ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಪಾಕ್ ಮಾಜಿ ಆಟಗಾರ ಶೋಯಿಬ್ ಅಕ್ತರ್…ಫ್ಯಾನ್ಸ್ ಏನಂದ್ರು?

87

ಸದ್ಯ ಏಷ್ಯಾ ಕಪ್‌ 2022 ಟೂರ್ನಿ ಸೂಪರ್‌ ಫೋರ್‌ ಹಂತದಲ್ಲಿ ಭಾರತ ತಂಡ ಬ್ಯಾಕ್‌ ಟು ಬ್ಯಾಕ್‌ ಸೋಲುಂಡಿದ್ದು ಈ ಸತತ ಸೋಲುಗಳಿಂದ ಪಾಠ ಕಲಿತು ಟೀಮ್ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಾ ತಮ್ಮ ನಾಯಕತ್ವವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಹೇಳಿದ್ದಾರೆ. ಸದ್ಯ ಟೂರ್ನಿಯ ಗ್ರೂಪ್‌ ಹಂತದ ಪಂದ್ಯದಲ್ಲಿ ಬ್ಯಾಕ್‌ ಟು ಬ್ಯಾಕ್‌ ಜಯದೊಂದಿಗೆ ಭಾರತ ತಂಡ ಎ ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್‌ ಫೋರ್‌ ಹಂತಕ್ಕೆ ತೇರ್ಗಡೆಯಾಗಿದ್ದು ಆದರೆ ಈ ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಎದುರು ಮುಗ್ಗರಿಸುವ ಮೂಲಕ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿದೆ.

ಇನ್ನು ಭಾರತ ತಂಡ ಕೆಟ್ಟದಾಗಿ ಏನೂ ಆಡಿಲ್ಲ. ಅಂದಹಾಗೆ ಅಷ್ಟೇ ಉತ್ತಮವಾಗಿಯೂ ಆಡಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದ್ದು ಹೀಗಾಗಿ ಅಭಿಮಾನಿಗಳು ಬೇಸರಗೊಳ್ಳುವುದರಲ್ಲಿ ಅರ್ಥವಿದೆ. ಹೌದು ಅಂದಹಾಗೆ ಕೆಳಗೆ ಬಿದ್ದಾಗ ಖಂಡಿತಾ ಮೇಲೇಳುವ ಅವಕಾಶ ಇದ್ದೇ ಇರುತ್ತದೆ. ಈ ಸೋಲು ಭಾರತ ತಂಡಕ್ಕೆ ಮುಂದಿನ ವಿಶ್ವಕಪ್‌ ನಿಟ್ಟಿನಲ್ಲಿ ದೊಡ್ಡ ಪಾಠವಾಗಬಹುದು ಎಂದು ಅಖ್ತರ್‌ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ವಿವರಿಸಿದ್ದು ಪಾಕ್‌ ತಂಡದ ಮಾಜಿ ವೇಗಿ ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ರವರ ಕ್ಯಾಪ್ಟನ್ಸಿ ಬಗ್ಗೆ ಚಕಾರ ತೆಗೆದಿದ್ದಾರೆ. ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ಗೂ ಮುನ್ನ ರೋಹಿತ್‌ ತಮ್ಮ ನಾಯಕತ್ವವನ್ನು ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ.

Want To Be A Mix Of Rohit Sharma And Shoaib Akhtar - Karim Janat

ಭಾರತ ತಂಡ ಇಲ್ಲಿ ಬೇಸರಗೊಳ್ಳುವ ಅಗತ್ಯವಿಲ್ಲ. ಆದರೆ ಈ ತಪ್ಪುಗಳಿಂದ ಕೂಡಲೇ ಪಾಠ ಕಲಿತುಕೊಳ್ಳಬೇಕು. ಭಾರತ ತಂಡ ತನ್ನ ಶ್ರೇಷ್ಠ ಆಡುವ ಹನ್ನೊಂದರ ಬಳಗವನ್ನು ಕಂಡುಕೊಳ್ಳಬೇಕಿದ್ದು ಜೊತೆಗೆ ರೋಹಿತ್‌ ಶರ್ಮಾ ತಮ್ಮ ಕ್ಯಾಪ್ಟನ್ಸಿ ಸುಧಾರಿಸಿಕೊಳ್ಳಬೇಕು. ಸ್ವಲ್ಪ ತಾಳ್ಮೆಯ ಅಗತ್ಯವೂ ಇದೆ ಎಂದು ಅಖ್ತರ್‌ ಅಭಿಪ್ರಾಯ ಪಟ್ಟಿದ್ದು ಪಾಕಿಸ್ತಾನ ತಂಡ ಒಂದು ವೇಳೆ ತನ್ನ ಪಾಲಿನ ಉಳಿದೆರಡೂ ಪಂದ್ಯಗಳನ್ನು ಸೋತರಷ್ಟೇ ಭಾರತಕ್ಕೆ ಫೈನಲ್‌ ತಲುಪುವ ಅವಕಾಶವಿದೆ. ಆದರೆ ಇದು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಈ ಬಾರಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ಫೈನಲ್‌ ನಡೆಯಲಿದೆ ಎಂದು ಅಖ್ತರ್‌ ಭವಿಷ್ಯ ನುಡಿದಿದ್ದಾರೆ.

ಭಾರತ ತಂಡ ಸೆಪ್ಟೆಂಬರ್‌ 8ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ಅಪಾಯಕಾರಿ ಅಫಘಾನಿಸ್ತಾನ ಎದುರು ತನ್ನ ಸೂಪರ್‌-4 ಹಂತದ ಕೊನೇ ಪಂದ್ಯವನ್ನು ಆಡಲಿದ್ದು ಇದಕ್ಕೂ ಮುನ್ನ ಅಫಘಾನಿಸ್ತಾನ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ದಾಖಲಿಸಬೇಕಿತ್ತು ಇದರ ಜೊತೆಗೆ ಪಾಕ್‌ ತಂಡ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋತಾಗ ಮಾತ್ರ ಭಾರತಕ್ಕೆ ಫೈನಲ್‌ ತಲುಪುವ ಕದ ತೆರೆದುಕೊಳ್ಳಲಿದೆ.

Rohit Sharma