ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನೆರೆ ಪ್ರವಾಹದಲ್ಲಿ ಮುಳುಗಿದ ಕಾರಿಗೆ ಇನ್ಸೂರೆನ್ಸ್ ಹಣ ಪಡೆಯುವುದು ಹೇಗೆ, ವಿಧಾನ

134

ಪ್ರಕೃತಿಯ ಸೃಷ್ಟಿಯೇ ಅದ್ಭುತವೆನ್ನಬಹುದು. ಹೌದು, ಪ್ರಕೃತಿಯ ಸೃಷ್ಟಿಯ ಮುಂದೆ ಮನುಷ್ಯ ಏನೇ ಸೃಷ್ಟಿಸಿದರೂ ಅದು ಪ್ರಕೃತಿಯ ಸೃಷ್ಟಿಗೆ ಸರಿಸಮವಾಗುವುದಿಲ್ಲ. ಹೌದು, ಪ್ರಕೃತಿಯೂ ಅತೀ ದೊಡ್ಡ ಜೀವಿಗಳನ್ನು ಸೃಷ್ಟಿಸಿದೆ, ಜೊತೆಗೆ ಕಣ್ಣಿಗೆ ಕಾಣದ ಅತೀ ಸೂಕ್ಷ್ಮ ಜೀವಿಗಳನ್ನು ಸೃಷ್ಟಿಸಿದೆ. ಸೃಷ್ಟಿಯನ್ನು ಸರಿದೂಗಿಸಲು ಒಂದಷ್ಟು ವ್ಯತ್ಯಾಸಗಳನ್ನು ಮಾಡಿ ಬಿಟ್ಟಿದೆ. ಮನುಷ್ಯ ಎಷ್ಟೇ ಬುದ್ದಿವಂತನಾದರೂ ಪ್ರಕೃತಿಯ ಸೃಷ್ಟಿಯನ್ನು ಅದಲು ಬದಲು ಮಾಡಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದಾಗಿ ಪ್ರಕೃತಿಯನ್ನು ಹಾಳು ಮಾಡಿದ್ದಾನೆ.

ಪ್ರಕೃತಿಯು ವಿಧಿಸುತ್ತಿರುವ ಶಿಕ್ಷೆಯನ್ನು ಕೂಡ ಅನುಭವಿಸುತ್ತಿದ್ದಾನೆ. ಹೀಗಾಗಿ ಪ್ರಕೃತಿಯಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ಚಂಡಮಾರುತ, ಭೂಕಂಪ, ಪ್ರವಾಹ, ನೆರೆ, ಆಲಿಕಲ್ಲು ಮಳೆಯಂತಹ ನೈಸರ್ಗಿಕ ವಿಕೋಪಗಳು ಅನಿರೀಕ್ಷಿತವಾಗಿದೆ. ಕಳೆದ ಹಲವಾರು ವರ್ಷಗಳಿಂದ ಭಾರತದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗಿ ಸಾಕಷ್ಟು ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಅನೇಕರು ತಮ್ಮ ಆಸ್ತಿಯನ್ನು ಕಳೆದುಕೊಂಡು ದಿಕ್ಕು ತೋಚದಂತೆ ಆಗಿದ್ದಾರೆ.

ಸದ್ಯಕ್ಕೆ ಪ್ರಸ್ತುತ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಲ್ಲಿ ಭಾರೀ ಮಳೆಯಾಗಿದ್ದು, ಜನ ಸಂಚಾರಕ್ಕೂ ಕೂಡ ಕಷ್ಟವಾಗಿದೆ. ಅದಲ್ಲದೆ ವಾಹನಗಳಿಗೆ ನೀರು ತುಂಬಿ ನಷ್ಟವನ್ನು ಅನುಭವಿಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕಾರಿನ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಬಹುದು. ಆದರೆ ಈ ವಿಚಾರದ ಕುರಿತು ಬಹುತೇಕರಿಗೆ ತಿಳಿದಿಲ್ಲ. ನೆರೆ ಸಮಯದಲ್ಲಿ ಕಾರಿಗೆ ಆದ ಹಾನಿಗಾಗಿ ವಿಮೆ ಕ್ಲೈಮ್ ಮಾಡಿಕೊಳ್ಳಬಹುದು.

ಇದರಿಂದಾಗಿ ಸಮಯ ಹಾಗೂ ಹಣ ಎರಡನ್ನು ಕೂಡಾ ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈ ಸಮಯದ ಉಪಯೋಗಕ್ಕಾಗಿಯೇ ಕೆಲವು ಕೆಲವು ವಿಮಾ ಪಾಲಿಸಿಗಳಿವೆ. ಈ ಪಾಲಿಸಿಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ. ಈ ವಿಮೆಯನ್ನು ಪಡೆದುಕೊಳ್ಳಬೇಕಾದರೆ ಕೆಲವು ವಿಚಾರದ ಬಗ್ಗೆ ಮಾಹಿತಿ ಇರಬೇಕು. ಕಾರು ನೆರೆಯಿಂದಾಗಿ ಹಾನಿಯಾದಾಗ ಕಾರನ್ನು ಕೂಡಲೇ ಸ್ಟಾರ್ಟ್ ಮಾಡಲು ಮುಂದಾಗಬಹುದು.

ಆದರೆ ಗಮನದಲ್ಲಿ ಇರಲಿ, ಈ ಸಂದರ್ಭದಲ್ಲಿ ಕೂಡಲೇ ಕಾರನ್ನು ಸ್ಟಾರ್ಟ್ ಮಾಡಬಾರದು ನೆರೆಯಿಂದಾಗಿ ಕಾರು ಹಾನಿಯಾಗಿರುವಾಗ ಕಾರನ್ನು ಸ್ಟಾರ್ಟ್ ಮಾಡಿದರೆ ಕಾರಿನ ಇಂಜಿನ್‌ ಹಾಳಾಗುತ್ತದೆ. ಇದು ವಿಮೆಯಲ್ಲಿ ಸೇರ್ಪಡೆಯಾಗದೇ ಇರುವ ಸಾಧ್ಯತೆ ಇದೆ. ಆದ್ದರಿಂದಾಗಿ ನೆರೆಯ ಸಮಯದಲ್ಲಿ ಕಾರನ್ನು ಹಾಗೆಯೇ ಇರಿಸಿ ಅದರ ಫೋಟೋವನ್ನು ತೆಗೆದಿಟ್ಟುಕೊಳ್ಳಿ. ಕಾರಿನಲ್ಲಿ ಬೇರೆ ಏನಾದರೂ ಹಾನಿಯಾಗಿದ್ದರೆ ಅದರ ಫೋಟೋವನ್ನು ತೆಗೆಯುವುದು ಸೂಕ್ತ.

ನೆರೆಯಿಂದ ಹಲವಾರು ಕಾರುಗಳಿಗೆ ಹಾನಿಯಾಗಿರಬಹುದು.ಆ ವೇಳೆಯಲ್ಲಿ ಸಂಸ್ಥೆಯಿಂದ ಹಲವಾರು ಮಂದಿ ಒಂದೇ ಸಮಯಕ್ಕೆ ವಿಮಾ ಕ್ಲೈಮ್ ಮಾಡುವ ಅವಕಾಶವು ಇದೆ. ಒಂದು ವೇಳೆ ಕಾರು ಹಾನಿಗೆ ಒಳಗಾಗಿದ್ದರೆ, ಈ ಕುರಿತು ವಿಮಾ ಸಂಸ್ಥೆಗೆ ಆದಷ್ಟು ಶೀಘ್ರವಾಗಿ ಮಾಹಿತಿ ನೀಡಬೇಕು. ಅದರ ಜೊತೆಗೆ ಕಾರನ್ನು ಸರ್ವಿಸ್ ಸೆಂಟರ್‌ಗೆ ಕಳುಹಿಸಬೇಕು. ಇಲ್ಲಿ ಮುಖ್ಯವಾಗಿ ಕಾರು ಹಾನಿಗೆ ಒಳಗಾದ ಸವಾರನು ಗ್ರಾಹಕರ ಸಹಾಯವಾಣಿ ಮೂಲಕ ಅಥವಾ ಇಮೇಲ್ ಮೂಲಕ ನಿಮ್ಮ ಕಾರಿನ ವಿಮಾ ಸಂಸ್ಥೆಯನ್ನು ಸಂಪರ್ಕ ಮಾಡಬಹುದು.

ಅಷ್ಟೇ ಅಲ್ಲದೇ, ವಿಮಾ ಕ್ಲೈಮ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಬೇಕು. ಅದರ ಜೊತೆಗೆ, ಫೋಟೋಗಳನ್ನು ಕೂಡಾ ನೀವು ಹಾಕಬಹುದು. ವಿಮಾ ಸಂಸ್ಥೆಯ ಮೊಬೈಲ್ ಆಪ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಈ ವಿಮಾ ಸಂಸ್ಥೆಯಿಂದ ಕ್ಲೈಮ್ ಪಡೆಯಲು ಕೂಡಾ ಅಧಿಕ ಸಮಯ ಬೇಕಾಗಬಹುದು. ಹೀಗಾಗಿ ಆದಷ್ಟು ಬೇಗನೇ ಅರ್ಜಿ ಸಲ್ಲಿಸಿ ವಿಮೆಯನ್ನು ಪಡೆಯಬಹುದು.

ವಿಮೆಯನ್ನು ಕ್ಲೈಮ್ ಮಾಡುವಾಗ ಒಂದಷ್ಟು ಪ್ರಕ್ರಿಯೆಗಳಿರುತ್ತದೆ. ಅವುಗಳು ಈ ಕೆಳಗಿನಂತಿವೆ.
* ನಿಮ್ಮ ಕಾರು ವಿಮಾ ಸಂಸ್ಥೆಗೆ ಕರೆ ಮೂಲಕ, ಇಮೇಲ್ ಮೂಲಕ ಮಾಹಿತಿ ನೀಡಿ
* ನೆರೆ ಸಂದರ್ಭ ಕಾರು ಎಲ್ಲಿತ್ತು ಹಾಗೂ ವಿಮೆಯ ಬಗ್ಗೆ ವಿವರಿಸಿ
* ಸಂಸ್ಥೆ ಕ್ಲೈಮ್ ರಿಜಿಸ್ಟರ್ ಸಂಖ್ಯೆ ನೀಡಲಿದೆ. ಇದನ್ನು ನೀವು ರೆಫೆರೆನ್ಸ್ ಸಂಖ್ಯೆಯಾಗಿ ಬಳಸಬಹುದು
* ಕಾರನ್ನು ಪಿಕ್‌ಅಪ್ ಮಾಡಲು ನಿಮಗೆ ನಿರ್ದಿಷ್ಟ ಸಮಯವನ್ನು ನೀಡಲಾಗುತ್ತದೆ.
* ಕಾರಿನ ಹಾನಿ ಪರಿಶೀಲನೆ ಮಾಡಲಾಗುತ್ತದೆ.

ಇದಾದ ಬಳಿಕ ಕಾರು ರಿಪೇರಿ ಮೊತ್ತದ ಬಗ್ಗೆ ನಿರ್ಧಾರವಾಗಲಿದೆ
* ಎಲ್ಲ ಪ್ರಕ್ರಿಯೆ ಬಳಿಕ ಕ್ಲೈಮ್ ಅಪ್ರುವಲ್ ಫಾರ್ಮ್ ಮೇಲೆ ಸಹಿ ಮಾಡಿ, ಕಾಪಿಯನ್ನು ಇಟ್ಟುಕೊಳ್ಳಿ
* ಕಾರು ಯಾವಾಗ ರಿಪೇರಿ ಆಗಲಿದೆ, ನಿಮಗೆ ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ತಿಳಿಯಲಿದೆ.
* ನಗದುರಹಿತ ಕ್ಲೈಮ್ ಆಗಿದ್ದರೆ ವಿಮಾ ಸಂಸ್ಥೆ ನೇರವಾಗಿ ಗ್ಯಾರೆಜ್‌ಗೆ ಹಣ ಪಾವತಿ ಮಾಡಲಿದೆ.
* ಹಣ ಮರುಪಾವತಿಯಾಗಿದ್ದರೆ ನಿಮಗೆ ಹಣ ಲಭ್ಯವಾಗಲಿದೆ. ಈ ಮೂಲಕ ಹಾನಿಗೊಳಗಾದ ಕಾರಿನ ವಿಮೆ ಕ್ಲೈಮ್ ಮಾಡಬಹುದಾಗಿದೆ.