ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಾಲಿ ಧನಂಜಯ್ ಜೊತೆ ಮೇಘನಾ ಎರಡನೇ ಮದುವೆ….ಕೊನೆಗೂ ಸಿಗ್ತು ಕುಟುಂಬದ ಉತ್ತರ

71,931

ನಟ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಎರಡನೇ ಮದುವೆಯಾಗುವಂತೆ ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಒಬ್ಬಂಟಿಯಾಗಿದ್ದು ಪುತ್ರ ರಾಯನ್‌ ರಾಜ್‌ ಸರ್ಜಾ ಅವರ ಭವಿಷ್ಯದ ಬಗ್ಗೆ ಗಮನ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ನಾಳೆಯ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಸದ್ಯ ಮೇಘನಾ ರಾಜ್‌ ಹೇಳಿದ್ದು ಸುದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ .

ಹೌದು ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 2 ವರ್ಷಗಳ ಹಿಂದಿನ ದುರ್ಘಟನೆ ನೋವಿನಿಂದ ಹೊರ ಬರುತ್ತಿರುವ ಮೇಘನಾ ರಾಜ್‌ ಮಗ ರಾಯನ್‌ ರಾಜ್‌ ಸರ್ಜಾ ಅವರ ನಗುವಿನಲ್ಲಿ ತಮ್ಮ ನಗು ಕಾಣುತ್ತಿದ್ದಾರೆ.

ಇನ್ನು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರದ್ದು 10 ವರ್ಷಗಳ ಪ್ರೀತಿ. ಹೌದು 2018 ರಲ್ಲಿ ಈ ಜೋಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಗೆ ಹೊಸ ರೂಪ ನೀಡಿದ್ದು ಆದರೆ ವಿಧಿ ಇವರ ಸಂತೋಷವನ್ನು ದೂರ ಮಾಡಿತು. 7 ಜೂನ್ 2020 ರಂದು ಚಿರು ಹೃದಯಾಘಾತದಿಂದ ಅಗಲಿದ್ದು ಈ ವಿಚಾರ ತಿಳಿದು ಚಿತ್ರರಂಗದ ಗಣ್ಯರು ಮಾತ್ರವಲ್ಲದೆ ಇಡೀ ರಾಜ್ಯವೇ ದುಃಖ ವ್ಯಕ್ತಪಡಿಸಿತ್ತು. ಪರಭಾಷೆ ಚಿತ್ರರಂಗದ ಮಂದಿ ಕೂಡಾ ಬೇಸರ ವ್ಯಕ್ತಪಡಿಸಿದ್ದು ಚಿರು ಅಗಲಿ ಸಮಯದಲ್ಲಿ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು..

ಚಿರಂಜೀವಿ ಸರ್ಜಾ ಅಗಲಿದ ಬಳಿಕ ಕುಟುಂಬ ಅಭಿಮಾನಿಗಳು ಸ್ನೇಹಿತರು ಮೇಘನಾ ಬೆಂಬಲವಾಗಿ ನಿಂತಿದ್ದು ಅದೇ ವರ್ಷ ಅಕ್ಟೋಬರ್‌ 22ರಂದು ಮೇಘನಾ ಗಂಡುಮಗುವಿಗೆ ಜನ್ಮ ನೀಡಿದರು. ಈ ಮಗುವಿಗೆ ರಾಯನ್‌ ರಾಜ್‌ ಸರ್ಜಾ ಎಂದು ಹೆಸರಿಟ್ಟಿದ್ದು ರಾಯನ್‌ಗೆ ಈಗ 2 ವರ್ಷಗಳಾಗುತ್ತಾ ಬರುತ್ತಿದೆ. ಈ ನಡುವೆ ಮೇಘನಾ ರಾಜ್‌ ಎರಡನೇ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಹೌದು Bollywoodbubble.com ಎಂಬ ವೆಬ್‌ಸೈಟ್‌ಗೆ ಮೇಘನಾ ರಾಜ್‌ ಸಂದರ್ಶನ ನೀಡಿದ್ದು ಚಿರಂಜೀವಿ ಸರ್ಜಾ ‍ಅಗಲಿದ ನಂತರ ಎರಡನೇ ಮದುವೆಯಾಗುವಂತೆ ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಒಬ್ಬಂಟಿಯಾಗಿದ್ದು ಪುತ್ರ ರಾಯನ್‌ ರಾಜ್‌ ಸರ್ಜಾ ಅವರ ಭವಿಷ್ಯದ ಬಗ್ಗೆ ಗಮನ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ನಾಳೆಯ ಬಗ್ಗೆ ನಾನು ಯೋಚಿಸುವುದಿಲ್ಲ.

ಮುಂದಿನ ಜೀವನದ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕೆ ನಾನು ರಾಯನ್‌ ಹಾಗೂ ನನ್ನ ವೃತ್ತಿ ಜೀವನದ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸುತ್ತೇನೆ. ಅದರ ಹೊರತು ಬೇರೆ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಇದೀಗ ಕೆಲ ವೆಬ್ ಸೈಟ್ ಗಳು ಮತ್ತೊಂದು ಸುದ್ದಿಯನ್ನು ಹಬ್ಬಿಸಿದ್ದು ನಟಿ ಮೇಘನಾ ರಾಜ್ ರವರು ಡಾಲಿ ಧನಂಜಯ್ ಅವರ ಕೈಹಿಡಿಯಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಇದು ನಿಜಾನ?

ಮೇಘನಾ ರಾಜ್ ಮತ್ತು ಡಾಲಿ ಧನಂಜಯ್ ಇಬ್ಬರು ಇರುವ ವಿಡಿಯೋವನ್ನು ಎಲ್ಲಾ ಕಡೆ ವೈರಲ್ ಆಗಿದ್ದು ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು.

ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ರವರಿಗೆ ಲೈಫ್ ಟೈಮ್ ಫಿಲಂ ಅವಾರ್ಡ್ ಅನ್ನು ನೀಡಿ ಗೌರವಿಸಿದ್ದು ಚಿರಂಜೀವಿ ಸರ್ಜಾ ಅವರ ಬದಲಿಗೆ ಅವರ ಮಡದಿ ಮೇಘನ ರಾಜ್ ಅವರನ್ನು ಸ್ವೀಕಾರ ಮಾಡಿದರು. ಇನ್ನು ತದನಂತರ ಡಾಲಿ ಧನಂಜಯ್ ರವರು ಮಾಧ್ಯಮದ ಮುಂದೆ ಮಾತನಾಡಿ ಮಾತನಾಡಲು ಪ್ರಾರಂಭಿಸುತ್ತಾರೆ. ಈ ಬಾರಿ ನನಗೆ ಸಿಕ್ಕ ಅವಾರ್ಡ್ ನನಗೆ ತುಂಬಾ ಸಂತೋಷವನ್ನು ನೀಡಿದೆ ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಎಂದು ಹೇಳುತ್ತಾರೆ.

ಅದೇ ಸಮಯದಲ್ಲಿ ನಟಿ ಮೇಘನಾ ರಾಜ್ ರವರ ಎಂಟ್ರಿ ಆಗಿದ್ದು ಮೇಘನಾ ರಾಜ್ ಕೂಡ ಮಾಧ್ಯಮದವರ ಮುಂದೆ ಮಾತನಾಡುವಾಗ ಡಾಲಿ ಧನಂಜಯ್ ರವರ ಕೈ ಹಿಡಿದುಕೊಳ್ಳುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ವಿಡಿಯೋದಲ್ಲಿ ತುಂಬಾ ವೈರಲ್ ಆಗಿದ್ದು ಈ ವಿಡಿಯೋವಿಗೆ ಕೆಲವರು ಮೇಘನಾ ರಾಜ್ ಹಾಗೂ ಡಾಲಿ ಧನಂಜಯ್ ರವರು ಮದುವೆ ಆಗುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇಂತಹ ಸುದ್ದಿಯನ್ನು ಹಬ್ಬಿಸಿರುವ ವೈಬ್ ಸೈಟ್ ಗಳಿಗೆ ಅಭಿಮಾನಿಗಳು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದು ನಿಸ್ವಾರ್ಥ ಸ್ನೇಹಕ್ಕೆ ಸಂಬಂಧವನ್ನು ಕಟ್ಟಬೇಡಿ ಎಂದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.