ಪಂದ್ಯ ಸೋತ ಬಳಿಕ ಪಾಕ್ ಫ್ಯಾನ್ಸ್ ಗಳಿಗೆ ಕುರ್ಚಿಯಿಂದ ಹೊಡೆದ ಆಫ್ಘಾನಿಸ್ತಾನ್ ಫ್ಯಾನ್ಸ್… ವಿಡಿಯೋ ಸಿಕ್ಕಾಪಟ್ಟೆ ವೈರಲ್
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸೂಪರ್ 4 ಹಂತದ ಸೆಣೆಸಾಟ ಈ ಟೂರ್ನಿಯ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದ್ದು ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿ ನಡೆಸಿದ್ದು ಅಂತಿಮ ಹಂತದವರೆಗೂ ತೀವ್ರ ಸೆಣೆಸಾಟ ನಡೆಸಿದೆ. ಆದರೆ ಈ ಪೈಪೋಟಿಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲರ್ ಫರೀದ್ ಅಹ್ಮದ್ ಹಾಗೂ ಆಸಿಫ್ ಅಲಿ ನಡುವಿನ ಒಂದು ಅಹಿತಕರ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿರುವ ಹೊತ್ತಿನಲ್ಲೇ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭಿಮಾನಿಗಳ ವರ್ತನೆಯ ವಿಡಿಯೋಗಳು ಕೂಡ ಹೊರಬಂದಿದ್ದು ಇದೀಗ ಆಘಾತವುಂಟು ಮಾಡುವಂತಿದೆ.
ಹೌದು ಈ ಪಂದ್ಯ ರೋಚಕವಾಗಿ ಮುಕ್ತಾಯವಾಗಿ ಪಾಕಿಸ್ತಾನ ಅಮೋಘ ಗೆಲುವು ಸಾಧಿಸಿದ್ದು ಈ ಫಲಿತಾಂಶದ ಬಳಿಕ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಯಾರೂ ನಿರೀಕ್ಷಿಸದ ರೀತಿಯ ಘಟನೆಗಳು ನಡೆದಿದೆ. ಹೌದು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ಅಭಿಮಾನಿಗಳು ಭಾರೀ ದಾಂಧಲೆಯನ್ನೇ ನಡೆಸಿದ್ದು ಮಾತ್ರವಲ್ಲ ಪರಸ್ಪರ ಹಲ್ಲೆಯನ್ನು ಕೂಡ ನಡೆಸಿರುವ ವಿಡಿಯೋಗಳು ಬಹಿರಂಗವಾಗಿದೆ.
ಒಂದು ದೃಶ್ಯದಲ್ಲಿ ಸ್ಟೇಡಿಯಂನ ಆಸನಗಳನ್ನು ಕಿತ್ತು ಎಸೆದು ದಾಂಧಲೆ ಮಾಡುತ್ತಿರುವ ದೃಶ್ಯಗಳಿದ್ದರೆ ಮತ್ತೊಂದೆಡೆ ಕಡೆ ಪಾಕಿಸ್ತಾನದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಹ ಇದೆ. ಇನ್ನು ಈ ಕಾದಾಟ ಸ್ಟೇಡಿಯಂನಲ್ಲಿ ಮಾತ್ರವಲ್ಲದೆ ಶಾರ್ಜಾ ಸ್ಟೇಡಿಯಂನ ಆಚೆಗೂ ಕೂಡ ನಡೆದಿದ್ದು ಪ್ರತ್ಯೇಕ ಗುಂಪುಗಳ ಮಧ್ಯೆ ಭಾರೀ ಕಾದಾಟಗಳು ನಡೆದಿರುವುದು ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬಹುತೇಕರು ಅಫ್ಘಾನಿಸ್ತಾನಿಗರ ಮೇಲೆ ಕೆಂಡಾಮಂಡಲವಾಗಿದ್ದಾರೆ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಿತು. ಅಫ್ಘಾನ್ ಪರ ಉತ್ತಮ ಆರಂಭ ನೀಡುವ ಸೂಚನೆ ನೀಡಿತಾದ್ರೂ ಕೂಡ ಪಾಕ್ ಬೊಂಬಾಟ್ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನ್ ಕಡಿಮೆ ಮೊತ್ತಕ್ಕೆ ಕುಸಿಯಿತು. 130ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಮೊದಲ ಓವರ್ನಲ್ಲೇ ನಾಯಕ ಬಾಬರ್ ಅಜಮ್ ವಿಕೆಟ್ ಕಳೆದುಕೊಂಡ ಕೆಟ್ಟ ಆರಂಭ ಪಡೆಯಿತಾದ್ರೂ 10 ಓವರ್ ಮುಕ್ತಾಯಕ್ಕೆ ಸೂಕ್ತ ಹಂತಕ್ಕೆ ತಲುಪಿತ್ತು. ಮೂರು ವಿಕೆಟ್ ನಷ್ಟಕ್ಕೆ 83ರನ್ ಕಲೆಹಾಕಿದ್ದ ಪಾಕಿಸ್ತಾನ ನಾಟಕೀಯ ಕುಸಿತ ಕಾಣುವ ಮೂಲಕ ಸೋಲಿನ ಬಲೆಗೆ ಬಿದ್ದಿತು. ಆದರೆ ಅಂತಿಮ ಓವರ್ನಲ್ಲಿ ಬೌಲರ್ ನಸೀಮ್ ಶಾ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಾಕ್ಗೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ತಲುಪಿತು.
ಆದ್ಮರೆ ಇದಕ್ಕೂ ಮುನ್ನ ನಸೀಮ್ ಶಾ ಅಬ್ಬರಕ್ಕೆ ಹಾಗೂ ಗೆಲುವಿನ ಬಳಿಕ ಅಗ್ರೆಸ್ಸಿವ್ ಸಂಭ್ರಮಕ್ಕೆ ಪ್ರಮುಖ ಕಾರಣವಿತ್ತು. ಪಾಕ್ ಬೌಲರ್ ಆಸಿಫ್ ಅಲಿ 16 ರನ್ಗಳಿಸಿ ಫರೀದ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದ ವೇಳೆಯಲ್ಲಿ ಬೌಲರ್ಗೂ ಮತ್ತು ಬ್ಯಾಟರ್ಗೂ ದೊಡ್ಡ ಮಟ್ಟಿನ ವಾಗ್ವಾದಕ್ಕೆ ಕಾರಣವಾಯಿತು.
ಪಾಕಿಸ್ತಾನದ ಆಟಗಾರ ಆಸಿಫ್ ಅಲಿ ತನಗೆ ಸೆಂಡ್ ಆಫ್ ನೀಡಲು ಬಂದಿದ್ದ ಎದುರಾಳಿ ಬೌಲರ್ಗೆ ಇನ್ನೇನು ಬ್ಯಾಟ್ನಿಂದ ಬಾರಿಸಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಇಬ್ಬರ ನಡುವೆ ತಿಕ್ಕಾಟ ನಡೆಯಿತು. ಆಸಿಫ್ ಅಲಿ ತೋರಿದ ವರ್ತನೆಯು ಪಾಕ್ನ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಬ್ಯಾಟ್ ಬೀಸಿದ್ದ ಘಟನೆಯನ್ನ ನೆನಪಿಸಿತು. ಆದರೆ ಅಫ್ಘಾನ್ ಆಟಗಾರರ ಮಧ್ಯ ಪ್ರವೇಶದಿಂದಾಗಿ ಇಬ್ಬರ ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪುವುದು ತಪ್ಪಿತು ಎನ್ನಬಹುದು.
Afghanistan fans once again showing that they cannot take defeat gracefully #AFGvPAK #AsiaCup #Cricket pic.twitter.com/0u5yrMx9Xa
— Saj Sadiq (@SajSadiqCricket) September 7, 2022