ಸದ್ಯ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಅತ್ಯಂತ ಕ್ರೂಶಿಯಲ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಆಸಿಫ್ ಅಲಿ ಅಫ್ಘಾನಿಸ್ತಾನದ ಬೌಲರ್ ಫರೀದ್ ಅಹಮದ್ಗೆ ಬ್ಯಾಟ್ನಿಂದ ಹೊಡೆಯಲು ಯತ್ನಿಸಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪಾಕಿಸ್ತಾನ ಮತ್ತು ಅಫ್ಘಾನ್ ನಡುವಿನ ಪಂದ್ಯವು ರೋಚಕ ಹಂತದತ್ತ ಸಾಗಿದ ವೇಳೆಯಲ್ಲಿ ಆಸಿಫ್ ಅಲಿ ವಿಕೆಟ್ ಪಡೆದ ಫರೀದ್ ಅಹಮದ್ ಅಗ್ರೆಸ್ಸಿವ್ ಆಗಿ ಬ್ಯಾಟರ್ ಬಳಿಯೇ ತೆರಳಿ ಸಂಭ್ರಮಿಸಿದ್ದು ಇದರಿಂದ ತಾಳ್ಮೆಯನ್ನ ಕಳೆದುಕೊಂಡ ಪಾಕ್ ಆಟಗಾರ ಅಸಿಫ್ ಅಲಿ ಆತನನ್ನು ನೂಕಿದ್ದಲ್ಲದೆ ಬ್ಯಾಟ್ನಿಂದ ಹೊಡೆಯುವಂತೆ ಬೀಸಿದ್ದಾರೆ. ತಕ್ಷಣವೇ ಅಂಪೈರ್ ಹಾಗೂ ಅಫ್ಘಾನಿಸ್ತಾನ ಆಟಗಾರರ ಎಂಟ್ರಿಯಿಂದ ದೊಡ್ಡ ಅನಾಹುತ ತಪ್ಪಿದ್ದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಿತು. ಹೌದು ಅಫ್ಘಾನ್ ಪರ ಉತ್ತಮ ಆರಂಭ ನೀಡುವ ಸೂಚನೆ ನೀಡಿತಾದರೂ ಪಾಕ್ ಬೊಂಬಾಟ್ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನ್ ಕಡಿಮೆ ಮೊತ್ತಕ್ಕೆ ಕುಸಿಯಿತು.
ಇನ್ನು 130ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಮೊದಲ ಓವರ್ನಲ್ಲೇ ನಾಯಕ ಬಾಬರ್ ಅಜಮ್ ವಿಕೆಟ್ ಕಳೆದುಕೊಂಡ ಕೆಟ್ಟ ಆರಂಭ ಪಡೆಯಿತಾದರೂ 10 ಓವರ್ ಮುಕ್ತಾಯಕ್ಕೆ ಸೂಕ್ತ ಹಂತಕ್ಕೆ ತಲುಪಿತ್ತು. ಮೂರು ವಿಕೆಟ್ ನಷ್ಟಕ್ಕೆ 83ರನ್ ಕಲೆಹಾಕಿದ್ದ ಪಾಕಿಸ್ತಾನ ನಾಟಕೀಯ ಕುಸಿತ ಕಾಣುವ ಮೂಲಕ ಸೋಲಿನ ಬಲೆಗೆ ಬಿದ್ದಿತು. ಆದರೆ ಅಂತಿಮ ಓವರ್ನಲ್ಲಿ ಬೌಲರ್ ನಸೀಮ್ ಶಾ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಾಕ್ಗೆ ರೋಚಕ ಗೆಲುವು ತಂದುಕೊಟ್ಟಿದ್ದು ಈ ಮೂಲಕ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ತಲುಪಿತು. ಆದರೆ ಇದಕ್ಕೂ ಮುನ್ನ ನಸೀಮ್ ಶಾ ಅಬ್ಬರಕ್ಕೆ ಹಾಗೂ ಗೆಲುವಿನ ಬಳಿಕ ಅಗ್ರೆಸ್ಸಿವ್ ಸಂಭ್ರಮಕ್ಕೆ ಪ್ರಮುಖ ಕಾರಣವಿದ್ದು ಪಾಕ್ ಬೌಲರ್ ಆಸಿಫ್ ಅಲಿ 16 ರನ್ಗಳಿಸಿ ಫರೀದ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದ ವೇಳೆಯಲ್ಲಿ ಬೌಲರ್ಗೂ ಮತ್ತು ಬ್ಯಾಟರ್ಗೂ ದೊಡ್ಡ ಮಟ್ಟಿನ ವಾಗ್ವಾದಕ್ಕೆ ಕಾರಣವಾಯಿತು..
ಪಾಕಿಸ್ತಾನದ ಆಟಗಾರ ಆಸಿಫ್ ಅಲಿ ತನಗೆ ಸೆಂಡ್ ಆಫ್ ನೀಡಲು ಬಂದಿದ್ದ ಎದುರಾಳಿ ಬೌಲರ್ಗೆ ಇನ್ನೇನು ಬ್ಯಾಟ್ನಿಂದ ಬಾರಿಸಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಇಬ್ಬರ ನಡುವೆ ತಿಕ್ಕಾಟ ನಡೆದಿದ್ದು ಆಸಿಫ್ ಅಲಿ ತೋರಿದ ವರ್ತನೆಯು ಪಾಕ್ನ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಬ್ಯಾಟ್ ಬೀಸಿದ್ದ ಘಟನೆಯನ್ನ ನೆನಪಿಸಿತು. ಆದರೆ ಅಫ್ಘಾನ್ ಆಟಗಾರರ ಮಧ್ಯ ಪ್ರವೇಶದಿಂದಾಗಿ ಇಬ್ಬರ ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪುವುದು ತಪ್ಪಿದ್ದು ತನಗೆ ಸೆಂಡ್ ಆಫ್ ನೀಡಲು ಬಂದಿದ್ದ ಬೌಲರ್ ಅನ್ನು ಕಂಡು ಆಸಿಫ್ ಅಲಿಗೆ ಕೆರಳಿದ್ದು ಫರೀದ್ಗೆ ಗುದ್ದಲು ಪ್ರಯತ್ನಿಸಿದರು ಮತ್ತು ಫರೀದ್ಗೆ ಬ್ಯಾಟ್ನಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದರು. ಜಾವೇದ್ ಮಿಯಾಂದಾದ್ ಅವರು ಟೆಸ್ಟ್ ಪಂದ್ಯದ ಸಮಯದಲ್ಲಿ ಡೆನ್ನಿಸ್ ಲಿಲ್ಲಿಯನ್ನು ಬ್ಯಾಟ್ನಿಂದ ಹೊಡೆಯಲು ಯತ್ನಿಸಿದ್ದು ಆ ಹಳೆಯ ಘಟನೆಯು ಕಣ್ಣ ಮುಂದೆ ಬಂದಿದ್ದಲ್ಲದೆ. ಅಂಪೈರ್ಗಳು ಅಫ್ಘಾನ್ ಆಟಗಾರರು ಮತ್ತು ಪಾಕಿಸ್ತಾನಿ ಬ್ಯಾಟರ್ ಎಂಟ್ರಿಯಿಂದ ಇಬ್ಬರು ದೂರ ಸರಿದರು. ಆದರೆ ಈ ಇಬ್ಬರು ಆಟಗಾರರ ವರ್ತನೆಯು ಐಸಿಸಿ ನಿಯಮಗಳನ್ನ ಮೀರಿದ್ದು,ಮ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಯಾವ ರೀತಿಯ ದಂಡ ವಿಧಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
— pant shirt fc (@shirt_fc) September 7, 2022