2003 ರಲ್ಲಿ ಸುಮತಿ ಎಂಬ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟ ನಟಿ Shwetha Changappaರವರು ಕಲಾ ಸಾಮ್ರಾಟ ಎಸ್ ನಾರಾಯಣ್ ರವರು ನಟಿಯನ್ನ ಧಾರಾವಾಹಿ ಲೋಕಕ್ಕೆ ಪರಿಚಯ ಮಾಡಿಸುತ್ತಾರೆ. ಬಳಿಕ 2006 ರಲ್ಲಿ ಪ್ರಾರಂಭವಾದ ಕಾದಂಬರಿ ಧಾರಾವಾಹಿಯ ಮೂಲಕ ಶ್ವೇತಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು ಇದರ ಬಳಿಕ ನಿರೂಪಕಿಯಾಗಿ ಅನೇಕ ಶೋ ಗಳನ್ನು ಕೂಡ ನಿರ್ವಹಿಸಿದ್ದ ನಂತರ ಮಜಾ ಟಾಕೀಸ್ ಮುಂಖಾಂತರ Shwetha Changappa ದೊಡ್ಡ ಹೆಸರನ್ನು ಸಂಫಾದಿಸಿದ್ದು ಸೃಜನ್ ಲೋಕೇಶ್ ರವರ ಗ್ಯಾಂಗ್ ಸೇರಿ ಶ್ವೇತಾ ಎಲ್ಲರನ್ನು ನಗಿಸಿದ್ದಾರೆ.
ಹೌದು ಇದರ ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 2 ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದ ಅವರು ಸದ್ಯ ಇದೀಗ ಶ್ವೇತಾ ವಿವಾಹವಾಗಿದ್ದು ಪತಿ ಹಾಗೂ ಮಗುವಿನ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಇನ್ನು Shwetha Changappaಅವರಿಗೆ ಸೃಜನ್ ಕಂಡ್ರೆ ಆಗುತ್ತಿರಲಿಲ್ಲವಂತೆ. ಯಾಕೆ ಗೊತ್ತಾ? ಸುಮತಿ ಎಂಬ ಧಾರಾವಾಹಿಯ ನಂತರ ಸುಕನ್ಯಾ ಮತ್ತು ಅರುಂಧತಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಶ್ವೇತಾ ದೊಡ್ಡ ಜನಪ್ರಿಯತೆಯನ್ನು ಕಂಡುಕೊಂಡಿದ್ದರು.

ಈ ಎರಡು ಧಾರಾವಾಹಿಗಳು ಕೂಡ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದ್ದು ನಂತರ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದಲ್ಲೂ ಸಹ ನಿರೂಪಕಿಯಾಗಿ ಕಾಣಿಸಿಕೊಂಡ ಇವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ Shwetha Changappaಅವರಿಗೆ ಹೆಚ್ಚು ಹೆಸರು ಹಾಗೂ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ಮಜಾ ಟಾಕೀಸ್ ಕಾರ್ಯಕ್ರಮದ ರಾಣಿ ಪಾತ್ರ. ವಾರಕ್ಕೆ 2 ಬಾರಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಜನರಿಗೆ ಬಹಳ ಇಷ್ಟವಾಗಿದ್ದು ಈ ಸಮಯದಲ್ಲೇ Shwetha Changappaಅವರು ಗರ್ಭಿಣಿಯಾಗಿದ್ದರು. ಇದಾದ ಬಳಿಕ ಮಜಾ ಟಾಕೀಸ್ ನಿಂದ ಹೊರಬಂದ Shwetha Changappa ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು.
ತದನಂತರ ಆ ಮಜಾ ಟಾಕೀಸ್ ಗೆ ಮತ್ತೆ ಆಗಮಿಸಿದ Shwetha Changappaಮತ್ತೊಮ್ಮೆ ಅದೇ ಕಾಮಿಡಿಯ ಮೂಲಕ ಕರುನಾಡ ಮನೆ ಮಾತಾಗಿದ್ದರು. ಸದ್ಯ ಇತ್ತೀಚಿನ ಒಂದು ಸಂದರ್ಶನದಲ್ಲಿ ಮಜಾ ಟಾಕೀಸ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡ Shwetha Changappaಮೊದಮೊದಲು ನನಗೆ ಸೃಜನ್ ಲೋಕೇಶ್ ಕಂಡರೆ ಆಗುತ್ತಿರಲಿಲ್ಲ ಎಂಬುವಂತಹ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಹೌದು ನಾನು ಮತ್ತು ಸೃಜನ್ ಹೆಂಡ್ತಿ ಗ್ರೀಷ್ಮಾ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿರುವ Shwetha Changappaನನಗೆ ಸೃಜನ್ ಕಂಡರೆ ಆಗುತ್ತಿರಲಿಲ್ಲ ಎಂದಿದ್ದಾರೆ.ಇನ್ನೂ ಸೃಜನ್ ಅವರಿಗೂ ಕೂಡ ಶ್ವೇತಾ ಕಂಡರೆ ಆಗುತ್ತಿರಲಿಲ್ಲವಂತೆ.ಈಕೆಗೆ ಭಾರಿ ದುರಹಂಕಾರ ಎಂದು ಅವರು ಭಾವಿಸಿದ್ದು ಇತ್ತ ಶ್ವೇತ ಚೆಂಗಪ್ಪ ಕೂಡ ಸೃಜನ್ ಗೆ ತುಂಬಾ ಅಹಂಕಾರವಿದೆ ಎಂದುಕೊಂಡಿದ್ದರಂತೆ. ಆದರೆ ಸೃಜನ್ ರವರು ಯಾವಾಗ ಗ್ರೀಷ್ಮಾ ರವರ ಪತಿ ಎಂದು ತಿಳಿಯಿತೋ ಅಂದಿನಿಂದ Shwetha Changappaಮುಂದಾದರಂತೆ.
ಸದ್ಯ ಈ ವಿಚಾರವನ್ನು ನೆನಪಿಸಿಕೊಂಡು ಸಂದರ್ಶನದಲ್ಲಿ ಬಹಳಾನೇ ಸಂತೋಷಪಟ್ಟ Shwetha Changappaನಮ್ಮಿಬ್ಬರದ್ದು ಅದ್ಬುತವಾದ ಸ್ನೇಹ ಸಂಬಂಧವಿದೆ ಎಂದು ಹೇಳಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಮಜಾ ಟಾಕೀಸ್ ಮುಖಾಂತರ ರಾಣಿಯಾಗಿ ಬರುತ್ತೇನೆ ಎಂದಿರುವ Shwetha Changappaಮುಂದಿನ ವರುಷದಲ್ಲಿ ಮಜಾ ಟಾಕೀಸ್ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಕೂಡ ಹೇಳಿದ್ದಾರೆ.