಯಶ್ ಜೊತೆಯಾಗಿ ನಟನಾ ಬದುಕು ಶುರು ಮಾಡಿ ರಿಯಲ್ ಲೈಫ್ ನಲ್ಲಿ ಜೋಡಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನು ಕಳೆದ ವರ್ಷ ಕವಿತಾ ಗೌಡ ಹಾಗೂ ಚಂದನ್ ನಿವೇದಿತಾ ಗೌಡ ಹಾಗೂ ಚಂದನ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೀಗೆ ಸಾಕಷ್ಟು ಜೋಡಿಗಳು ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದು ರಿಯಲ್ ಲೈಫ್ ಜೋಡಿಯಾಗಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿರುವ ಧನುಷ್ ಹಾಗೂ ಭವ್ಯಾ ಗೌಡರವರು ಈ ಹಿಂದಿನಿಂದಲೂ ಸುದ್ದಿಯಲ್ಲಿದ್ದು ಆದರೆ ನಟ ಧನುಷ್ ಅವರು ಇತ್ತೀಚೆಗಷ್ಟೇ ಸ್ಪಷ್ಟನೆ ನೀಡಿದ್ದು ವದಂತಿಗಳಿಗೆ ತೆರೆ ಎಳೆದಿದ್ದರು.
ಗೀತಾ ಧಾರಾವಾಹಿಯಲ್ಲಿ ಟಿಕ್ ಟಾಕ್ ಸ್ಟಾರ್ ಭವ್ಯ ಗೌಡ ನಾಯಕಿಯಾದರೆ ಧನುಷ್ ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ಭವ್ಯ ಗೌಡ ಮತ್ತು ಧನುಷ್ ಇಬ್ಬರು ಸಹ ಗೀತಾ ಧಾರವಾಹಿಯಿಂದ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಗೀತಾ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಜೋಡಿ ಪ್ರೇಕ್ಷಕರ ಅಚ್ಚು ಮೆಚ್ಚಿನ ಜೋಡಿಯಾಗಿದೆ.
ಹೌದು ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಗೀತಾ ಹಾಗೂ ವಿಜಯ್ ಭಾಗವಹಿಸಿದ್ದು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಈ ಜೋಡಿಯ ಅನ್ಯೋನ್ಯತೆ ಭಾರಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಈ ಧಾರಾವಾಹಿ ಶುರುವಾದಾಗಿನಿಂದ ಹರಿದಾಡುತ್ತಿದೆ.
ಇನ್ನು ಗೀತಾ ಧಾರಾವಾಹಿ ಫೇಮಸ್ ಆಗಿರುವ ಧನುಷ್ ರಿಯಲ್ ಲೈಫ್ ನಲ್ಲಿ ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದು ಬಿಡುವಿನ ಸಮಯದಲ್ಲಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕಾಲಹರಣ ಮಾಡದೆ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡುತ್ತಾರೆ. ಹೌದು ಕೆರಿಯರ್ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಾರೆ ಧನುಷ್ ರವರು. ಸಧ್ಯಕ್ಕೆ ಧನುಷ್ ಅವರು ಗೀತಾ ಬಿಟ್ಟು ಇನ್ಯಾವುದೇ ಸೀರಿಯಲ್ ಗಳಲ್ಲಿ ನಟಿಸುತ್ತಿಲ್ಲ.
ಮುಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಕೊಡುವ ಪ್ಲಾನ್ ನಲ್ಲಿದ್ದು ಇನ್ನೂ ಗೀತಾ ಧಾರಾವಾಹಿಯ ನಾಯಕ ನಟ ಧನುಷ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಲ್ ಆಕ್ಟಿವ್ ಆಗಿದ್ದು ಇವರಿಗೆ ಸಾವಿರಾರು ಜನರು ಅಭಿಮಾನಿಗಳಿದ್ದಾರೆ.
ತಮ್ಮ ಹಾಗೂ ಭವ್ಯಾ ಗೌಡರವರ ಮದುವೆಯ ಕುರಿತು ಸ್ಪಷ್ಟನೆ ನೀಡಿರುವ ಧನುಷ್ ನಾನು ಇನ್ನೂ ಸಿಂಗಲ್ ನಾನು ಯಾರ ಜೊತೆ ಕೂಡ ಲವ್ ನಲ್ಲಿ ಇಲ್ಲ ಎಂದು ಲೈವ್ ಬಂದು ನಟ ಧನುಷ್ ಗೌಡ ಅವರು ಹೇಳಿದ್ದಾರೆ. ಇವರು ಸಿoಗಲ್ ಆಗಿದ್ದು ಯಾವುದೇ ಗರ್ಲ್ ಫ್ರೆoಡ್ ಇಲ್ಲ ಎನ್ನಲಾಗಿದೆ.
ವಿಜಯ್ ತುಂಬಾ ಸ್ಟೈಲಿಶ್ ಮತ್ತು ಒಳ್ಳೆಯ ಹುಡುಗ. ಇನ್ಸ್ಟಾಗ್ರಾಮ್ ನಲ್ಲಿ ಇವರು ಪೋಸ್ಟ್ ಮಾಡುವ ರೀಲ್ಸ್ ಎಲ್ಲವೂ ಬಹಳ ವೈರಲ್ ಆಗುತ್ತದೆ. ಇದೀಗ ಭವ್ಯ ಹಾಗೂ ಧನುಷ್ ಮಾಡಿರುವ ರೀಲ್ಸ್ ವೊಂದು ವೈರಲ್ ಆಗುತ್ತಿದ್ದು ಅಭಿಮಾನಿಗಳು ನೀವಿಬ್ಬರು ಮದುವೆಯಾಗಿ ಎನ್ನುತ್ತಿದ್ದಾರೆ. ಯಾವುದು ಆ ವಿಡಿಯೋ ಅಂತೀರ? ಕೆಳಗಿನ ವಿಡಿಯೋ ನೋಡಿ.