ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿಕ್ಸರ್ ಬಾರಿಸಿದ ನಟಿ ಮೇಘಾ ಶೆಟ್ಟಿ…ಚಿಂದಿ ವಿಡಿಯೋ

181

ಕನ್ನಡ ಕಿರುತೆರೆಯ ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ರವರು ಸಿನಿಮಾರಂಗದಲ್ಲೂ ಕೂಡ ಬೆಳೆಯುತ್ತಿದ್ದು ಧಾರಾವಾಹಿ ಖ್ಯಾತಿಯ ಜೊತೆಗೆ ಸಿನಿಮಾ ಆಫರ್​​ಗಳನ್ನೂ ಒಪ್ಪಿಕೊಂಡಿದ್ದಾರೆ. ಸದ್ಯ ಈಗಾಗಲೇ ಅಭಿನಯಿಸಿರೋ ದಿಲ್​ಪಸಂದ್ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗಿದ್ದು ಈಗ ಇನ್ನೂ ಒಂದಷ್ಟು ಸಿನಿಮಾಗಳನ್ನ ಮೇಘಾ ಶೆಟ್ಟಿ ಒಪ್ಪಿಕೊಂಡಿದ್ದಾರೆ.

ಇನ್ನು ಅಷ್ಟರಲ್ಲಿಯೇ ಮೇಘಾ ಶೆಟ್ಟಿ ಕನ್ನಡದ ಜೊತೆಗೆ ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟಿದ್ದು ಈ ಮೂಲಕ ಮರಾಠಿ ಚಿತ್ರ ಪ್ರೇಮಿಗಳಿಗೂ ಕೂಡ ಕನ್ನಡದ ಮೇಘಾ ಶೆಟ್ಟಿ ಇಷ್ಟವಾಗಲಿದ್ದಾರೆ. ಹೌದು ಅಂದ್ಹಾಗೆ ಆ ಸಿನಿಮಾ ಯಾವುದು? ಯಾರು ಹೀರೋ ಹಾಗೂ ಡೈರೆಕ್ಟರ್ ? ಯಾರು ಎಂಬ ಕುತೂಹಲ ಅವರ ಅಭಿಮಾನಿಗಳಿದೆ.

ಕನ್ನಡದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮೋಡಿ ಇನ್ನೂ ಇದ್ದು ಈ ಧಾರಾವಾಹಿು ಟೈಟಲ್ ಟ್ರ್ಯಾಕ್ ಸೂಪರ್ ಆಗಿಯೇ ಕ್ರೇಜ್ ಕ್ರಿಯೇಟ್ ಮಾಡಿತ್ತು. ಇದರ ಗುಂಗು ಇನ್ನೂ ಇದೆ. ಅದೇ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ಲಕ್ ಚೆನ್ನಾಗಿಯೇ ಇದೆ.

ಮೇಘಾ ಶೆಟ್ಟಿ ಒಂದೇ ಒಂದು ಧಾರಾವಾಹಿಯಿಂದಲೇ ಇಡೀ ಕನ್ನಡ ನಾಡಿಗೆ ಪರಿಚಯ ಆಗಿದ್ದು ಸೀರಿಯಲ್ ಸೂಪರ್ ಹಿಟ್ ಆಗಿದ್ದೇ ತಡ ಇದೀಗ ಸಿನಿಮಾದವರ ಕಣ್ಣು ಈ ಬೆಡಗಿ ಮೇಲೆ ಬಿದ್ದೇ ಬಿಟ್ಟಿತು. ಅದೇ ಕಾರಣಕ್ಕೆ ಈ ಚೆಲುವೆಯನ್ನ ಆಫರ್​ಗಳು ಹುಡುಕಿಕೊಂಡು ಬಂದೇ ಬಿಟ್ಟಿವೆ. ನಟಿ ಮೇಘಾ ಶೆಟ್ಟಿ ಅಭಿನಯದ ಎರಡು ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರ ರಿಲೀಸ್ ಆಗಿದ್ದು ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್​ಪಸಂದ್ ಚಿತ್ರವೂ ಇತ್ತೀಚಿಗೆ ತೆರೆ ಕಂಡಿದೆ.

ಹೌದು ಹೀಗೆ ಮೇಘಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಮಿಂಚುತ್ತಲೇ ಇದ್ದು ಸಿನಿಮಾ ಮಾಡ್ತಾನೇ ಜೊತೆ ಜೊತೆಯಲಿ ಧಾರಾವಾಹಿಯನ್ನೂ ಕೂಡ ಮುಂದುವರೆಸಿದ್ದಾರೆ. ಧಾರಾವಾಹಿ ಬಿಡದೇನೆ ಮೇಘಾ ಶೆಟ್ಟಿ ಈಗ ಬಹು ಭಾಷೆಯ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದು ನಟಿ ಮೇಘಾ ಶೆಟ್ಟಿ ಅಭಿನಯದ ಆಪರೇಷನ್ ಲಂಡನ್ ಕೆಫೆ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಮೇಘಾ ಶೆಟ್ಟಿ ಮರಾಠಿ ಇಂಡಸ್ಟ್ರೀಗೂ ಕಾಲಿಡುತ್ತಿದ್ದಯ ಈ ಚಿತ್ರ ಕನ್ನಡ ಮರಾಠಿ ಹಿಂದಿ ತಮಿಳು, ತೆಲುಗು ಮಲೆಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಇನ್ನು ಆಪರೇಷನ್ ಲಂಡನ್ ಕೆಫೆ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿಯೇ ಇದ್ದು ಈ ಸಿನಿಮಾ ಬಹು ಭಾಷೆಯಲ್ಲಿ ರೆಡಿ ಆಗ್ತಿರುವುದರಿಂದಲೇ ಸಿನಿಮಾ ತಂಡ ಈಗ ಕೊನೆ ಹಂತದ ಸಿನಿಮಾದ ಚಿತ್ರೀಕರಣದ ಕೆಲಸಕ್ಕೆ ಸಜ್ಜಾಗುತ್ತಿದ್ದುನನಟಿ ಮೇಘಾ ಶೆಟ್ಟಿ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ ಎನ್ನಲಾಗಿದೆ.

ಇನ್ನು ಆಪರೇಷನ್ ಲಂಡನ್ ಕೆಫೆ ಚಿತ್ರದ ರಾಘವೇಂದ್ರ ನಿರ್ದೇಶನ ಮಾಡಿದ್ದು ವಿಶೇಷವಾಗಿ ಈ ಚಿತ್ರವನ್ನ ಭಟ್ಕಳ ಕಳಸ ಕಾಡು ಉಡುಪಿ ಚಿಕ್ಕಮಗಳೂರು ಬೆಂಗಳೂರುನಲ್ಲಿ ಚಿತ್ರೀಕರಣ ಮಾಡಲಾಗಿದ್ದು ಬಜಾರಿ ಹಳ್ಳಿ ಹುಡುಗಿಯಾಗಿಯೇ ಮೇಘಾ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಮೇಘಾ ಶೆಟ್ಟಿ ಈ ಪಾತ್ರದ ಫೋಟೋಗಳು ಕೂಡ ಈಗಾಗಲೇ ಹೊರ ಬಿದ್ದಿದ್ದು ಆಪರೇಷನ್ ಲಂಡನ್​ ಕೆಫೆ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿಯೇ ಇರುವುದರಿಂದ ಸಿನಿಮಾವನ್ನ ಮುಂದಿನ ವರ್ಷ ರಿಲೀಸ್ ಮಾಡೋಕೆ ಚಿತ್ರ ತಂಡ ಈಗ ಪ್ಲಾನ್ ಮಾಡಿದ್ದಾರೆ. ಹೌದು 2023 ರಲ್ಲಿಯೇ ಆಪರೇಷನ್ ಲಂಡನ್ ಕೆಫೆ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಈ ನಡುವೆ ಮೇಘನಾ ಮೈದಾನಕ್ಕೆ ಇಳಿದು ಹೈಕ್ಲು ಜೊತೆ ಕ್ರಿಕೆಟ್ ಆಡಿದ್ದು ನಟಿ ಸಿಕ್ಸ್ ಹೊಡೆಯುತ್ತಿದ್ದಂತೆ ಹಳ್ಳಿ ಹುಡುಗರ ಸಂಭ್ರಮ ಹೇಗಿದೆ ಎಂದು ಲೇಖನಿಯ ಕೆಳಗೆ ನೀವೆ ನೋಡಿ.