ವಾರ್ತಾ ಮಂಜರಿ
Trending Stories, Viral News, Gossips & Everything in Kannada

Divya Shridhar: ಆಕಾಶದೀಪ ನಟಿ ದಿವ್ಯಾ ಮಾಡಿದ ಆರೋಪಕ್ಕೆ ತಿರುಗೇಟು ಕೊಟ್ಟಗಂಡ ಹೇಳಿದ್ದೆ ಬೇರೆ…

360

ಕಿರುತೆರೆ ಲೋಕದ ಖ್ಯಾತ  ಆಕಾಶದೀಪ ಧಾರಾವಾಹಿಯ ದೀಪ ಪಾತ್ರಧಾರಿ ನಟಿ Divya Shridhar  ಅವರು ಪತಿ ಅರ್ನವ್ ( ಅಮ್ಜಾದ್ ಖಾನ್ ) ರವರ ಮೇಲೆ ಸದ್ಯ ಇದೀಗ ಗಂಭೀರವಾದ ಆರೋಪ ಮಾಡಿದ್ದು ಅಂದಹಾಗೆ ಅರ್ನವ್ ಸಹ ತಮಿಳು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಇದೀಗ ಈ ದಂಪತಿಯ ಕಲಹ ಬೀದಿಗೆ ಬಂದಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. 2017ರಲ್ಲಿ ನಾನು ಅರ್ನವ್ ಒಂದೇ ಸೀರಿಯಲ್ ನಲ್ಲಿ ಅಭಿನಯಿಸಲು ಆರಂಭಿಸಿದೆವು. ನಂತರ ನಮ್ಮ ಮಧ್ಯೆ ಸ್ನೇಹ ಪ್ರೀತಿ ಬೆಳೆದು 2 ವರ್ಷದ ಹಿಂದೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲು ಕೂಡ ಆರಂಭಿಸಿದೆವು. 2 ವರ್ಷ ಲಾಕ್‌ಡೌನ್‌ನಲ್ಲಿ ಕೆಲಸ ಇಲ್ಲದಿದ್ದಾಗ ಅರ್ನವ್‌ ಅವರನ್ನು ನಾನೇ ಮಗು ತರ ನೋಡಿಕೊಂಡೆ.

ಇನ್ನು ಇತ್ತೀಚೆಗೆ ನಾವು ಮದುವೆ ಆಗಿದ್ದು ನಾನು ಈಗ ಗರ್ಭಿಣಿ, ನನ್ನ ಗಂಡ ಅಮ್ಜದ್ ಖಾನ್ ಅವರು ಮಗು ಬೇಡ ಎಂದು ಹೇಳುತ್ತಿದ್ದು ಅವರು ಮನೆ ತೆಗೆದುಕೊಳ್ಳಲು ನಾನೇ ಸಹಾಯ ಮಾಡಿದ್ದೆ ಎಂದು ದಿವ್ಯಾ ಶ್ರೀಧರ್ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ನಟಿ ದಿವ್ಯಾ ರವರು ಕೆಲ ಕೆಟ್ಟ ಸ್ನೇಹಿತರ ಜೊತೆ ಸೇರಿಕೊಂಡು ಈ ರೀತಿ ಮಾಡುತ್ತಿದ್ದು ಗರ್ಭಪಾತ ಮಾಡಿಸಿಕೊಳ್ಳಲು ದಿವ್ಯಾ ಈ ರೀತಿ ಮಾಡಿದ್ದಾಳೆ ಎಂಬ ಅನುಮಾನ ಬರುತ್ತಿದೆ. ನಮ್ಮ ಮನೆಯಲ್ಲಿ ಸಿಸಿಟಿವಿ ಇದ್ದು ನಾನು ಬೇರೆ ರೀತಿ ಮಾಡಿದ್ದೀನಾ ಇಲ್ಲವೋ ಎಂದು ನೀವು ಬೇಕಾದರೆ ಚೆಕ್ ಮಾಡಿಕೊಳ್ಳಿ. ನನಗೆ ಏನೇ ಆದರೂ ಮಗು ಬೇಕು ನಾನು ಕಮಿಷನರ್‌ಗೆ ದೂರು ಸಲ್ಲಿಸುವೆ ಎಂದು ಅಮ್ಜದ್ ಖಾನ್ ರವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅರ್ನವ್ ಜೊತೆಗಿನ ಸಾಲು ಸಾಲು ಫೋಟೋ ಹಂಚಿಕೊಂಡಿದ್ದ ದಿವ್ಯಾ ಕೆಳದಿ ಕನ್ಮಣಿ ಧಾರಾವಾಹಿ ಮೂಲಕ ನಮ್ಮ ಸುಂದರವಾದ ಜರ್ನಿ ಶುರುವಾಗಿದ್ದು ಅಂದಿನಿಂದ ಇಬ್ಬರೂ ಕೂಡ ಪರಸ್ಪರ ಅರ್ಥಮಾಡಿಕೊಳ್ಳಲು ಆರಂಭಿಸಿದೆವು.  ಆ ನಂತರ ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದು ನಾವಿಬ್ಬರೂ ಕೂಡ ಪೂರ್ತಿ ಜೀವನವನ್ನು ಹಂಚಿಕೊಳ್ಳೋಣ ಎಂದು ನಿರ್ಧಾರ ಮಾಡಿದ್ದು ತುಂಬ ಪ್ರೀತಿ ಸಹಕಾರ ಜಗಳ ಜಗಳದ ಜೊತೆಗೂ 5 ವರ್ಷಗಳ ಕಾಲ ಒಟ್ಟಿಗಿದ್ದೆವು. ಇಬ್ಬರದೂ ಬೇರೆ ಬೇರೆ ಸಂಪ್ರದಾಯ.ನಾವಿಬ್ಬರೂ ಅದೃಷ್ಟವಂತ ಜೋಡಿಗಳು ಎಂದು ಭಾವಿಸುತ್ತೇವೆ. ನಮ್ಮ ಕನಸಿನ ಮನೆಗೆ ಕಾಲಿಟ್ಟಿದ್ದು ದೊಡ್ಡ ಸಾಧನೆ ಎಂದುಕೊಳ್ಳುವೆ.

ಮೊದಲ ಮಗುವಿನ ನಿರೀಕ್ಷೆಯೊಂದಿಗೆ ನಾವೀಗ ಜವಾಬ್ದಾರಿಯುತ ಸ್ಥಾನಕ್ಕೆ ಬಡ್ತಿ ಪಡೆಯುತ್ತಿದ್ದು ಪ್ರೇಮಿಗಳು ಸತಿ-ಪತಿ ಈಗ ಪಾಲಕರಾಗಿ ಜೀವನವನ್ನು ಆನಂದಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದರು. ಇನ್ನು ದಿವ್ಯಾ ಶ್ರೀಧರ್ ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿಸಿದ್ದಾಗ ಅವರು ನನ್ನ ಪತಿ ಸಾಫ್ಟ್‌ವೇರ್ ಇಂಜಿಬಿಯರ್ ಆಗಿ ಕೆಲಸ ಮಾಡುತ್ತಿದ್ದು ನನ್ನ ತಾಯಿ ನನ್ನ ಮಗಳನ್ನು ನೋಡಿಕೊಳ್ಳೋದರಿಂದ ನಾನು ಪ್ರಸ್ತುತ ಚೆನ್ನೈಗೆ ಹೋಗಿ ಕೆಲಸ ಮಾಡಿ ಬರುತ್ತಿದ್ದೇನ ಎಂದಿದ್ದರು. ಸದ್ಯ ಆಕಾಶದೀಪ ಧಾರಾವಾಹಿಯಲ್ಲಿ ದಿವ್ಯಾ ನಟಿಸುತ್ತಿರುವಾಗಲೇ ಅವರಿಗೆ ಮದುವೆಯಾಗಿತ್ತು ಎನ್ನಲಾಗಿದ್ದು ಹಾಗಾದಮೇಲೆ ಅರ್ನವ್ ಜೊತೆಗೆ ದಿವ್ಯಾ ಅವರದ್ದು ಎರಡನೇ ಮದುವೆ ಎಂಬ ಶಂಕೆ ಕೂಡ ಹುಟ್ಟಿಕೊಂಡಿದೆ.