ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿಂಗಾರ ಸಿರಿಯೆ ಹಾಡಿಗೆ ಅಜನೀಶ್ ಲೋಕನಾಥ್ ಸಂಭಾವನೆ ಎಷ್ಟು ಗೊತ್ತಾ…ದಾಖಲೆ

28,762

ಇಡೀ ಪ್ರಪಂಚಾದ್ಯಂತ ದ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾವನ್ನು ಪರ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿದ್ದು ಪರಭಾಷಾ ಪ್ರೇಕ್ಷಕರು ಅವರದ್ದೇ ಭಾಷೆಯಲ್ಲಿ ಕಾಂತರ ದಂತಕಥೆಯನ್ನು ಕಣ್ತುಂಬಿಕೊಂಡಿದ್ದಾರೆ. ಹೌದು ಈಗಾಗಲೇ ತೆಲುಗು ತಮಿಳು ಹಿಂದಿ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದ್ದು ಹೈದರಾಬಾದ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ರಿಷಬ್ ಶೆಟ್ಟಿಯವರು ಅಚ್ಚ ಕನ್ನಡದಲ್ಲೇ ಮಾತನಾಡಿದ್ದರು. ಅಲ್ಲು ಅರವಿಂದ್ ರವರು ಕಾಂತರ ಚಿತ್ರದ ತೆಲುಗು ವಿತರಣೆ ಹಕ್ಕು ಖರೀದಿಸಿದ್ದು ಗೀತಾ ಆರ್ಟ್ಸ್ ಡಿಸ್ಟ್ರಿಬ್ಯೂಷನ್ ಬ್ಯಾನರ್‌ನಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ.

ಹೀಗೆ ದೊಡ್ಡ ಸಕ್ಸಸ್ ಅಲೆಯಲ್ಲಿರುವಾಗಲೇ ಕಾಂತರ ಸಿನಿಮಾ ಟ್ರೋಲ್‌ಗೂ ಒಳಗಾಗುತ್ತಿದ್ದು ಕಾಂತಾರ ಚಿತ್ರ ತನ್ನ ಹಾಡುಗಳಿಂದಾಗಿ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿದೆ. ಹೌದು ಮೊದಲಿಗೆ ವರಹ ರೂಪಂ ಹಾಡು ಮಲಯಾಳಂನ ಹಾಡಿನ ಕಾಪಿ ಎಂದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದು ಸದ್ಯ ಇದೀಗ ಅದೇ ರೀತಿ ಚಿತ್ರದ ಚಾರ್ಟ್‌ಬಸ್ಟರ್ ಹಾಡಾದ ಸಿಂಗಾರ ಸಿರಿಯೇ ಸಹ ಮರಾಠಿಯ ಹಾಡೊಂದರ ಕಾಪಿ ಎಂದು ದೂಡುತ್ತಿದ್ದಾರೆ ಕೆಲ ನೆಟ್ಟಿಗರು.

ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಟ್ಯೂನ್ ಅಪ್ಸರ್ ಆಲಿ ಹಾಡಿನ ಕಾಪಿ ಎನ್ನುತ್ತಿದ್ದು ಈ ಹಾಡಿನಲ್ಲಿ ಬರುವ ಮುದ್ದಾದ ಮಾಯಾವಿ ಸಾಲಿನ ಟ್ಯೂನ್ ಅನ್ನು ಮರಾಠಿಯ ನಟರಂಗ್ ಸಿನಿಮಾಸ ಹಿಟ್ ಹಾಡು ಅಪ್ಸರ ಆಲಿ ಹಾಂಡಿನಿಂದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರು ಕದ್ದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದು ಅಪ್ಸರ ಆಲಿ ಹಾಡು 2010ರಲ್ಲಿ ತೆರೆಕಂಡ ನಟರಂಗ್ ಚಿತ್ರದ ಹಾಡಾಗಿದ್ದು ಈ ಹಾಡಿಗೆ ಅಜಯ್-ಅಟುಲ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ನೆಟ್ಟಿಗರು ಇದೀಗ ಆರೋಪಿಸುತ್ತಿರುವ ಹಾಗೆ ಸಿಂಗಾರ ಸಿರಿಯೇ ಹಾಡನ್ನು ಅಪ್ಸರ ಆಲಿ ಹಾಡಿನಿಂದ ಕದ್ದು ಮಾಡಲಾಗಿದೆ ಎಂದು ಹೇಳುವುದು ಬಹಳ ಕಷ್ಟ. ಹೌದು ಏಕೆಂದರೆ ಎರಡೂ ಹಾಡುಗಳ ಟ್ಯೂನ್‌ಗೂ ದೊಡ್ಡ ಮಟ್ಟದ ವ್ಯತ್ಯಾಸವಿದ್ದು ಆದರೆ ಹಾಡಿನ ಮುದ್ದಾದ ಮಾಯಾವಿ ಸಾಲಿನ ಟ್ಯೂನ್ ಅಪ್ಸರ ಆಲಿಯ ಹಾಡಿನ ಟ್ಯೂನ್‌ಗೂ ಸಾಮ್ಯತೆ ಇದ್ದು ಈ ಒಂದೇ ಒಂದು ಕಾರಣದಿಂದಾಗಿ ಮಾತ್ರ ನೆಟ್ಟಿಗರು ಹಾಡು ಕಾಪಿ ಎನ್ನುತ್ತಿದ್ದಾರೆ.

ಇನ್ನು ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರು ವರಹ ರೂಪಂ ಹಾಗೂ ನವರಸಂ. ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ ಯಿದ್ದು ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ. ಹೌದು ಆದರೆ ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆಯಿದ್ದು ಸ್ಟೈಲ್ ವಿಚಾರದಲ್ಲಿ ವರಹ ರೂಪಂ ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜವಾಗಿದೆ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕಾಪಿ ಎನ್ನುವ ಆರೋಪವನ್ನು ಅಜಿನೇಶ್ ತಳ್ಳಿಹಾಕಿದ್ದರು.

ಈ ನಡುವೆ ಎರಡು ಹಾಡು ಕೂಡ ಸೂಪರ್ ಡೂಪರ್ ಹಿಟ್ ಆಗಿದ್ದು ಅದರಲ್ಲೂ ಕೂಡ ಸಿಂಗಾರ ಸಿರಿಯೇ ಹಾಡು ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಟ್ರೇಂಡಿಂಗ್ ನಲ್ಲಿರುವ ಈ ಹಾಡಿಗೆ ಎಲ್ಲರೂ ಕೂಡ ರೀಲ್ಸ್ ಮಾಡುತ್ತಿದ್ದು ಒಟ್ಟಾರೆಯಾಗಿ ಈ ರೋಮ್ಯಾಂಟಿಕ್ ಹಾಡಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಇಂತಹ ಅದ್ಬುತವಾದ ಹಾಡು ನೀಡಿರುವ ಅಜನೀಶ್ ಲೋಕೇಶ್ ರವರ ಸಂಭಾವನೆ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು ಸದ್ಯ ಇಂದೊಂದು ಹಾಡನ್ನು ಕಾಂಪೋಸ್ ಮಾಡಲು ಅಜನೀಶ್ ಒಂದು ಕೋಟಿಯ ವರೆಗೂ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೆ ಸಿನಿಮಾಗೆ ಸಂಪೂರ್ಣ ಸಂಗೀತ ನೀಡಲು ಇನ್ನೆಷ್ಟು ಸಂಭಾವನೆ ಪಡೆದಿರಬಹುದು ಎಂದು ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ.