ನಟ ಪುನೀತ್ ರಾಜ್ಕುಮಾರ್ ಕಳೆದ ವರುಷ ಅಕ್ಟೋಬರ್ 29 ರಂದು ನಮ್ಮನ್ನಗಲಿದ್ದರು. ಅವರಿಲ್ಲದೇ ಅದಾಗಲೇ ಒಂದು ವರುಷ ಸಂದಿದ್ದು ಕುಟುಂಬಸ್ಥರು ಒಂದನೇ ವರುಷದ ಪುಣ್ಯ ತಿಥಿ ಕಾರ್ಯ ನೆರವೇರಿಸಲಿದ್ದಾರೆ. ಹೌದು ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನೂ ನಡೆಸಲಿದ್ದಾರೆ. ಈ ಹಿಂದೆ 500 ಸಸಿಗಳನ್ನು ಅಭಿಮಾನಿಗಳಿಗೆ ನೀಡಲಾಗಿತ್ತು. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್ಮೆಂಟ್ ವತಿಯಿಂದ ದೀಪೋತ್ಸವ ಕಾರ್ಯಕ್ರಮ ಕೂಡ ನಡೆದಿದ್ದು ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಸಹೋದರ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಇನ್ನು ಅಂದು ನಟ ಶಿವರಾಜ್ಕುಮಾರ್ ಮೈಸೂರಿನಲ್ಲಿ ಚಿತ್ರದ ಕೆಲಸಗಳಲ್ಲಿದ್ದರು ಆದ ಕಾರಣ ಅವರು ಬಂದಿರಲಿಲ್ಲ.
ಇನ್ನು ಅಭಿಮಾನಿಗಳ ದಂಡು ಪುನೀತ್ ಅವರನ್ನು ನೋಡಲು ಹರಿದು ಬರುತ್ತಿದ್ದು ಅಭಿಮಾನಿಗಳ ಮೂಲಕ ಏನು ವಾಪಸ್ ಕೊಡಬಹುದು ಎಂದು ಯೋಚಿಸುತ್ತಿದ್ದೆವು. ಪುನೀತ್ ರಾಜ್ ಕುಮಾರ್ಗೆ ಕಾಡಿನ ಬಗ್ಗೆ ಕಾಳಜಿ ಇತ್ತು. ಆದ್ದರಿಂದ ಅಭಿಮಾನಿಗಳೆಲ್ಲರಿಗೂ ಗಿಡ ನೀಡಿ ಕಾಡು ಬೆಳೆಸೋದಕ್ಕೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇವೆ.
ಗಿಡಗಳಲ್ಲಿ ಆತ್ಮ ವಾಸಿಸುತ್ತದೆ ಅನ್ನೋ ಮಾತಿದ್ದು ಇಡೀ ಕುಟುಂಬ ಸೇರಿ ಆತ್ಮಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ಕುಮಾರ್ ನುಡಿದಿದ್ದರು. ಅಲ್ಲದೇ ಈ ಕಾರ್ಯವನ್ನು ಮುಂದುವರೆಸುತ್ತೇವೆ ಎಂದು ಅವರು ಹೇಳಿದ್ದರು. ಇದರ ಬೆನ್ನಲ್ಲೆ ರೋಚಕ ಸುದ್ದಿಯೊಂದನ್ನು ಶಿವಣ್ಣ ಬಿಚ್ಚಿಟ್ಟಿದ್ದು ಭಜರಂಗಿ 2 ಪ್ರಿ ರಿಲೀಸ್ ನಲ್ಲೇ ಅಪ್ಪು ಡಲ್ ಆಗಿದ್ದರಂತೆ.
ಸದ್ಯ ಅಪ್ಪು ಅಗಲಿದ ನಂತರ ನೇತ್ರದಾನ ಮಾಡುವ ಪ್ರೇರಣೆಯಿಂದ ಹಲವು ಜನರು ಈ ಕುರಿತು ಪ್ರಶ್ನಿಸಿದ್ದು ಆದ್ದರಿಂದ ನೋಂದಣಿ ಸುಲಭವಾಗಲೆಂದು ವಿಶೇಷ ಫೋನ್ ನಂಬರ್ಅನ್ನು ಸ್ಥಾಪಿಸಲಾಗಿತ್ತು. ಹೌದು 8884018800 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ನೇತ್ರದಾನಕ್ಕೆ ನೋಂದಾಯಿಸಲು ಅಗತ್ಯವಾದ ಅರ್ಜಿಯ ಲಿಂಕ್ ಸಿಗಲಿದೆ ಎಂದು ರಾಘವೇಂದ್ರ ರಾಜ್ಕುಮಾರ್ ರವರು ಮಾಹಿತಿ ಹಂಚಿಕೊಂಡಿದ್ದರು.
Punith ಅಗಲಿದ ಬಳಿಕ ನೇತ್ರದಾನದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು ಸದ್ಯ ಇದೀಗ ಹೆಸರು ನೋಂದಾಯಿಸುವುದು ಮತ್ತಷ್ಟು ಸುಲಭವಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೇ ನಾಲ್ಕು ತಿಂಗಳ ಹಿಂದೆ ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ದೇಹದಾನಕ್ಕೆ ನೋಂದಣಿ ಮಾಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಇನ್ನು ಶಿವರಾಜ್ಕುಮಾರ್ ಅವರು ಈಗ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದು
ಭಜರಂಗಿ 2 ಪ್ರೀ ರಿಲೀಸ್ ಇವೆಂಟ್ ದಿನ ಶಿವರಾಜ್ಕುಮಾರ್ ಯಶ್ ಹಾಗೂ ಪುನೀತ್ ರಾಜ್ಕುಮಾರ್ ಒಟ್ಟಾಗಿ ಡಾನ್ಸ್ ಮಾಡಿದ್ದು ಇದು ಸಾಮಾಜಿಕ ಜಾಲಾತಣದಲ್ಲಿ ತುಂಬಾನೆ ವೈರಲ್ ಆಗಿತ್ತು. ಹೌದು ಈ ವೇಳೆ ಪುನೀತ್ ಅವರು ತುಂಬಾನೆ ಡಲ್ ಆಗಿದ್ದು ಈ ಸಮಯದಲ್ಲಿ ಶಿವಣ್ಣ ಕೊಂಚ ಗಾಬರಿ ಗೊಂಡಿದ್ದು ಅಪ್ಪು ಏನಾಯಿತು ಎಂದು ಕೇಳಿದ್ದಾರೆ.
ಆದರೂ ಕೂಡ ಏನಿಲ್ಲ ಶಿವಣ್ಣ ಆರಾಮಾಗಿದ್ದಿನಿ ಎಂದಿದ್ದರಂತೆ. ಆದರೂ ಸಹ ಶಿವಣ್ಣ ಏನೋ ಸಮಸ್ಯೆ ಆಗಿರ ಬೇಕು ಎಂದು ಪದೇ ಪದೇ ಪ್ರಶ್ನಿಸಿದರು ಕೂಡ ಅಪ್ಪು ಹೇಳಲಿಲ್ಲವಂತೆ. ಅಂದೇ ಅಪ್ಪು ಸುಸ್ತಾಗಿದ್ದ ನನಗೂ ತಿಳಿಯಲಿಲ್ಲ ಅಂದೇ ವೈದ್ಯರ ಬಳಿ ಕರೆದುಕೊಂಡು ಹೋಗಬೇಕಿತ್ತು ಎಂದು ಹೇಳುತ್ತಾ ಶಿವಣ್ಣ ಇದೀಗ ಕಣ್ಣೀರಿಟ್ಟಿದ್ದಾರೆ. ಇನ್ನು ಅಂದು ಭಜರಂಗಿ ೨ ವೇದಿಕೆ ಮೇಲೆ ಅಪ್ಪು ಅವರು ಮೊದಲ ಬಾರಿಗೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದರು. ಆ ಕ್ಷಣ ಹೇಗಿತ್ತು ಗೊತ್ತಾ? ನೀವೆ ನೋಡಿ.