ನಮ ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ನಟಿಯರಲ್ಲಿ ಮುದ್ದು ಮುಖದ ಅಂದದ ಚೆಲುವೆ ನಟಿ ಕಾವೇರಿ ಕೂಡ ಒಬ್ಬರಾಗಿದ್ದು ಕನ್ನಡ ಸೇರಿದಂತೆ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೌದು ಸ್ಯಾಂಡಲ್ವುಡ್ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಕನ್ನಡಿಗರ ಗಮನ ಸೆಳೆದಿದ್ದರು ಈ ನಟಿ ಎನ್ನಬಹುದು. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸೇರಿದಂತೆ ಹಲವು ಸ್ಯಾಂಡಲ್ವುಡ್ ನಟರ ಜೊತೆಗೆ ಅಭಿನಯಿಸಿದ್ದಾರೆ ನಟಿ ಕಾವೇರಿ. ಇನ್ನು ಇತ್ತೀಚಿಗೆ ಹೆಚ್ಚಾಗಿ ಪೋಷಕ ಪಾತ್ರಗಳಲ್ಲೂ ಕೂಡ ಅಭಿನಯಿಸುತ್ತಿರುವ ನಟಿ ಕಾವೇರಿ ನಿರ್ದೇಶನಕ್ಕೂ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಇನ್ನು ಸಿನಿಮಾ ಜೀವನದಲ್ಲಿ ಎತ್ತರಕ್ಕೆ ಬೆಳೆದಿದ್ದ ನಟಿ Kaveri ರವರು ತಮ್ಮ ಸಾಂಸಾರಿಕ ಜೀವನದಲ್ಲಿ ಮಾತ್ರ ಸೋತಿದ್ದು ಮಲಯಾಳಂ ಮೂಲದವರಾದ ನಟಿ ಕಾವೇರಿ ಹುಟ್ಟಿದ್ದು ಕೇರಳ ರಾಜ್ಯದ ತಿರುವಲ್ಲ ಎಂಬಲ್ಲಿ. ಇನ್ನು ನಟಿಯ ಮೊದಲ ಹೆಸರು ಕಲ್ಯಾಣಿ ಎಂದು. ಇನ್ನು ಬಾಲ ನಟಿಯಾಗಿ ಅನಂ ಕಿಲಿ ಎಂಬ ಮಲಯಾಳಂ ಸಿನಿಮಾ ಮೂಲಕ ೧೯೮೬ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ನಟಿ ಕಾವೇರಿ ರವರು ತೆಲುಗು ತಮಿಳು ಸಿನಿಮಾಗಳಲ್ಲೂ ಸಹ ಬಣ್ಣ ಹಚ್ಚುತ್ತಾರೆ.
ಇನ್ನು ಸ್ಯಾಂಡಲ್ವುಡ್ ಗು ಕೂಡ ಕಾಲಿಟ್ಟ ನಟಿ ಕಾವೇರಿ ಸಂಭ್ರಮ ಹಾಗೂ ಚೈತ್ರದ ಚಿಗುರು ಎಂಬ ಸಿನಿಮಾಗಳಲ್ಲಿ ನಟಿಸುತ್ತಾರೆ. ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೊತೆಗೆ ರಾಮಕೃಷ್ಣ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಿದ್ದು ಇನ್ನು ತೆಲುಗಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ ಕಾವೇರಿ ಹಿಟ್ ಸಿನಿಮಾಗಳನ್ನು ಕೂಡ ನೀಡುತ್ತಾರೆ.
ಇನ್ನು ಹೀಗೆ ಸಿನಿಮಾರಂಗದಲ್ಲೂ ಉತ್ತುಂಗದಲ್ಲಿರುವಾಗಲೇ ಸೂರ್ಯಕಿರಣ ಎಂಬ ನಿರ್ದೇಶಕನ ಪರಿಚಯವಾಗುತ್ತಿದ್ದು ಇನ್ನು ಇವರ ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಮದುವೆ ಮಾಡಿಕೊಳ್ಳುವ ಹಂತಕ್ಕೆ ಬಂದು ನಿಲ್ಲುತ್ತದೆ. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದ ಈ ಜೋಡಿ ೨೦೧೦ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯಾದ ಬಳಿಕ ಹೊಸತರದಲ್ಲಿ ಇವರ ಜೀವನ ತುಂಬಾ ಚೆನ್ನಾಗಿರುತ್ತದೆ ಆದರೆ ಹೀಗೆ ದಿನಗಳು ಕಳೆಯುತ್ತಿದ್ದಂತೆ ಸಿನಿಮಾದಲ್ಲಿ ಹೂಡಿಕೆ ಮಾಡುವಂತೆ ನಟಿಯ ಮೇಲೆ ಒತ್ತಾಯ ಮಾಡಲಾಗುತ್ತದೆ. ಆದರೆ ದುರದೃಷ್ಟವೆಂಬಂತೆ ಹೂಡಿಕೆ ಮಾಡಿದ ಚಿತ್ರಗಳು ಹಿಟ್ ಆಗುವುದಿಲ್ಲ.
ನಂತರ ನಟಿ ಕಾವೇರಿ ತಮ್ಮಲ್ಲಿ ಇದ್ದಬದ್ದ ಹಣವನ್ನೆಲ್ಲಾ ಸಿನಿಮಾ ಹೂಡಿಕೆ ಮಾಡಿ ಸಿನಿಮಾಗಳು ಅಂದುಕೊಂಡ ಹಾಗೆ ಓಡದ ಕಾರಣ ಹಣ ಕಳೆದುಕೊಂಡು ಲಾಸಾಗುತ್ತಾರೆ. ಇನ್ನು ಸಿನಿಮಾರಂಗದಲ್ಲಿ ಕಷ್ಟಪಟ್ಟು ದುಡಿದಿದ್ದ ಹಣವನ್ನೆಲ್ಲಾ ಕಳೆದುಕೊಂಡ ನಟಿ ಕಾವೇರಿ ತನ್ನ ಪತಿಯಿಂದ ದೂರ ಆಗಿದ್ದು ನಿರ್ದೇಶಕ ಸೂರ್ಯಕಿರಣ್ ಅವರು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಬಂದಿದ್ದಾಗ ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ ಈಗ ನಮ್ಮಿಬ್ಬರ ನಡುವೆ ವಿಚ್ಚೇಧನ ಆಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಇದೆ ಬಿಗ್ ಬಾಸ್ ಕಾರ್ಯಕ್ರಮದ ವೇಳೆ ನಿರ್ದೇಶಕ ಸೂರ್ಯಕಿರಣ್ ಕಾವೇರಿ ಮತ್ತೆ ನನ್ನ ಜೀವನದಲ್ಲಿ ಬಾ ಅಂತ ಬೇಡಿಕೊಂಡಿದ್ದು ಆದರೆ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ನಟಿ ಕಾವೇರಿರವರು. ಮುಂದೆಯಾದರು ಒಂದಾಗುತ್ತಾರಾ ಇಲ್ಲವೇ ಒಂಟಿಯಾಗಿ ಇದ್ದುಬಿಡುತ್ತಾರಾ ಎಂಬುದನ್ನ ಕಾದು ನೋಡಬೇಕಾಗಿದೆ.