ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಗಂಧದಗುಡಿ ಸಿನೆಮಾದ ಲಾಭದ ಹಣ ಏನಾಗಲಿದೆ ಗೊತ್ತಾ…ಅಶ್ವಿನಿಮಹತ್ವದ ನಿರ್ಧಾರ

1,090

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಕನಸು ಗಂಧದ ಗುಡಿ. ಹೌದು ಕರುನಾಡಿ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ತೋರಿಸಬೇಕು ಅನ್ನುವ ಆಸೆ ಅಪ್ಪುಗಿತ್ತು. ಆದರೆ ಪುನೀತ್ ರಾಜ್‌ಕುಮಾರ್ ಮಧ್ಯದಲ್ಲಿಯೇ ಆ ಕನಸನ್ನು ಮೊಟಕುಗೊಳಿಸಿ ಹೊರಟುಬಿಟ್ಟರು.

ಆದರೆ ಅಪ್ಪು ಕಂಡ ಆ ಕನಸನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆರವೇರಿಸಿದ್ದು ಅಕ್ಟೋಬರ್ 28ರಂದು ಪವರ್‌ಸ್ಟಾರ್ ಕಂಡ ಕನಸನ್ನು ಲೋಕಾರ್ಪಣೆ ಮಾಡಿದ್ದರು. ಗಂಧದ ಗುಡಿಯ ಮೂಲಕ ಮತ್ತೆ ಅಪ್ಪುವನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಹಾಗೂ ಕನ್ನಡಿಗರು ಪುನೀತರಾಗಿದ್ದಾರೆ.

ಗಂಧದ ಗುಡಿ ಸಿನಿಮಾ ಎಲ್ಲರಿಗೂ ತಲುಪುವಂತಾಗಬೇಕಾಗಿದ್ದು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರೆಲ್ಲರೂ ನೋಡಬೇಕು ಎಂಬುವ ಕಾರಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ನಾಲ್ಕು ದಿನಗಳ ಕಾಲ ಟಿಕೆಟ್ ದರವನ್ನು ಇಳಿಕೆ ಮಾಡಲು ಮುಂದಾಗಿದ್ದಾರೆ. ಇನ್ನು ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಅವರು ಏನು ಮಾಡ್ತಾರಂತೆ ಗೊತ್ತಾ? ಮುಂದೆ ಓದಿ.

ಗಂಧದ ಗುಡಿ ಸಿನಿಮಾ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಈ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಪತ್ರ ಬರೆದಿದ್ದಾರೆ. ಹೌದು ಗಂಧದ ಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಈ ಸಿನಿಮಾವನ್ನು ಎಲ್ಲಾ ಕನ್ನಡಿಗರು ನೋಡಬೇಕು ಅದರಲ್ಲೂ ಮಕ್ಕಳು ನೋಡಬೇಕು ಎಂಬುದು ಅಪ್ಪು ಅವರ ಬಯಕೆಯಾಗಿತ್ತು.

ಈ ಕಾರಣಕ್ಕೆ ಟಿಕೆಟ್ ದರವನ್ನು ಇಳಿಕೆ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಕನ್ನಡಿಗರು ಹಾಗೂ ಮಕ್ಕಳು ಗಂಧದ ಗುಡಿ ಸಿನಿಮಾವನ್ನು ನೋಡಬೇಕು ಅನ್ನುವ ಕಾರಣಕ್ಕೆ ಟಿಕೆಟ್ ದರವನ್ನು ಇಳಿಕೆ ಮಾಡಲು ಅಶ್ಚಿನಿ ಪುನೀತ್ ರಾಜ್‌ಕುಮಾರ್ ಮತ್ತು ವಿತರಕರು ನಿರ್ಧರಿಸಿದ್ದಾರೆ.

ನಾನು ಮತ್ತು ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದ ಗುಡಿಯನ್ನು 07-11-2022 ರಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ 56 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ 112 ರೂಪಾಯಿಗಳಿಗೆ ಕರ್ನಾಟಕದಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಅಪ್ಪು ಅವರ ಪುಣ್ಯ ದಿನದ ಸ್ಮರಣಾರ್ಥ ಕೊನೆಯ ಸಿನಿಮಾದ ಗಂಧದಗುಡಿಯನ್ನು ರಿಲೀಸ್ ಮಾಡಲಾಗಿದ್ದು ರಿಲೀಸ್ ಆಗಿರುವ ಒಂದು ವಾರಕ್ಕೆ 23 ಕೋಟಿ ಕಲೆಕ್ಷನ್ ಬಾಚಿಕೊಂಡಿರುವ ಸಿನಿಮಾವು ಅದರ ಬಜೆಟ್‌ಗಿಂತ ದುಪ್ಪಟ್ಟು ಹಣವನ್ನು ಪಡೆದಿದೆ ಎಂಬ ಮಾಹಿತಿಗಳು ಬರುತ್ತಿವೆ. ಅಪ್ಪು ಅವರ ಪ್ರತಿ ವಿಷಯವನ್ನು ಹಬ್ಬದಂತೆ ಆಚರಿಸುವ ಕರ್ನಾಟಕದ ಜನತೆ ಗಂಧದಗುಡಿ ಸಿನಿಮಾವನ್ನು ಅಪ್ಪಿದ್ದು ಶಾಲಾ ಮಕ್ಕಳಿಂದ ಹಿಡಿದು ಎಲ್ಲರೂ ಗುಂಪು ಗುಂಪಾಗಿ ಸಿನಿಮಾವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.

ಇನ್ನು ಈ ಸಿನಿಮಾದಿಂದ ಬಂದ ಹಣದ ಬಗ್ಗೆ ಮಾತನಾಡಿರುವ ಅಶ್ವಿನಿ ಪುನೀತ್ ಅವರು ಸಿನಿಮಾ ತುಂಬಾ ಚೆನ್ನಾಗಿ ಕಾಣುತ್ತಿದ್ದು ಆದರೆ ಇದರಿಂದ ಬರುವ ಹಣದಲ್ಲಿ ಅರ್ಧದಷ್ಟು ಶಕ್ತಿ ದಾಮ ಕೇಂದ್ರಕ್ಕೆ ಕೊಡುತ್ತೇನೆ. ಇನ್ನೂ ಕಾಲು ಭಾಗದಷ್ಟು ಸಮಾಜ ಸೇವೆಗೆ ಮೀಸಲಿಡುತ್ತೇನೆ ಈ ಕಾಲು ಭಾಗದ ಹಣವನ್ನು ಅಪ್ಪು ಹೆಸರಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ಅವರಂತೆ ನಾನು ಅವರ ಸಮಾಜ ಸೇವೆಯನ್ನು ಮುಂದುವರೆಸುತ್ತೇನೆ ಎಂದು ಅಶ್ವಿನಿ ಅವರು ಹೇಳಿದ ಮಾತು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಗಂಧದಗುಡಿ ಸಿನಿಮಾದಿಂದ ಬರುವಷ್ಟು ಹಣವನ್ನು ಎಫ್ ಡಿ ಮಾಡಿ ಕರ್ನಾಟಕದ ಜನಸೇವೆಗೆ ಮೀಸಲಿಡುತ್ತೇನೆ ಎಂದಿದ್ದಾರೆ.